ಬಾದಾಮಿ: ಪ್ರತಿ ವರ್ಷ ವಿಕ್ರಮ ಪೈಲ್ ಪ್ರತಿಷ್ಠಾನ ಪ್ರತಿಭಾವಂತರನ್ನು ಹಾಗೂ ಕೃಷಿಕರನ್ನು ಹಾಗೂ ಪರಿಸರ ಸಾಧಕರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸಿ ಸನ್ಮಾನ ಮಾಡುತ್ತಿರುವ ಈ ಕಾರ್ಯಕ್ರಮದಿಂದ ಪ್ರತಿಯೊಬ್ಬರು ನಿಮ್ಮ ತಂದೆ, ತಾಯಿ ಹೆಸರಿನಲ್ಲಿ ಇಂಥ ಕಾರ್ಯಕ್ರಮ ಜರುಗಲಿ ಹಾಗೂ ಸನ್ಮಾನ ಪಡೆದವರು ಸನ್ಮಾನ ಮಾಡುವಂತಾಗಲಿ ಎಂದು ನಿಸರ್ಗ ಚಿಕಿತ್ಸಕ ಡಾ.ಎಚ್.ಟಿ.ಮಳಲಿ ಹೇಳಿದರು.
ನಗರದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಶನಿವಾರ ವಿಕ್ರಮ ಪೈಲ್ ಪ್ರತಿಷ್ಠಾನ ವತಿಯಿಂದ 9ನೇ ವರ್ಷದ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಆವರು ಸಂಸ್ಥೆಯ ಅಧ್ಯಕ್ಷ ಡಿ.ಎಂ.ಪೈಲ್ ತಮ್ಮ ಮಗ ದಿ.ವಿಕ್ರಮ ನೆನಪು ಹಾಗೂ ಅವನ ಜೀವನದಲ್ಲಿ ಮತ್ತೂಬ್ಬರಿಗೆ ಸಹಾಯ ಮಾಡುವ ಗುಣವನ್ನು ಈ ಸಂಸ್ಥೆಯ ಮುಖಾಂತರ ಸಾಧನೆ ಮಾಡಿದ ರೈತರಿಗೆ, ವಿದ್ಯಾರ್ಥಿಗಳಿಗೆ , ಸಮಾಜಸೇವೆ, ಶಿಕ್ಷಣದಲ್ಲಿ ಸಾಧನೆ ಹೀಗೆ ಹಲವಾರು ಸಾಧಕರಿಗೆ ಪ್ರಶಸ್ತಿ ಹಾಗೂ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪರಿಸರ ಪ್ರೇಮಿ ಪಿ.ಡಿ.ವಾಲಿಕಾರ ಮಾತನಾಡಿ, ನಾನು ಪರಿಸರ ಬಗ್ಗೆ ಕಾಳಜಿ ವಹಿಸಿ ಹಲವಾರು ಲೇಖನ ಬರೆದಿದ್ದೇನೆ. ಅದನ್ನು ಗುರುತಿಸಿ ನನ್ನನ್ನು ಸನ್ಮಾಸುತ್ತಿರುವುದು ನನಗೆ ಹಾಗೂ ಗ್ರಾಮದ ಹಿರಿಯರಿಗೆ ಹಾಗೂ ನನ್ನ ಗೆಳೆಯರಿಗೆ ಸಂತೋಷವಾಗಿದೆ ಎಂದರು. ಪ್ರತಿಷ್ಠಾನ ಅಧ್ಯಕ್ಷ ಡಿ.ಎಂ.ಪೈಲ್ ಅಧ್ಯಕ್ಷತೆ ವಹಿಸಿದ್ದರು. ಆಳಂದ-ನಂದವಾಡಗಿ-ಜಾಲವಾದಿ ಮಹಾಂತೇಶ್ವರ ಸಂಸ್ಥಾನ ಮಠದ ಚನ್ನಬಸವ ದೇವರು ಹಾಗೂ ಎರೆ ಹೊಸಳ್ಳಿ ರಡ್ಡಿ ಗುರು ಪೀಠದ ವೇಮನಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.
ವೇಮನ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಜಮಖಂಡಿ ತಾಲೂಕಿನ ವೆಂಕಣ್ಣ ಭರಗಿ (ಕೃಷಿ) ತಾಲೂಕಿನ ಲಕ್ಕಸಕೊಪ್ಪ ಗ್ರಾಮದ ಸಾಹಿತಿ ಹಾಗೂ ಶಿಕ್ಷಣ ಪರಿಸರ ಪ್ರೇಮಿ ಪಿ.ಡಿ.ವಾಲಿಕಾರ ಅವರಿಗೆ ಪುರಸ್ಕಾರ ನೀಡಿ ಗೌರವಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹನುಮಂತ ನಕ್ಕರಗುಂದಿ, ದ್ವಿತೀಯ ಪೂಜಾ ಶೇಬಿನಕಟ್ಟಿ, ತೃತೀಯ ಸ್ಥಾನ ಪಡೆದ ಅಪೂರ್ವಾ ಶಿಪ್ರಿ ಮತ್ತು ದ್ವಿತೀಯ ಪಿಯುನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಅದಿತಿ ಸಿಂಗ್ರಿ ಮತ್ತು ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಅಂಜಲಿ ಪವಾರ, ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿಜಯಲಕ್ಷ್ಮಿ ಲಕ್ಕುಂಡಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಎಂ.ಬಿ. ಪಾಟೀಲ, ಶಿವಣ್ಣ ಅಮತಪ್ಪನವರ, ಟಿ.ಎಸ್. ಗಂಗಲ್ಲ, ವಿಜಯಕುಮಾರ ದೇಸಾಯಿ, ಬಿ.ಎಸ್. ಕರಡಿ, ಸಿ.ವಿ. ಚನವೀರಗೌಡರ, ಪ್ರಕಾಶ ಕುಬಸದ, ಮಹಾಂತೇಶ ಹೊಸಕೇರಿ ಇತರರು ಹಾಜರಿದ್ದರು.