Advertisement

ಮಕ್ಕಳು ಆತಂಕವಿಲ್ಲದೆ ಪರೀಕ್ಷೆ ಬರೆಯಲಿ

07:00 AM Jun 18, 2020 | Lakshmi GovindaRaj |

ಮುಳಬಾಗಿಲು: ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಕ್ಕಳು ಗಾಬರಿಯಾಗದಂತೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಅಧಿಕಾರಿಗಳಿಗೆ  ತಿಳಿಸಿದರು.

Advertisement

ನಗರದ ಡಿವಿಜಿ ರಂಗಮಂದಿರದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಮುಖ್ಯ ಶಿಕ್ಷಕರ ಸಂಘ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಎಸ್‌ಎಸ್‌ ಎಲ್‌ಸಿ ಪರೀಕ್ಷಾ ಫ‌ಲಿತಾಂಶದಲ್ಲಿ ಜಿಲ್ಲೆಯಲ್ಲಿಯೇ ಮುಳಬಾ ಗಿಲು ಪ್ರಥಮ ಸ್ಥಾನ ಬರಬೇಕು ಎಂದು ಹೇಳಿದರು.

ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಸೌಲಭ್ಯ ಸರ್ಕಾರ ಕಲ್ಪಿಸಿದೆ. ಪ್ರತಿ ವಿದ್ಯಾರ್ಥಿಯೂ ಮಾಸ್ಕ್,  ಸ್ಯಾನಿಟೈಸರ್‌ನೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಯಾವುದೇ ರೀತಿ ಗೊಂದಲಕ್ಕೆ ಒಳ  ಗಾಗದೇ ಪರೀಕ್ಷೆ ಬರೆದು ಶೇ.100 ಫ‌ಲಿತಾಂಶ ತರ  ಬೇಕು. ಅಲ್ಲದೇ, ಎಲ್ಲರೂ ತಪ್ಪದೇ ಸರ್ಕಾರದ ನಿಯಮ ಪಾಲಿಸಬೇಕೆಂದು  ಸೂಚಿಸಿದರು.

ಬಿಇಒ ಗಿರಿಜೇಶ್ವರಿದೇವಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 11 ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿದ್ದು, ಮಕ್ಕಳು ಪರೀಕ್ಷೆ ಬರೆಯಲು ಈಗಾಗಲೇ ಶಿಕ್ಷಕರು, ಮುಖ್ಯ ಶಿಕ್ಷಕರೊಂದಿಗೆ ಸಮಾಲೋಚನೆ ಸಭೆಗಳನ್ನು ನಡೆಸಲಾಗಿದೆ. ಮಕ್ಕಳು ಮಾನಸಿಕ ಖನ್ನತೆಗೆ ಒಳಗಾ  ಗದೇ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ತೊಂದರೆ  ಯಾಗದೇ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಬೇಕೆಂದು ಪೋಷಕರಿಗೆ ತಿಳಿಸಿದರು.

ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್‌, ತಹಶೀಲ್ದಾರ್‌ ಕೆ. ಎನ್‌.ರಾಜಶೇಖರ್‌, ಇಒ ಎಂ.ಬಾಬು, ಪೌರಾ  ಯುಕ್ತ ಜಿ.ಶ್ರೀನಿವಾಸಮೂರ್ತಿ, ಎಡಿ ರವಿಚಂದ್ರ, ಟಿ.ಎಚ್‌.ಡಾ.ವರ್ಣಶ್ರೀ, ಎಪಿಎಂಸಿ ಅಧ್ಯಕ್ಷ ಗೊಲ್ಲಹಳ್ಳಿ ವೆಂಕ ಟೇಶ್‌, ಬಿಜೆಪಿ ಹಿರಿಯ ಮುಖಂಡ ಸುರೇಂದ್ರ  ಗೌಡ, ಶಿಕ್ಷಕರ ಸಂಘದ  ಅಧ್ಯಕ್ಷ ಸಿ.ಸೊಣ್ಣಪ್ಪ, ದೈಹಿಕ ಶಿಕ್ಷಕ ಇ.ಶ್ರೀನಿವಾಸಗೌಡ, ಮುಖ್ಯ ಶಿಕ್ಷಕ ಚಂಗಲ ರಾಯಪ್ಪ, ಜನಾರ್ದನ್‌ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next