Advertisement

ಬಿಜೆಪಿ ಸೋಲಿಸುವುದೇ ಪರಮ ಗುರಿಯಾಗಿರಲಿ

12:02 PM Oct 22, 2018 | Harsha Rao |

ಕೋಲ್ಕತಾ: ಮುಂದಿನ ಲೋಕಸಭಾ ಚುನಾವಣೆಗಾಗಿ ಸಿದ್ಧವಾಗುತ್ತಿರುವ ಮೈತ್ರಿ ಕೂಟದಲ್ಲಿರುವ ವಿಪಕ್ಷಗಳಿಗೆ, ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ಗುರಿಯಾಗಿರಬೇಕೇ ಹೊರತು, ಮೈತ್ರಿಕೂಟದಲ್ಲಿ ಕಾಂಗ್ರೆಸ್‌ ಇರುವ ಬಗ್ಗೆ ಅಸಮಾಧಾನ ಹೊರ ಹಾಕುವುದೇ ಗುರಿಯಾಗಿರಬಾರದು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಸಲ್ಮಾನ್‌ ಖುರ್ಷೀದ್‌ ಕಿವಿಮಾತು ಹೇಳಿದ್ದಾರೆ. 

Advertisement

ಬುಧವಾರ ಪಿಟಿಐಗೆ ನೀಡಿದ ಸಂದರ್ಶನದ ವೇಳೆ ಮಾತನಾಡಿದ ಅವರು, “”ಮೈತ್ರಿಕೂಟ ರಚನೆಯ ಆವಶ್ಯಕತೆಯನ್ನು ಈಗಾಗಲೇ ಕಾಂಗ್ರೆಸ್‌ ನಾಯಕರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ, ಇದು ಬಿಜೆಪಿಯನ್ನು ಕೆಳಗಿಳಿಸಲು ರಚನೆಯಾಗುತ್ತಿರುವ ಮೈತ್ರಿಕೂಟವೇ ಹೊರತು, ಕಾಂಗ್ರೆಸ್‌ಗಾಗಿ ಅಲ್ಲ ಎಂಬುದನ್ನು ಎಲ್ಲರೂ ಮನಗಾಣಬೇಕು” ಎಂದಿದ್ದಾರೆ. 

ಬಿಜೆಪಿಗೆ ಮತ ಹಾಕಿ: ತೆಲಂಗಾಣ ರಾಜ್ಯವು ಅಭಿವೃದ್ಧಿ ಸಾಧಿಸಲು ಮುಂದಿನ ತಿಂಗಳು ನಡೆಯಲಿರುವ ತೆಲಂಗಾಣ ಚುನಾವಣೆಯಲ್ಲಿ ಜನರು ಬಿಜೆಪಿಗೆ ಮತ ಹಾಕಬೇಕೆಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಮ ಮಾಧವ್‌ ಆಗ್ರಹಿಸಿದ್ದಾರೆ. ತೆಲಂಗಾಣದ ಮಲ್ಕಾಜಗಿರಿಯಲ್ಲಿ ರವಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.  

ಸೋತವರತ್ತ ಬಿಜೆಪಿ ಒಲವು: ಛತ್ತೀಸ್‌ಗಢ ವಿಧಾನಸಭೆಗೆ ಸಜ್ಜಾಗುತ್ತಿರುವ ಬಿಜೆಪಿ, 2013ರ ಚುನಾವಣೆಯಲ್ಲಿ ಸೋತಿದ್ದ 14 ಅಭ್ಯರ್ಥಿಗಳಿಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ನೀಡಿದೆ. ಚುನಾವಣೆ ನಡೆಯಲಿರುವ 90 ಕ್ಷೇತ್ರಗಳಲ್ಲಿ 77 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳ ಪಟ್ಟಿಯನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿದ್ದು, ಇವುಗಳಲ್ಲಿ 32 ಹಾಲಿ ಶಾಸಕರಿಗೆ 14 ಮಾಜಿ ಶಾಸಕರಿಗೆ ಹಾಗೂ 11 ಸಚಿವರಿಗೆ ಟಿಕೆಟ್‌ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next