Advertisement

ಯೋಜನೆಯ ಅನುಷ್ಠಾನ ಸಮರ್ಪಕವಾಗಿರಲಿ

05:29 PM Dec 06, 2018 | |

ಭದ್ರಾವತಿ: ಸರ್ಕಾರದಿಂದ ವಿವಿಧ ಕಾಮಗಾರಿ ಯೋಜನೆಗಳಿಗೆ ಹಣ ಮಂಜೂರು ಮಾಡಿಸಿಕೊಂಡು ಬರುವವರು ಚುನಾಯಿತ ಪ್ರತಿನಿಧಿಗಳಾದ ಶಾಸಕರು. ಆದರೆ ಅಧಿಕಾರಿಗಳು ಯೋಜನೆಯ ಅನುಷ್ಠಾನ ಮಾಡುವಾಗ ಶಾಸಕರನ್ನು ಗಣನೆಗೆ ತೆಗೆದುಕೊಳ್ಳದೆ ಬೇಕಾಬಿಟ್ಟಿ ಕಾರ್ಯ ಮಾಡುವುದು ಸರಿಯಲ್ಲ ಎಂದು ಶಾಸಕ ಬಿ.ಕೆ. ಸಂಗಮೇಶ್‌ ಹೇಳಿದರು.

Advertisement

ಬುಧವಾರ ನಗರದ ತಾಪಂ ಸಭಾಂಗಣದಲ್ಲಿ ಕರೆಯಲಾಗಿದ್ದ ವಿವಿಧ ಇಲಾಖೆಗಳ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕಾರ್ಯ ನಿರ್ವಹಿಸಲು ನಮ್ಮ ಆಕ್ಷೇಪವಿಲ್ಲ. ಆದರೆ ಅನಗತ್ಯವಾಗಿ ವ್ಯಾಪಾರಸ್ಥರಿಗೆ ಕಿರುಕುಳ ನೀಡಬಾರದು ಎಂಧು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ ಹೇಳಿದರು.

ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಮಾಡಲ್ಪಡುತ್ತಿರುವ ಕಾಮಗಾರಿ ವಿವರವನ್ನು ನೀರಾವರಿ ಇಲಾಖೆ ಅಧಿಕಾರಿಗೆ ಕೇಳಿದ ಶಾಸಕರು, ಜಿಪಂ ಸದಸ್ಯರನ್ನು ಮಾತ್ರ ಕಾಮಗಾರಿ ಪೂಜೆ ಮತ್ತಿತರ ಕಾರ್ಯಗಳಿಗೆ ಕರೆದಿರುತ್ತೀರಿ. ಆದ್ದರಿಂದ ಅದನ್ನು ರದ್ದುಪಡಿಸಿ ಹೊಸದಾಗಿ ಕಾಮಗಾರಿ ಪೂಜೆ ಮಾಡುವಂತೆ ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಜೆಡಿಎಸ್‌ ಮುಖಂಡ ಹಾಗೂ ಜಿಪಂ ಸದಸ್ಯ ಯೋಗೇಶ್‌ ಮಧ್ಯ ಪ್ರವೇಶಿಸಿ ಈ ಯೋಜನೆಯನ್ನು ಹಿಂದಿನ ಶಾಸಕರ ಅವಧಿಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಆದ್ದರಿಂದ ಕಾನೂನಿನ ನಿಯಮಾನುಸಾರ ಕಾಮಗಾರಿಗೆ ಚಾಲನೆ ದೊರೆತಿದೆ. ನಿಯಮಾವಳಿಯಲ್ಲಿ ಆರೀತಿ ರದ್ದುಪಡಿಸಿ ಹೊಸದಾಗಿ ಮಾಡಲು ಅವಕಾಶವಿಲ್ಲ. ಇದನ್ನು ಅಧಿಕಾರಿಗಳು ಶಾಸಕರಿಗೆ ಸ್ಪಷ್ಟವಾಗಿ ಹೇಳಿ ಎಂದು ಶಾಸಕರ ಮಾತಿಗೆ ತಿರುಗೇಟು ನೀಡಿದರು. ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್‌ ನಾಯ್ಕ ವಿವಿಧ ಇಲಾಖೆಗಳ ಅಧಿಕಾರಿಗಳು ಒಪ್ಪಿಸಿದ ಪ್ರಗತಿಯ ಕಾರ್ಯವನ್ನು ಆಲಿಸಿ ಅಧಿಕಾರಿಗಳು ಸರ್ಕಾರದ ಯೋಜನೆಗಳಿಗೆ ಬರುವ ಅನುದಾನದ ಹಣವನ್ನು ಸಮರ್ಪಕವಾಗಿ ವಿನಿಯೋಗಿಸಬೇಕು ಮತ್ತು ಆ ರೀತಿ ವಿನಿಯೋಗಿಸುವ ಮುನ್ನ ಚುನಾಯಿತ ಜನಪ್ರತಿನಿಧಿಗಳ್ಳೋಂದಿಗೆ ಚರ್ಚಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.

ಜಿಪಂ ಸದಸ್ಯರ ಕಡೆಗಣನೆ: ಜಿಪಂ ಅಧ್ಯಕ್ಷೆ ಜ್ಯೋತಿ ಎಸ್‌. ಕುಮಾರ್‌ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಆರಂಭದ ಶಂಕುಸ್ಥಾಪನೆ ಉದ್ಘಾಟನೆಗೆ ತಹಶೀಲ್ದಾರ್‌ ಅವರು ಜಿಪಂ ಸದಸ್ಯರನ್ನು ಕರೆಯುವ ಸಂಪ್ರದಾಯ ಕೈ ಬಿಟ್ಟು ಕೇವಲ ಶಾಸಕರನ್ನು ಮಾತ್ರ ಕರೆದುಕೊಂಡು ಕೆಲಸ
ಮಾಡುತ್ತಿರುವುದು ಜಿಪಂ ಸದಸ್ಯರಿಗೆ ಮಾಡುತ್ತಿರುವ ಅಪಮಾನವಾಗಿದೆ. ಇದಕ್ಕೆ ತಹಶೀಲ್ದಾರ್‌ ಉತ್ತರಿಸಬೇಕು ಎಂದು ಆಗ್ರಹಿಸಿದರು.

Advertisement

ಶಿಕ್ಷಣ ಇಲಾಖೆಯ ಪ್ರಗತಿ ಬಗ್ಗೆ ವಿವರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್‌ ಮಕ್ಕಳಿಗೆ ಸಮವಸ್ತ್ರ, ಶೂ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಜಿಪಂ ಅಧ್ಯಕ್ಷೆ ಈ ಸಂದರ್ಭದಲ್ಲಿ ಮಾತನಾಡಿ ಮಕ್ಕಳಿಗೆ ಶಾಲೆಯ ಆರಂಭಕ್ಕೆ ಮುನ್ನ ಸರಿಯಾದ ವೇಳೆ ಅದನ್ನು ಒದಗಿಸುವ ವ್ಯವಸ್ಥೆ ಮಾಡಿ ಎಂದರು. 

ಶಿಕ್ಷಣ ಇಲಾಖೆ: ಶಾಲೆಗಳ ದುರಸ್ಥಿಗೆ ಕಟ್ಟಡಕ್ಕೆ ಬಿಡುಗಡೆಯಾದ ಹಣವನ್ನು ನೇರವಾಗಿ ಎಸ್‌ಡಿಎಂಸಿ ಸಮಿತಿ ಖಾತೆಗೆ ಹೋಗುತ್ತಿರುವುದರಿಂದ ಅದರ ಕಾರ್ಯವನ್ನು ಆ ಸಮಿತಿ ಮಾಡುತ್ತದೆ ಎಂದ ಶಿಕ್ಷಣಾಧಿಕಾರಿಗಳ ಮಾತಿಗೆ ಶಾಸಕ ಅಶೋಕ್‌ ನಾಯ್ಕ ಹಾಗೂ ಜಿಪಂ ಸದಸ್ಯ ಯೋಗೇಶ್‌ ಆಕ್ಷೇಪ ವ್ಯಕ್ತಪಡಿಸಿ ಲಕ್ಷಾಂತರ ರೂ. ಅನುದಾನವನ್ನು ಆರೀತಿ ಅನುಭವವಿಲ್ಲದವರು ಹೇಗೆ ಖರ್ಚು ಮಾಡಲು ಸಾಧ್ಯ. ಆದ್ದರಿಂದ ಅನುದಾನದ ಸದ್ಬಳಕೆಯ ಬಗ್ಗೆ ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸರಿಯಾಗಿ ವಿನಿಯೋಗಿಸಬೇಕು ಎಂದರು.

ಆರೋಗ್ಯ ಇಲಾಖೆ: ಕ್ಷೇತ್ರದಲ್ಲಿ ಡೆಂಘೀ 26 ಪ್ರಕರಣ,ಚಿಕೂನ್‌ಗೂನ್ಯ 24 ಪ್ರಕರಣ ಪತ್ತೆಯಾಗಿದೆ. ಅವುಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಗುಡದಪ್ಪ ಕಸಬಿ ಹೇಳಿದರು. ಶಾಸಕ ಅಶೋಕ್‌ ನಾಯ್ಕ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯರ ಕೊರತೆ ಇಲ್ಲದಂತೆ ನೋಡಿಕೊಳ್ಳಿ ಎಂದರು. ತಾಪಂ ಅಧ್ಯಕ್ಷೆ ಯಶೋದಮ್ಮ, ತಹಶೀಲ್ದಾರ್‌ ನಾಗರಾಜ್‌ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next