ಆನೇಕಲ್: ಎಸ್‌ಐಟಿ ಹಾಗೂ ಪೊಲೀಸರಿಂದ ಯಾವುದೇ ಸಹಕಾರ ಹಾಗೂ ಭದ್ರತೆ ಸಿಗದ ಹಿನ್ನೆಲೆ ಸಿಡಿ ಸಂತ್ರಸ್ತೆ ವಿರೋಧಪಕ್ಷದ ನಾಯಕರ ಬಳಿ ಭದ್ರತೆ ಕೊಡಿಸಿಎಂದು ಕೇಳಿ ಕೊಂಡಿರಬಹುದು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆನೀಡಿದ್ದಾರೆ.
ತಮಿಳುನಾಡು ವಿಧಾನಸಭಾಚುನಾವಣೆಹಿನ್ನೆಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಹಾಗೂ ಜಮೀರ್‌ಅಹಮದ್ ಹಾಗೂ ಶಾಸಕಬಿ.ಶಿವಣ್ಣ ಜೊತೆ ತಳಿ ಮತ್ತು ಹೊಸೂರಿನಲ್ಲಿ ಪ್ರಚಾರ ನಡೆಸಲು ತೆರಳುವ ಮಾರ್ಗಮಧ್ಯೆಆನೇಕಲ್ ತಾಲೂಕಿನ ಸೂರ್ಯನಗರಹಾಗೂ ಬ್ಯಾಗಡದೇನಹಳಿ, ಆನೇಕಲ್‌ಪಟ್ಟಣದಲ್ಲಿ ಕಾರ್ಯಕರ್ತರಿಂದ ಅಭಿನಂದನೆಸ್ವೀಕರಿಸಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ತನಿಖೆ ಪ್ರಗತಿಯಲ್ಲಿ: ಪ್ರಕರಣದಲ್ಲಿಈಗಾಗಲೇ ರಮೇಶ್ ಜಾರಕಿಹೊಳಿ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಫ್ಐಆರ್‌ಕೂಡ ಅವರ ಮೇಲೆ ದಾಖಲಾಗಿತನಿಖೆಯೂ ಕೂಡ ಪ್ರಗತಿಯಲ್ಲಿದೆ. ಆದರೆರಮೇಶ್ ಜಾರಕಿಹೊಳಿ ನನ್ನದೇನು ತಪ್ಪಿಲ್ಲಎಂದು ಹೇಳುತ್ತಿದ್ದಾರೆ. ತನಿಖೆ ಬಳಿಕವಷ್ಟೇಅದು ಸಾಬೀತಾಗಬೇಕಿದೆ ಎಂದರು.
ರಕ್ಷಣೆ ನೀಡಬೇಕಿದೆ: ಬಿಜೆಪಿ ಸರ್ಕಾರಸಂತ್ರಸ್ತೆ ಯುವತಿ ವಿಚಾರದಲ್ಲಿ ಎಫ್ಐಆರ್‌ದಾಖಲು ಮಾಡಲು, ತನಿಖೆ ನಡೆಸಲುವಿಳಂಬ ಮಾಡಿದೆ. ಪೊಲೀಸರು ಹಾಗೂಎಸ್‌ಐಟಿ ತಂಡ ಇನ್ನೂ ಕೂಡಯುವತಿಯನ್ನು ಪತ್ತೆ ಮಾಡಲುಸಾಧ್ಯವಾಗಿಲ್ಲ. ಪ್ರಕರಣ ಇನ್ನೂ ತನಿಖೆಹಾದಿಯಲ್ಲಿರುವುದರಿಂದ ಪೊಲೀಸರು ಪತ್ತೆಮಾಡಿ ರಕ್ಷಣೆ ನೀಡಬೇಕಿದೆ ಎಂದರು.
ನಾನೇನು ಮಾತನಾಡಲ್ಲ: ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ,ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷ ಸಂಘಟನೆಮಾಡಬೇಕು ಎಂದರು. ಸಂತ್ರಸ್ತಯುವತಿಯ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ,ಈಗಾಗಲೇ ಅವರ ವಕೀಲರು ದೂರುದಾಖಲಿಸಿದ್ದಾರೆ. ನಾನೇನು ಈ ಪ್ರಕರಣದ ಬಗ್ಗೆಮಾತನಾಡುವುದಿಲ್ಲ ಎಂದು ಹೇಳಿದರು.ಚಂದಾಪುರದ ಸೂರ್ಯನಗರಕ್ಕೆ ಆಗಮಿಸಿದಸಿದ್ದರಾಮಯ್ಯ ಅವರನ್ನು ಶಾಸಕ ಬಿ.ಶಿವಣ್ಣಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ಮುಖಂಡ ಆರ್.ಕೆ.ರಮೇಶ್ ಹಾಗೂ ನೂರಾರು ಜನ ಕಾಂಗ್ರೆಸ್‌ಬೆಂಬಲಿಗರು ಹೂವಿನ ಸುರಿಮಳೆಗೈದುಅಭಿನಂದಿಸಿದರು.
ಕಾಂಗ್ರೆಸ್‌ಮುಖಂಡರಾದ ಎಚ್.ಎಮ್.ರೇವಣ್ಣ,ಅಚ್ಯುತ್‌ರಾಜು, ಗಟ್ಟಳ್ಳಿ ಸೀನಪ್ಪ,ರಾಮಚಂದ್ರಪ್ಪ, ಸಿ.ಕೆ.ಚಿನ್ನಪ್ಪ, ಸಿ.ನಾಗರಾಜು,ಪಾರ್ತಪ್ಪ, ಹರೀಶ್‌ಗೌಡ, ಬೊಮ್ಮಸಂದ್ರಲಿಂಗಣ್ಣ ಮತ್ತಿತರರು ಇದ್ದರು.ಡಿ.ಕೆ.ಶಿವಕುಮಾರ್ ಜನಸಂದಣಿ ಸೇರಬಾರದು ಸ್ಟೇ ತಂದಿದ್ದಾರೆಯೇ?ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಬಿಡುಗಡೆಯಾಗುತ್ತಿದ್ದಂತೆ 6 ಜನ ಸಚಿವರುತಮ್ಮ ವಿರುದ್ದ ಯಾವುದೇ ರೀತಿಯ ಮಾನಹಾನಿ, ತೇಜೋವಧೆಯ ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸದಂತೆ ಕೋರ್ಟ್‌ನಿಂದ ಸ್ಟೇ ತಂದಿರುವುದು ಏಕೆ ಎಂಬುದು ಅವರಿಗೆ ತಿಳಿದಿರಬೇಕು.
ಡಿ.ಕೆ.ಶಿವಕುಮಾರ್ ಬಳಿ ರಾಜೀನಾಮೆ ನೀಡಿ ಎಂದು ಬಿಜೆಪಿಯವರು ಕೇಳಲು ಅವರೇನುಕೋರ್ಟಿಗೆ ಹೋಗಿ ಬಿಜೆಪಿ ಮಂತ್ರಿಗಳ ರೀತಿ Óà ೆr ತಂದಿದ್ದಾರೆಯೇ? ಟ್ವೀಟ್ ಮಾಡಿದ ತಕಣ Òರಾಜೀನಾಮೆ ನೀಡಬೇಕಾ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.