Advertisement
ಜಾಗತಿಕ ಸಾರಸ್ವತ್ ಸಂಗಮ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದ ಅವರು ನಾವು ಕಾಶ್ಮೀರಿ ಪಂಡಿತರು ಎಂಬ ವಿಷಯದ ಕುರಿತು ಮಾತನಾಡಿದ ಅವರು, ಸುಮಾರು 4,000 ವರ್ಷಗಳ ಇತಿಹಾಸದ ಕಾಶ್ಮೀರದ ಹಿಂದೂ ಸಾಮ್ರಾಜ್ಯವು 1339ರಲ್ಲಿ ಮುಸ್ಲಿಮರ ಆಳ್ವಿಕೆಗೆ ಒಳಪಟ್ಟಿತು. 480 ವರ್ಷಗಳ ಕಾಲ ಆಡಳಿತ ನಡೆಸಿದ ಸುಲ್ತಾನರು ಕಾಶ್ಮೀರದ ಪುರಾತನ ಹಿಂದೂ ನಾಗರಿಕತೆಯನ್ನು ಮತ್ತು ಸಾರಸ್ವತ ಹಿಂದೂ ಸಮುದಾಯವನ್ನು ನಾಶ ಮಾಡಿದರು. 1990ರ ವೇಳೆಗೆ ಜಮ್ಮು ಮತ್ತು ಕಾಶ್ಮೀರವು ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತದ ಅವಿಭಾಜ್ಯ ಭಾಗವಾಗಿದ್ದ ಸಂದರ್ಭದಲ್ಲಿಯೇ ಕಾಶ್ಮೀರದ ಸಾರಸ್ವತರ ನರಮೇಧ ಮತ್ತು ಜನಾಂಗೀಯ ಹಿಂಸೆ ನಡೆದು ಇದೀಗ 4 ಲಕ್ಷ ಮಂದಿ ಸಾರಸ್ವತ ಹಿಂದೂಗಳು ನಿರಾಶ್ರಿತರಾಗಿದ್ದಾರೆ. ಇದುವರೆಗೆ ಯಾವುದೇ ಪ್ರಾದೇಶಿಕ ಅಥವಾ ರಾಷ್ಟ್ರೀಯ ರಾಜಕೀಯ ಪಕ್ಷಗಳು ಅವರಿಗೆ ನೆರವಾಗುವ ಯಾವುದೇ ಪ್ರಯತ್ನ ನಡೆಸಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು.
ನಿರಾಶ್ರಿತರಾಗಿ ವಿವಿಧೆಡೆ ಚದುರಿ ಹೋಗಿರುವ ಈ ಕಾಶ್ಮೀರಿ ಸಾರಸ್ವತ ಹಿಂದೂಗಳ ಸಂಕಷ್ಟಗಳಿಗೆ ದೇಶದ ಸಮಗ್ರ ಸಾರಸ್ವತ ಸಮುದಾಯ ಸ್ಪಂದಿಸ ಬೇಕು. ಹಾಗೆಯೇ ಕಾಶೀ ಮಠಾಧಿಪತಿ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಕೂಡ 1990ರ ನರಮೇಧ ಮತ್ತು ಜನಾಂಗೀಯ ಹಿಂಸೆಯಿಂದ ಸಂಕಷ್ಟಕೊಳ್ಳಗಾಗಿ ನಿರಾಶ್ರಿತರಾಗಿರುವ ಸಾರಸ್ವತ ಹಿಂದೂಗಳ ಸಂಕಷ್ಟಗಳನ್ನು ಅರಿತು, ವಿಶ್ಲೇಷಣೆ ನಡೆಸಿ ಪರಿಹಾರ ಕ್ರಮಗಳನ್ನು ಸೂಚಿಸಲು 5 ಮಂದಿ ಸದಸ್ಯರ ಸಮಿತಿಯನ್ನು ರಚಿಸ ಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ:ಒಂದೇ ದಿನದಲ್ಲಿ ಕೇಸ್ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು
Related Articles
ಜಾಗತಿಕ ಸಾರಸ್ವತ್ ಸಂಗಮವನ್ನು ವಾರಣಾಸಿಯ ಶ್ರೀ ಕಾಶೀಮಠ ಸಂಸ್ಥಾನದ ಶ್ರೀಮತ್ ಸಂಯಂಮೀಂದ್ರ ತೀರ್ಥ ಸ್ವಾಮೀಜಿ ಅವರು ಉದ್ಘಾಟಿಸಿದರು. ಆಬಳಿಕ ನಡೆದ ವಿಚಾರ ಗೋಷ್ಠಿಯಲ್ಲಿ ಡಾ| ಅಜಯ್ ಚುರುಂಗ್ ಅವರು ಕಾಶ್ಮೀರದಿಂದ ಸಾರಸ್ವತರ ನಿರ್ಗಮನ – ಕಲಿಯಬೇಕಾದ ಪಾಠ, ಆರತಿ ಟಿಕ್ಕೂ ಅವರು ಸ್ಥಳಾಂತರಿಸಲಾದ ಕಾಶ್ಮೀರಿ ಹಿಂದೂಗಳ ಅನನ್ಯತೆ ಮತ್ತ ಸ್ವ ಜಾಗೃತಿ, ಶೆಫಾಲಿ ವೈದ್ಯ ಅವರು ರಾಷ್ಟ್ರ ನಿರ್ಮಾಣದಲ್ಲಿ ಸಾರಸ್ವತರ ಪಾತ್ರ, ದಿನೇಶ್ ಕಾಮತ್ ಅವರು ಸಂಸ್ಕೃತ – ಮಾತೃ ಭಾಷೆ , ರಾಕೇಶ್ ಕೌಲ್ ಅವರು ಶಾರದಾ ಲಿಪಿ – ಸಾರಸ್ವತರ ಬದುಕಿನಲ್ಲಿ ಮಹತ್ವ, ಲೆಫ್ಟಿನೆಂಟ್ ಪ್ರೀತಿ ಮೋಹನ್ ಅವರು ಉತ್ತರ ಭಾರತದ ಮೊಹ್ಯಾಲ್ ಸಾರಸ್ವತ್, ವೇದಮೂರ್ತಿ ಸುಧಾಕರ್ ಭಟ್ ಅವರು ಸಾರಸ್ವತರ ಏಕತೆಯಲ್ಲಿ ಸಾರಸ್ವತ ಮಠಗಳ ಪಾತ್ರ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.
Advertisement
ಇದೇ ವೇಳೆ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಕಾಶ್ಮೀರ ಯಾತ್ರೆ ಕುರಿತ ಪುಸ್ತಕ ಸಾರಸ್ವತ್ ಅವೇಕನಿಂಗ್ ಬಿಡುಗಡೆ ಮಾಡಲಾಯಿತು.