ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ
ರಾಜ್ಯದ ಆರ್ಥಿಕತೆಗೆ ತನ್ನದೇ ಕೊಡುಗೆ ನೀಡುವ ಮೂಲಕ ಕರಾವಳಿಯ ಆರ್ಥಿಕತೆಯನ್ನು ಸದೃಢವಾಗಿಸುವಲ್ಲಿ ಮೀನುಗಾರಿಕೆ ಪ್ರಮುಖ ಪಾತ್ರವಹಿಸುತ್ತಿದೆ. ಕಡಲ ಮೀನುಗಾರಿಕೆ ಮತ್ತು ಉಪ ಕಸುಬು ಗಳನ್ನು ಅವಲಂಬಿಸಿ ಸಾವಿರಾರು ಕುಟುಂಬಗಳು ಇವೆ. 2021-22ರಲ್ಲಿ 5.89 ಲಕ್ಷ ಮೆಟ್ರಿಕ್ ಟನ್ ಕಡಲ ಮೀನು ಉತ್ಪಾದನೆಯಾಗಿದೆ. ಕಡಲ ಮೀನುಗಾರಿಕೆಯಲ್ಲಿ 4,744 ಯಾಂತ್ರೀ ಕೃತ ದೋಣಿಗಳು, 10,084 ಮೋಟಾರು ದೋಣಿಗಳು ಹಾಗೂ 7,714 ಸಾಂಪ್ರದಾಯಿಕ ದೋಣಿಗಳಿವೆ. ಯಾಂತ್ರೀಕೃತ ದೋಣಿಗಳು ರಾಜ್ಯದ ಒಟ್ಟು ಕಡಲ ಮೀನು ಉತ್ಪಾದನೆಯ ಶೇ.85ಕ್ಕೂ ಅಧಿಕ ಪಾಲು ಹೊಂದಿವೆ. 1962.19 ಕೋಟಿ ಮೌಲ್ಯದ 1,20,427 ಮೆಟ್ರಿಕ್ ಟನ್ ಸಾಗರೋತ್ಪನ್ನಗಳನ್ನು 2021-22ರಲ್ಲಿ ಹೊರ ದೇಶ ಹಾಗೂ ರಾಜ್ಯಗಳಿಗೆ ರಫ್ತು ಮಾಡಲಾಗಿದೆ.
Advertisement
ಮೀನುಗಾರರ ಬಹುಪಾಲು ಬದುಕು ಕಡಲ ಮಧ್ಯೆ ದೋಣಿ ಯಲ್ಲೇ ಇರುತ್ತದೆ. ಮೀನುಗಾರರ ಅದೆಷ್ಟೋ ಬೇಡಿಕೆಗಳು ಈಡೇರದೆ ಉಳಿದುಕೊಂಡಿವೆ. ಈ ಬಾರಿಯ ಚುನಾವಣೆಯಲ್ಲಾದರೂ ರಾಜಕೀಯ ಪಕ್ಷಗಳ ಪ್ರಣಾಳಿಕೆ ಯಲ್ಲಿ ಮೀನುಗಾರರ ಪ್ರಮುಖ ಬೇಡಿಕೆಗಳು ಇರಲಿ ಮತ್ತು ಅದಕ್ಕೆ ಪರಿಹಾರವೂ ಸಿಗುವಂತಾಗಲಿ.
Related Articles
Advertisement
ಮೀನುಗಾರ ಮಹಿಳೆಯರಿಗೆ 50,000 ರೂ. ವರೆಗೆ ಬಡ್ಡಿರಹಿತ ಸಾಲ ಪುನರ್ ಆರಂಭಿಸಬೇಕು ಮತ್ತು ಈ ಹಿಂದೆ ಆಗಿರುವ ಮೀನುಗಾರರ ಸಾಲಮನ್ನಾ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗಬೇಕು.
ಎಲ್ಲ ಬಂದರುಗಳ ನಿರ್ವಹಣೆಗೆ ನಿರ್ದಿಷ್ಟ ಅನುದಾನವನ್ನು ಕಡ್ಡಾಯವಾಗಿ ಮೀಸಲಿಡಬೇಕು ಮತ್ತು ಮೀನುಗಾರಿಕೆಗೆ ನೀಡುವ ಒಟ್ಟಾರೆ ಅನುದಾನದ ಪ್ರಮಾಣವನ್ನು ಹೆಚ್ಚಿಸಬೇಕು.
ಭದ್ರತೆಯ ವಿಷಯವಾಗಿ ಎಲ್ಲ ಬಂದರುಗಳಲ್ಲೂ ಸಿಸಿ ಕೆಮರಾ ಅಳವಡಿಸಬೇಕು. ಮೀನುಗಾರರ ರಕ್ಷಣೆಗೆ ಸೀ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು.
ಸಮುದ್ರದ ಮಧ್ಯದಲ್ಲಿ ಮೀನುಗಾರರ ಮೇಲೆ ಹೊರ ರಾಜ್ಯದವರಿಂದ ಆಗುವ ಹಲ್ಲೆಯನ್ನು ತಡೆಯಲು ಕ್ರಮ ಆಗಬೇಕು. ಮೀನುಗಾರರಿಗೆ ಸರಕಾರದಿಂದ ನೀಡುವ ವಸತಿ ಯೋಜನೆಯ ಅನುದಾನ ಹೆಚ್ಚಳ ಮಾಡಬೇಕು.ಕಡಲಿನಲ್ಲಿ ಸುರಕ್ಷತೆಗೆ ಆದ್ಯತೆ ನೀಡಬೇಕು. ಮೀನುಗಾರ ಮಹಿಳೆಯರಿಗೂ ಅಗತ್ಯ ಸೌಲಭ್ಯಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಒದಗಿಸಬೇಕು.