Advertisement

ಸರ್ಕಾರಿ ಸೌಲಭ್ಯ ಸದ್ಬಳಕೆಯಾಗಲಿ

01:15 PM Apr 19, 2022 | Team Udayavani |

ಆಳಂದ: ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆ ನಿಟ್ಟಿನಲ್ಲಿ ಸರ್ಕಾರದಿಂದ ಹಲವಾರು ಸೌಲಭ್ಯ ನೀಡಲಾಗುತ್ತಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದು ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ ಹೇಳಿದರು.

Advertisement

ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ಕಂದಾಯ ಇಲಾಖೆ ಆಯೋಜಿಸಿದ್ದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಯೋವೃದ್ಧರಿಗೆ ರಾಷ್ಟ್ರೀಯ ಭದ್ರತಾ ಯೋಜನೆಯಡಿ ಅಂಗವಿಕಲ, ವಿಧವೆಯರಿಗೆ ಮಾಸಾಶನ ನೀಡಲಾಗುತ್ತಿದೆ. ಮಧ್ಯವರ್ತಿಗಳ ಮೊರೆ ಹೋಗದೇ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಕೆಲಸ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮಸ್ಥರು ನೀರಿನ ಸಮಸ್ಯೆ ಕುರಿತು ತಹಶೀಲ್ದಾರ್‌ ಗಮನಕ್ಕೆ ತಂದಾಗ, ತಕ್ಷಣವೇ ಕ್ರಮ ಕೈಗೊಂಡು ನೀರು ಒದಗಿಸಬೇಕು ಎಂದು ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದಿಂದ ಅಧಿಕಾರಿಗಳು ಹಳ್ಳಿಗೆ ಬರುವುದರಿಂದ ಸಮಸ್ಯೆಗಳನ್ನು ಆಲಿಸಲು ಅನುಕೂಲವಾಗುತ್ತಿದೆ. ಜತೆಗೆ ಜನಸಾಮಾನ್ಯರಿಗೆ ಸ್ಥಳದಲ್ಲೇ ಸೌಲಭ್ಯ ದೊರೆಯುತ್ತಿದೆ ಎಂದರು.

Advertisement

ಗ್ರಾಪಂ ಅಧಕ್ಷೆ ಮಹಾದೇವಿ ಪೂಜಾರಿ, ಉಪಾಧ್ಯಕ್ಷೆ ಜೋತಿ ಕದಂ, ನಾಡ ತಹಶೀಲ್ದಾರ್‌ ದಯಾನಂದ, ಕಂದಾಯ ನಿರೀಕ್ಷಕ ರಾಜಕುಮಾರ ಸರಸಂಬಿ, ಗ್ರಾಮ ಲೆಕ್ಕಾ ಧಿಕಾರಿ ಭೀಮಾಶಂಕರ, ಪಿಡಿಒ ಚಿದಾನಂದ ಆಲೇಗಾಂವ, ರಾಜಕುಮಾರ ಮೂಲಗೆ, ಶ್ರೀಮಂತ ಜುಲ್ಪೆ, ಶ್ರೀಮಂತ ನಾಗೂರೆ, ಪರಮೇಶ್ವರ ಬನಸೋಡೆ, ಶರಣಪ್ಪ, ಮಲ್ಲಿಕಾರ್ಜುನ ಪಾಟೀಲ, ಮಹಾದೇವ ಮೋಘಾ, ಭೀಮರಾವ್‌ ದುದನಿ, ಪ್ರಕಾಶ ಜಮಾದಾರ ಇತರರು ಇದ್ದರು.

ವಿಧವಾ ವೇತನ, ಸಂಧ್ಯಾಸುರಕ್ಷ, ಅಂಗವಿಕಲ ಮಾಸಾಶನ ಸೇರಿದಂತೆ 36 ಫಲಾನುಭವಿಗಳಿಗೆ ಸ್ಥಳದಲ್ಲೇ ಆದೇಶಪ್ರತಿಯನ್ನು ತಹಶೀಲ್ದಾರ್‌ ವಿತರಿಸಿದರು. ಅರ್ಹ ಫಲಾನುಭವಿಗಳ ಪಡಿತರ ಚೀಟಿಗೆ ಹೆಸರು ಸೇರ್ಪಡೆ, ರಾಷ್ಟ್ರೀಯ ಭದ್ರತಾ ಯೋಜನೆಯಡಿ ಶವಸಂಸ್ಕಾರಕ್ಕೆ ಪರಿಹಾರ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next