Advertisement
ಸದ್ಯ ಕಾಬೂಲ್‌ನಿಂದ 50 ಕಿ.ಮೀ. ದೂರದಲ್ಲಿರುವ ಲೋಗರ್ ಪ್ರಾಂತ್ಯದ ರಾಜಧಾನಿಯನ್ನೂ ವಶಕ್ಕೆ ಪಡೆಯಲಾಗಿದೆ. ಇದಾದ ಬಳಿಕ ರಾಜಧಾನಿ ಕಾಬೂಲ್‌ನತ್ತ ಉಗ್ರರು ತೆರಳಲಿದ್ದಾರೆ. ಹೀಗಾಗಿಯೇ ಅಮೆರಿಕ, ಭಾರತದಂತೆ ಉಳಿದ ದೇಶಗಳೂ ತಮ್ಮ ರಾಯಭಾರ ಕಚೇರಿಗಳ ಸಿಬಂದಿಯನ್ನು ವಾಪಸ್ ಕರೆಸಿಕೊಳ್ಳುವಲ್ಲಿ ನಿರತವಾಗಿವೆ.
Related Articles
Advertisement
ಒಂದು ವೇಳೆ ಇಡೀ ಅಫ್ಘಾನಿಸ್ಥಾನ ತಾಲಿಬಾನ್ ಉಗ್ರರ ಕೈಗೆ ಹೋದರೆ, ಅಲ್ಲಿನ ಜನರ ಪರಿಸ್ಥಿತಿ ಹೇಳುವಂತಿಲ್ಲ. ಈಗಾಗಲೇ ಸಿರಿಯಾ, ಸಿಬಿಯಾ, ಇರಾಕ್‌ನಂಥ ದೇಶಗಳು ಉಗ್ರರ ಕೈಗೆ ಹೋಗಿ ಏನಾಗಿದೆ ಎಂಬುದು ಇಡೀ ಜಗತ್ತಿಗೇ ಗೊತ್ತಾಗಿದೆ. ಮಾನವರ ಜೀವಕ್ಕಂತೂ ಬೆಲೆಯೇ ಇರುವುದಿಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯಗಳು ಈಗಲೇ ಎಚ್ಚೆತ್ತು, ಆ ದೇಶಕ್ಕೆ ಹೊಂದುವ ಹಾಗೆ ಶಾಂತಿ ಸೂತ್ರವೊಂದನ್ನು ರೂಪಿಸಬೇಕು. ಅಲ್ಲದೆ ಈಗಾಗಲೇ ತಾಲಿಬಾನ್ ಉಗ್ರರು ಅಲ್ಲಿನ ಸರಕಾರದ ಜತೆಗೆ ಮಾತುಕತೆಯನ್ನೂ ನಡೆಸುವ ಯತ್ನ ನಡೆಸಿದ್ದಾರೆ. ಕೆಲವೊಂದು ದೇಶಗಳು ಇದರ ಮಧ್ಯಸ್ಥಿಕೆಯನ್ನೂ ಮಾಡಿವೆ. ಹೀಗಾಗಿ ಬೇಗನೇ ಅಲ್ಲಿನ ಪರಿಸ್ಥಿತಿ ಸುಧಾರಣೆಗೆ ಯತ್ನಿಸಬೇಕು.
ಹಾಗೆಯೇ ಪಾಕಿಸ್ಥಾನ ಮತ್ತು ಚೀನದಂಥ ದೇಶಗಳು ಅಫ್ಘಾನಿಸ್ಥಾನದ ಬೆಳವಣಿಗೆಯನ್ನು ತಮಗೆ ಬೇಕಾದ ಹಾಗೆ ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳೂ ಇವೆ. ಅಫ್ಘಾನಿಸ್ಥಾನವನ್ನೇ ಮೂಲ ನೆಲೆಯನ್ನಾಗಿ ಮಾಡಿಕೊಂಡು ಭಾರತದ ವಿರುದ್ಧ ತಾಲಿಬಾನ್ ಉಗ್ರರನ್ನು ಎತ್ತಿಕಟ್ಟಿ ಕಾಶ್ಮೀರದಲ್ಲಿ ಅಶಾಂತಿ ಉಂಟು ಯತ್ನಿಸಬಹುದು.