ವಡಗೇರಾ: ಬರುವ ಶೈಕ್ಷಣಿಕ ವರ್ಷದಿಂದ ಬೆಂಡೆಬೆಂಬಳಿ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ಆರಂಭಗೊಳ್ಳಲಿದೆ. ಈಗಾಗಲೇ ಬೆಂಡೆಬೆಂಬಳಿ ಗ್ರಾಮಕ್ಕೆ ಸರ್ಕಾರ ಕಾಲೇಜು ಮಂಜೂರ ಮಾಡಿದೆ ಎಂದು ಶಾಸಕ ಡಾ| ಎ.ಬಿ. ಮಾಲಕರೆಡ್ಡಿ ಹೇಳಿದರು. ಅವರು ಬೆಂಡೆಬೆಂಬಳಿ ಗ್ರಾಮದಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಟ್ಟಡ ನಿರ್ಮಾಣಕ್ಕೆ ಸರಕಾರ 1 ಕೋಟಿ 40 ಲಕ್ಷ ರೂ. ಹಣ ಬಿಡುಗಡೆ ಮಾಡಿದೆ. ಈ ಕಾಮಗಾರಿಯನ್ನು ಭೂ ಸೇನಾ ನಿಗಮ ಕೈಗೆತ್ತಿಗೊಂಡಿದೆ. ನಿಗದಿತ ಅವಧಿಯೊಳಗೆ ಹಾಗೂ ಉತ್ತಮ ಗುಣಮಟ್ಟದಿಂದ ಕಟ್ಟಡ ನಿರ್ಮಾಣ ಮಾಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಈ ಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣ ಮೊಟಕುಗೊಳಿಸಬಾರದು. ಕಷ್ಟವಾದರು ಸಹ ಅದನ್ನು ಎದುರಿಸಿ ಪದವಿ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಸಲಹೆ ನೀಡಿದರು.
ಜಿಪಂ ಸದಸ್ಯೆ ಗಿರಿಜಮ್ಮ ಸದಾಶಿವಪ್ಪಗೌಡ ಮಾತನಾಡಿ, ಶಾಸಕರ ಶತ ಪ್ರಯತ್ನದಿಂದ ಈ ಭಾಗಕ್ಕೆ ಕಾಲೇಜು ಮಂಜೂರಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಕೂಡ ಶಾಸಕರು ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಇದಕ್ಕೂ ಮುಂಚೆ ಬೆಂಡೆಬೆಂಬಳಿ ಸಮೀಪದ ರೋಟ್ನಡಿಗಿ ಗ್ರಾಮದಲ್ಲಿ ಗ್ರಾಮ ವಿಕಾಸ ಯೋಜನೆ ಅಡಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಡಾ| ಎ.ಬಿ. ಮಾಲಕರೆಡ್ಡಿ ಭೂಮಿ ಪೂಜೆ ನೆವೇರಿಸಿದರು.
ಭೂ ಸೇನಾ ನಿಗಮದ ಜೆಇ ಹೊನ್ನಪ್ಪ, ತಾಪಂ ಸದಸ್ಯ ಚಂದ್ರಶೇಖರಗೌಡ, ಸೂಗಣ್ಣ ಸೂಗರೆಡ್ಡಿ, ಮರೆಪ್ಪ ಬಿಳಾØರ, ನಾಗರಾಜ್ ಮುಸ್ತಾಜೀರ್, ಶಿವಣಗೌಡ ಪೊಲೀಸ್ ಪಾಟೀಲ್, ಶಾಂತಗೌಡ ಬೆಳ್ಳಿಕಟ್ಟಿ, ಮಹ್ಮದ ಜಮಲಾ ಬಂಡೆ, ಅಜಯರೆಡ್ಡಿ, ಈರಪ್ಪ ಮಳ್ಳಳ್ಳಿ, ಮೌಲಾ, ನಾಗಪ್ಪ ಕೊದ್ದಡ್ಡಿ, ಗ್ರಾಪಂ ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ಹುಸೇನಸಾಬ್, ಗ್ರಾಪಂ ಆಪರೇಟರ್ ಮುನ್ನಗೌಡ, ಗ್ರಾಪಂ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಇದ್ದರು.