Advertisement

ಸ್ಪರ್ಧೆ ಪ್ರತಿಯೊಬ್ಬರಿಗೂ ಮಾದರಿಯಾಗಲಿ

11:35 AM Mar 31, 2022 | Team Udayavani |

ಕಲಬುರಗಿ: ಸ್ಪರ್ಧೆ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಹೊರತು, ಅಣಕು ಸ್ಪರ್ಧೆ ಆಗಬಾರದು ಎಂದು ಕರ್ನಾಟಕ ಹೈಕೋರ್ಟ್‌ ಕಲಬುರಗಿ ಪೀಠದ ಹೆಚ್ಚುವರಿ ರಜಿಸ್ಟ್ರಾರ್‌ ಜನರಲ್‌ ಕೆ.ಎಸ್‌.ವಿಜಯ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಬುಧವಾರ ನಗರದ ಹೊಸ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಬೆಂಗಳೂರು, ಸ್ಥಳೀಯ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನ ಸಹಯೋಗದೊಂದಿಗೆ ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆಯ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ,ವಿದ್ಯಾರ್ಥಿಗಳಿಗೆ ಕೊಟ್ಟಂತ ಜವಾಬ್ದಾರಿಯನ್ನು ಶಿಸ್ತು ಮತ್ತು ಶಾಂತಿಯಿಂದ ನಿರ್ವಹಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್‌ ಮಾತನಾಡಿ, ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಲ್ಲಿ ಆಯೋಜಿಸುವಂತ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ತೋರಿಸಬೇಕು. ಇದರಿಂದ ಆತ್ಮವಿಶ್ವಾಸ ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಡಾ| ದಿಲೀಷ್‌ ಸಸಿ ಮಾತನಾಡಿ, ಸ್ಪರ್ಧೆಗಳಲ್ಲಿ ಭಾಗವಹಿಸು ವುದರಿಂದ ಸ್ಪರ್ಧಾ ಮನೋಭಾವನೆ ಜೊತೆಗೆ ಧೈರ್ಯ ಮತ್ತು ಧನತ್ಮಾಕತೆ ಬೆಳೆಯುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜು ಪ್ರಾಂಶುಪಾಲ ಡಾ| ಶಿವಾನಂದ ಎಚ್‌.ಲೇಂಗಟಿ ಮಾತನಾಡಿ, ಪಂಚಾಂಗ ಓದಿದರೆ ಭವಿಷ್ಯ ಬದಲಾಗಲ್ಲ, ಸಂವಿಧಾನ ಓದಿದರೆ ಭವಿಷ್ಯ ಬದಲಾಗುತ್ತದೆ ಎಂದರು.

Advertisement

ವಲಯದ ಏಳು ಜಿಲ್ಲೆಗಳ ಎಲ್ಲ ಕಾನೂನು ಕಾಲೇಜುಗಳು ಹಾಗೂ ಚುನಾಯಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 75 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ 15 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾದರು. ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಸಕ ಬಸವರಾಜ ಮತ್ತಿಮಡು ಪ್ರಶಸ್ತಿ ವಿತರಿಸಿದರು. ಬೆಂಗಳೂರು ಕಾಸಂಸು ಸಂಶೋಧನಾ ಮುಖ್ಯಸ್ಥ ಡಾ| ರೇವಯ್ಯ ಒಡೆಯರ್‌, ಕಲಬುರಗಿ ವಿಸಕಾ ಕಾಲೇಜಿನ ಕಾರ್ಯಕ್ರಮದ ನೋಡಲ್‌ ಅಧಿಕಾರಿ ವಾಣಿ ಮರಡಿ, ಸುಭಾಶ್ಚಂದ್ರ ದೊಡ್ಡಮನಿ, ಶ್ರೀಮಂತ ಓಳಕರ್‌ ತೀರ್ಪುಗಾರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next