Advertisement

ಅತಿಥಿ ಅಂಗಳ: ಆಸಕ್ತಿಯನ್ನು ಮೊಳಕೆಯೊಡೆಯಲು ಬಿಡಿ

11:17 AM Jul 10, 2020 | mahesh |

ಕಲೆ ಇಲ್ಲದ ಮನುಷ್ಯ ಬಾಲ, ಕೋಡುಗಳಿಲ್ಲದ ಪ್ರಾಣಿ ಎಂಬ ಉಕ್ತಿ ಇದೆ. ಇಂದಿನ ತಲೆಮಾರು ಕೇವಲ ಅಂಕಗಳ ಹಿಂದೆ ಬಿದ್ದು ಕಣ್ಣಿಗೆ ಪಟ್ಟಿ ಕಟ್ಟಿದ ಕುದುರೆಯಂತಾಗಿದೆ. ಅವರ ಕಣ್ಣ ಮುಂದಿರುವ ಗುರಿ ತೊಂಬತ್ತರ ಮೇಲೆ ಅಂಕಗಳನ್ನು ಗಿಟ್ಟಿಸುವುದು.

Advertisement

ಬಾಲ್ಯದಿಂದಲೇ ಭವಿಷ್ಯದ ತಯಾರಿ ಪ್ರಾರಂಭವಾಗುತ್ತದೆ. ಮೂರು ವರ್ಷ ಕಳೆಯುತ್ತಿದ್ದಂತೆಯೇ ಮಗುವಿನ ಬೆನ್ನಿಗೆ ಪುಸ್ತಕಗಳ ಹೊರೆ ಬೀಳುತ್ತದೆ. ಇದರಿಂದ ದೈಹಿಕ, ಮಾನಸಿಕ ಒತ್ತಡ ಜಾಸ್ತಿಯಾಗುತ್ತ ಹೋಗುತ್ತದೆ. ಆಡಿ ನಲಿಯಬೇಕಾದ ಕೈ ಕಾಲುಗಳಿಗೆ ಓದು-ಬರೀ ಟ್ಯೂಷನ್‌, ಪ್ರಾಜೆಕ್ಟ್ ವರ್ಕ್‌ ಗಳೆಂಬ ಕಿರಿ-ಕಿರಿಗಳ ಕೋಳವನ್ನು ತೊಡಿಸುತ್ತವೆ. ಹೀಗಾಗಿ ಮಗುವಿನ ಆಸಕ್ತಿ ಯಾವುದರ ಕಡೆಗಿದೆ ಎಂದು ಪಾಲಕರು ತಿಳಿದುಕೊಳ್ಳುವುದೇ ಇಲ್ಲ. ಅವರಲ್ಲಿ ಅಡಗಿದ ಕ್ರೀಡೆ, ಚಿತ್ರಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿನ ಆಸಕ್ತಿ ಮೊಳಕೆಯೊಡೆಯುವುದರಲ್ಲಿಯೇ ಹಿಸುಕಲ್ಪಡುತ್ತದೆ. ಪ್ರತಿ ಮಗುವೂ ಬಾಲ್ಯದಲ್ಲಿ ಚಿತ್ರ ಬರೆಯುವುದರಲ್ಲಿ ಆಸಕ್ತಿ ತೋರಿಸುತ್ತದೆ. ಇಂದಿನ ಪಾಲಕರು ಚಿತ್ರ ಬಿಡಿಸುವುದೆಂದರೆ ಸಮಯದ ದುರುಪಯೋಗ ಎಂದು ಕೊಳ್ಳುತ್ತಾರೆ. ಮಗುವಿನ ಕೈಯಿಂದ ಬಣ್ಣವನ್ನು ಕಸಿದುಕೊಂಡು ಮಗುವಿನ ಭವಿಷ್ಯವನ್ನೇ ಬಣ್ಣಗೇಡು ಮಾಡುತ್ತಾರೆ.

ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಇನ್ನಿತರ ಆರೋಗ್ಯಕರ ಹವ್ಯಾಸಗಳು ಪಠ್ಯೇತರ ಚಟುವಟಿಕೆಗಳು ಎನಿಸಿಕೊಳ್ಳುತ್ತವೆ‌ ಮನಸ್ಸು ಪ್ರಫ‌ುಲ್ಲಗೊಳ್ಳುತ್ತದೆ. ಹೆಚ್ಚೆಚ್ಚು ಸ್ನೇಹಿತರ ಕೂಟ ಬೆಳೆಯುತ್ತದೆ. ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ.

ಕೇವಲ ಅಂಕ ಗಳಿಕೆಯೊಂದೇ ಜೀವನದ ಗುರಿಯಾಗಿರಬಾರದು. ಇತ್ತೀಚಿನ ದಿನಗಳಲ್ಲಿ ಕಲೆಗೆ ಸಾಕಷ್ಟು ಅವಕಾಶಗಳಿವೆ. ಮಾತ್ರವಲ್ಲದೆ ಕಲೆಗೂ ಬೆಲೆ ಸಿಗತೊಡಗಿದೆ. ಹೀಗಾಗಿ ಕಲೆಯಲ್ಲಿ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ನಮ್ಮ ಭವಿಷ್ಯಕ್ಕೆ ಅನುಕೂಲವಾಗಿದ್ದು, ಸದುಪಯೋಗಗೊಳ್ಳಲಿ.


ಚಂದ್ರಕೇಸರಿ ಹೊಳೆಹೊನ್ನೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next