ಚಿಕ್ಕಮಗಳೂರು: ಲೋಕ ಸಭಾ ಚುನಾವಣೆಯಲ್ಲಿ ರಾಜ್ಯ ದಲ್ಲಿ ಕಾಂಗ್ರೆಸ್ 22ರಿಂದ 24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಉಡುಪಿ- ಚಿಕ್ಕಮಗಳೂರು ಕ್ಷೇತ್ರ ದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತಾವ ಧಿಯಲ್ಲಿನ ಕಾರ್ಯ ಗಳನ್ನು ಹೇಳಿಕೊಂಡು ಚುನಾವಣೆ ಎದುರಿಸುತ್ತಿದೆ. ಅದೇ ಬಿಜೆಪಿಯವರು ಜನರಲ್ಲಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಚುನಾವಣೆ ಮಾಡುತ್ತಿದ್ದಾರೆ. ಅವರು ಭಾವನಾತ್ಮಕ ವಿಚಾರಗಳನ್ನು ಬಿಟ್ಟು ತಮ್ಮ 10 ವರ್ಷ ಅ ಧಿಕಾರಾವ ಧಿಯಲ್ಲಿನ ಅಭಿವೃದ್ಧಿ ಕೆಲಸಗಳನ್ನು ಜನತೆ ಮುಂದಿಟ್ಟು ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.
ದೇಶದಲ್ಲಿ ವಿಪಕ್ಷವೇ ಇರ ಬಾರದು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ರಾಜ್ಯದಲ್ಲಿ 28ಕ್ಕೆ 28ಸ್ಥಾನ ಗೆಲ್ಲುತ್ತೇವೆ. ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇ ವೆಂದು ಹೇಳುತ್ತಿದ್ದು, ವಿಪಕ್ಷವೇ ಇರಬಾರದು ಎಂಬುದು ಸರ್ವಾಧಿ ಕಾರಿ ಧೋರಣೆಯ ಭಾವನೆಗಳಾ ಗಿವೆ ಎಂದರು.
ಕಾಂಗ್ರೆಸ್ ಪಕ್ಷವೆಂದೂ ಭಾವನಾತ್ಮಕ ಚುನಾವಣೆ ಮಾಡಿಲ್ಲ. ರಾಷ್ಟ್ರಪ್ರೇಮ, ರಾಷ್ಟ್ರದ್ರೋಹಿಗಳ ಚುನಾವಣೆ ಎಂದು ಹೇಳುತ್ತಿದ್ದಾರೆ. ಸರ್ಟಿಫಿಕೆಟ್ ಕೊಡಲು ಇವರ್ಯಾರು? ನಾವು ಹಿಂದೂಗಳು ಎಂದು ಗೊತ್ತಿದೆ. ನಮ್ಮ ತಂದೆ- ತಾಯಿ ಹಿಂದುತ್ವ ಹೇಳಿಕೊಟ್ಟಿದ್ದಾರೆ ಎಂದು ಕಿಡಿಕಾರಿದರು.