Advertisement
ಎಲ್ಲರ ನಡುವೆ ಪ್ರೀತಿ, ವಿಶ್ವಾಸ, ಸಾಮರಸ್ಯ ಬರಲಿ ಎಂದು ಹಬ್ಬಗಳನ್ನು ಆಚರಿಸುತ್ತೇವೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಹಬ್ಬ ಸುಗಮವಾಗುವುದಕ್ಕೆ ಸೌಹಾರ್ದತೆ ಮುಖ್ಯ. ಇದಕ್ಕಾಗಿ ಉತ್ತರ ಕರ್ನಾಟಕದ ಸಾಕಷ್ಟು ಕಡೆ ಇತರೆ ಸಮುದಾಯದವರನ್ನು ಉತ್ಸವಗಳಿಗೆ ಆಮಂತ್ರಿಸುವ, ಜತೆಗೆ ಸೇರಿಸಿಕೊಂಡು ಉತ್ಸವ ಮಾಡು ಸಂಪ್ರದಾಯವಿದೆ. ಅಲ್ಲಿನ ಮುಸ್ಲಿಂ, ಕ್ರೈಸ್ತ, ಜೈನ ಸಮುದಾಯದವರು ಸಂತಸದಿಂದ ಬಂದು ಗಣೇಶ ಹಬ್ಬದಲ್ಲಿ ಭಾಗವಹಿಸುತ್ತಾರೆ.
Related Articles
Advertisement
ಇಂದಿನಿಂದ ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ: “ಶನಿವಾರದಿಂದ ನಗರದ ವಿವಿಧೆಡೆ ಇರುವ 63 ಉಪವಿಭಾಗಗಳದ ಸಾಹಾಯಕ ಕಾರ್ಯನಿರ್ವಹಕ ಎಂಜಿನಿಯರ್ (ಎಇಇ) ಕಚೇರಿಯಲ್ಲಿ àಕಗವಾಕ್ಷಿ ಅನುಮತಿಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯೇ ಪೊಲೀಸ್ ಇಲಾಖೆ, ಬೆಸ್ಕಾಂ, ಅಗ್ನಿಶಾಮಕ, ಬಿಬಿಎಂಪಿ ಅನುಮತಿ ಸಿಗಲಿದೆ. ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೂ ತೆರೆದಿರಲಿವೆ’ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.
ಮೊಬೈಲ್ ಟ್ಯಾಂಕ್ ಪಾರ್ಕಿಂಗ್ ಮಾಹಿತಿ ನೀಡಿ: “ಗಣೇಶ ವಿಸರ್ಜನೆಗೆಂದು ವಾರ್ಡ್‌ಗಳಲ್ಲಿ ನಿಲ್ಲಿಸುವ ಮೊಬೈಲ್ ಟ್ಯಾಂಕ್‌ಗಳನ್ನು ಎಲ್ಲಿ ನಿಲ್ಲಿಸಿರುತ್ತಾರೆ ಎಂಬ ಮಾಹಿತಿಯೇ ಇರುವುದಿಲ್ಲ. ನಿಲುಗಡೆ ಸ್ಥಳವನ್ನು ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಅಗತ್ಯ ಪ್ರಚಾರ ಮಾಡಬೇಕು’ ಎಂದು ಶ್ರೀರಾಂಪುರ ನಿವಾಸಿ ಶಿವಕುಮಾರ್ ಮನವಿ ಮಾಡಿದರು.
ಭಯಭೀತ ವಾತಾವರಣ ಏಕೆ?: “ಗಣೇಶ ಹಬ್ಬಕ್ಕೆ ವಿವಿಧ ನಿಯಮಗಳನ್ನು ಹಾಕುತ್ತೀರಾ? ಜತೆಗೆ ಅನಗತ್ಯವಾಗಿ ಭಯಭೀತ ವಾತಾವರಣ ಸೃಷ್ಟಿಸುತ್ತೀರಾ? ಹೊಸ ವರ್ಷ ಸಂದರ್ಭದಲ್ಲಿ ಮೋಜು, ಮಸ್ತಿ ಮಾಡುತ್ತಾರೆ, ನಿತ್ಯ ರಸ್ತೆಗಳಲ್ಲಿ ಬರ್ತ್ ಡೇ ಪಾರ್ಟಿ ಮಾಡುತ್ತಾರೆ ಅವುಗಳಿಗೆ ಯಾಕೆ ಕಡಿವಾಣ ಹಾಕುವುದಿಲ್ಲ ಎಂದು ರಾಜಾಜಿನಗರ ನಿವಾಸಿ ಗಜೇಂದ್ರ ಪ್ರಸಾದ್ ಪ್ರಶ್ನಿಸಿದರು.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡುವುದರಿಂದ ಹಾಗೂ ಈ ಹಿಂದೆ ಹಬ್ಬದ ವೇಳೆ ನಡೆದ ಅಹಿತಕರ ಘಟನೆಗಳ ಅನುಭವಗಳಿಂದಾಗಿ ಎಚ್ಚರವಹಿಸಲು ಈ ನಿಯಮಗಳನ್ನು ಪಾಲಿಸಲು ಹೇಳುತ್ತೇವೆ. ಒಂದು ದಿನ ಕೂರಿಸುವವರು ಸಿಸಿ ಕ್ಯಾಮೆರಾ ಜತೆಗೆ ಅಗ್ನಿ ನಂದಿಸುವ ಉಪಕರಣ ಹಾಗೂ ಮರಳನ್ನು ಇಡಬೇಕು ಎಂದರು.
ಡಿಜೆ ಅನುಮತಿ ನೀಡಲು ಮನವಿ – ನಿರಾಕರಣೆ: “ಈಗಾಗಲೇ ಮುಂಗಡ ಹಣ ನೀಡಿದ್ದು, ಇದೊಂದು ಬಾರಿ ಡಿಜೆ ಅನುಮತಿ ನೀಡಿ. ಕಡಿಮೆ ಸೌಂಡ್ ಇಡುತ್ತೇವೆ’ ಎಂದು ಕೆಲ ಸಂಘಗಳಿಂದ ಬಂದ ಮನವಿಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಡಿಜೆಯಿಂದ ಸಾಕಷ್ಟು ಶಬ್ದ ಮಾಲಿನ್ಯ ಉಂಟಾಗುತ್ತದೆ. ಉತ್ಸವ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮ ಮಾಡಿ, ಆರ್ಕೆಸ್ಟ್ರಾ ಕರೆಸಿ’ ಎಂದು ಸಲಹೆ ನೀಡಿದರು.