Advertisement

ವಿದ್ಯಾರ್ಥಿಗಳು ಸೇನೆ ಸೇರುವ ಕನಸು ಕಾಣಲಿ: ಕ್ಯಾ|ಕಾರ್ಣಿಕ್‌

07:00 AM Aug 22, 2017 | Team Udayavani |

ಕಾರ್ಕಳ: ನಮ್ಮ ಸುಖ ನಿದ್ದೆಗಳಿಗಾಗಿ, ನಮ್ಮ ಹಿತಕ್ಕಾಗಿ, ನಮ್ಮ ಕನಸುಗಳಿಗಾಗಿ ದೇಶದ ಗಡಿ ಕಾಯುವ ಸೈನಿಕರು ತಮ್ಮ ಪ್ರಾಣ ವನ್ನೇ ಮುಡಿಪಾಗಿಡುತ್ತಿದ್ದಾರೆ. ಜಾತಿಯನ್ನು ಕೇಳದ ವ್ಯವಸ್ಥೆಯೊಂದು ದೇಶದಲ್ಲಿದ್ದರೆ ಅದು ಭಾರತೀಯ ಸೇನೆ. 

Advertisement

ವಿದ್ಯಾರ್ಥಿಗಳು ಅಂತಹ ಸೇನೆಯಲ್ಲಿ ಸೇವೆಗೈಯ್ಯುವ ಕನಸು ಕಾಣಬೇಕು. ಶಿಕ್ಷಣವೆನ್ನುವುದು ಅಂತಹಕನಸುಗಳನ್ನು ಕಾಣಿಸುವ ಕಿಟಕಿಯಾಗ ಬೇಕು ಎಂದು ವಿಧಾನ ಪರಿಷತ್‌ನ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ಹೇಳಿದ್ದಾರೆ.

ಅವರು ಕುಕ್ಕುಂದೂರು ಗಣಿತ ನಗರ ಅಜೆಕಾರು ಪದ್ಮಗೋಪಾಲ್‌ ಎಜುಕೇಶನ್‌ ಟ್ರಸ್ಟ್‌ ಹಾಗೂ ಕಾರ್ಕಳ ಜ್ಞಾನಸುಧಾ ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ಸಂಸ್ಥೆಯಲ್ಲಿ ಹಮ್ಮಿಕೊಳ್ಳ ಲಾದ ಸಂಸ್ಥಾಪಕರ ದಿನಾಚರಣೆ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿದರು.

ಮಾನವೀಯತೆ ಇರಲಿ
ಶಿಕ್ಷಣ ವ್ಯವಸ್ಥೆಯೊಂದು ಕೆಲಸ ಗಿಟ್ಟಿಸಿ ಕೊಳ್ಳುವುದನ್ನು ಮಾತ್ರ ಕಲಿಸಬಾರದು. ಕರ್ತವ್ಯ ನಿಷ್ಠೆಯನ್ನು, ಸಮಯ ಪ್ರಜ್ಞೆ
ಯನ್ನು, ರಾಷ್ಟ್ರ ಕಟ್ಟುವುದನ್ನು, ದೇಶಕ್ಕಾಗಿ ಶ್ರಮಿಸುವುದನ್ನು ಕಲಿಸಬೇಕು. ಜ್ಞಾನ ಸುಧಾ ಈ ಕೆಲಸ ಮಾಡುತ್ತಿದೆ. ಇಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ, ಗುರುಗಳು ಹೇಳಿಕೊಡುವ ಆದರ್ಶವನ್ನು ಬದುಕಿನಲ್ಲಿ ಅಳವಡಿಸಿ ಕೊಂಡು ನೌಕರಿ ಪಡೆಯುವುದು ಮಾತ್ರವಲ್ಲ ಮಾಡುವ ನೌಕರಿಯಲ್ಲಿ ಮಾನವೀಯತೆಯನ್ನು, ತಮ್ಮ ವೃತ್ತಿಯಲ್ಲಿ ಭಷ್ಟಾಚಾರ ರಹಿತ ಕನಸನ್ನು ಅಳವಡಿಸಿಕೊಂಡರೆ ಜೀವನ ಸಾರ್ಥಕ ವಾಗುತ್ತದೆ ಎಂದರು.

ಅವಕಾಶ ಬಳಸಿಕೊಳ್ಳಿ
ಮುಖ್ಯ ಅತಿಥಿಯಾಗಿದ್ದ ಮಂಗಳೂರು ಎ.ಜೆ. ಇನ್‌ಸ್ಟಿಟ್ಯೂಟ್‌ಆಫ್‌ ಮೆಡಿಕಲ್‌ ಸೈನ್ಸಸ್‌ನ ಪ್ರೊಫೆಸರ್‌ ಆಫ್‌ ಮೆಡಿಸಿನ್‌ ವಿಭಾಗದ ಡಾ| ಬಿ. ದೇವದಾಸ್‌ ರೈ ಮಾತನಾಡಿ, ಅವಕಾಶಗಳು ನಮ್ಮ ಕಾಲ ಬುಡದಲ್ಲಿಯೇ ಇರುತ್ತವೆ. ಅದನ್ನು ಸೂಕ್ಷ್ಮವಾಗಿ ಗಮನಿಸಿ ಬಳಸಿಕೊಳ್ಳುವುದು ಮಾತ್ರ ನಮ್ಮ ಕೆಲಸ. ವಿದ್ಯಾರ್ಥಿಗಳಿಗೂ ಇಂತಹ ಅವಕಾಶ ಗಳು ಸಿಗುತ್ತವೆ. ಬದುಕಿನಲ್ಲಿ ನಿಗದಿತ ಗುರಿಯೊಂದನ್ನು ಇಟ್ಟುಕೊಳ್ಳಬೇಕು. ವೃತ್ತಿಯಲ್ಲಿ ಹಣ ಮಾಡುವ ಉದ್ದೇಶವನ್ನು ಇಟ್ಟುಕೊಳ್ಳದೇ ಮಾನವೀಯ ಕಾಳಜಿಯನ್ನು ಹೊಂದುವಂತವರಾಗ ಬೇಕು. ಜ್ಞಾನಸುಧಾ ಸಂಸ್ಥೆ ಈ ಕಾಳಜಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತಿರು ವುದು ಶ್ಲಾಘನೀಯ ಎಂದರು.

Advertisement

ಟ್ರಸ್ಟ್‌ನ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ ಪ್ರಸ್ತಾವನೆಗೈದರು. ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ದಿನೇಶ್‌ ಕೊಡವೂರು, ಸಂಸ್ಥೆಯ ಟ್ರಸ್ಟಿ ಕರುಣಾಕರ ಶೆಟ್ಟಿ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಉಷಾ ರಾವ್‌ ಉಪಸ್ಥಿತರಿದ್ದರು.

ಉಪನ್ಯಾಸಕಿ ಸಂಗೀತ ಕಾರ್ಯಕ್ರಮ ನಿರೂಪಿಸಿದರು.ಸಾಧಕರಿಗೆ ಸಮ್ಮಾನ ಚಿನ್ನದ ಪದಕ ವಿಜೇತರಾದ ಅನಿಲ್‌ ಪ್ರಭು, ಮನೋಜ್‌, ಸಚ್ಚಿದಾನಂದ ವಿ. ಪಾಟೀಲ್‌, ಕೆ.ಕೆ. ಈಶಾನ್ಯ, ಅದ್ವೆ„ತ್‌, ಅಶ್ವಿ‌ನ್‌, ಹರೀಶ್‌, ಎಚ್‌. ಕೇದರ್‌ನಾಥ್‌, ಕಾಮತ್‌, ರಜತ ಪದಕ ವಿಜೇತರಾದ ಪ್ರತೀಕ್‌ ಟಿ.ಆರ್‌., ಭೂಮಿಕಾ ಶೆಟ್ಟಿ ಎಚ್‌, ವಿನಯ್‌ ಪಾಟೀಲ್‌ ಕೆ.ಸಿ., ರಕ್ಷಿತ್‌ ಪಿ.ಕೆ., ಅದಿತ್‌ದೇವ್‌ ಸಿ.ಡಿ., ಮೃದುಲಾ ಎಂ. ಭಟ್‌, ಕೆ.ಪಿ. ಅರುಣ್‌ ಪ್ರತಿಜ್ಞಾ, ಅಕ್ಷತಾ ಜಿ. ನಾಯಕ್‌, ಪ್ರಥ್ವಿ ಎಸ್‌., ಜಗದೀಶ್‌ ರೆಡ್ಡಿ ಎ., ಹರ್ಷ ಭಟ್‌ ಕೆ., ಭರತ್‌ ಎಚ್‌.ಸಿ., ನವೀನಾ ಎಸ್‌., ವಿಜೇತ್‌ ಮಾಡಳ್ಳಿ, ಸಂದೀಪ್‌ ಎಂ.ಎನ್‌., ಧನುಷ್‌, ಸಂಸ್ಕೃತಿ ಸತೀಶ ನಾಯಕ್‌, ಶೆಟ್ಟಿ ಭೂಮಿಪ್ರಕಾಶ್‌, ಅಭ್ಯುದಯ ಎಸ್‌., ಜಾನೆ ರಾಶೆಲ್‌ ಒಪೆಲ್‌ ಪಿಂಟೋ, ಅಮರೇಶ್ವರ ಎಸ್‌. ಗಂಜಿ, ಗ್ರೀಷ್ಮಾ, ಶೆಟ್ಟಿ, ಸೃಷ್ಟಿ ತಾರಾನಾಥ್‌, ಆಶಾ, ಐಶ್ವರ್ಯ ಕೆ. ಶೆಟ್ಟಿ, ಭವಿಷ್‌ ಎನ್‌. ಶೆಟ್ಟಿ, ಕುಮಾರ್‌ ಲಕ್ಷ್ಮಣ್‌ ರಾಥೋಡ್‌ ಮತ್ತು ಅರವಿಂದ್‌ ಎ.ಎನ್‌., ಕೆಸಿಇಟಿ 1,000ಗಿಂತ ಕೆಳಗಿನ ರ್‍ಯಾಂಕ್‌ ವಿಜೇತರಾದ ಆರ್‌. ಅಜಿತ್‌ ಕುಮಾರ್‌, ಪೃಥ್ವಿ ಎ. ಶೆಟ್ಟಿ ಮತ್ತು ಗೌರವ್‌ ಜಿ. ಶೆಟ್ಟಿ ಹಾಗೂ ಸಿಎ-ಸಿಪಿಟಿ ಪರೀಕ್ಷೆ ಉತ್ತೀರ್ಣರಾದ ತೇಜಸ್‌, ಅಶ್ವಿ‌ತಾ ಎಸ್‌. ಶೆಟ್ಟಿ, ಸೋಮನಾಥ್‌ ಶೆಟ್ಟಿ, ಸುಹಾಸ್‌ ಎ. ಶೆಟ್ಟಿ, ಅನನ್ಯ ಎಸ್‌. ಪಾಟೀಲ್‌, ಪ್ರತೀûಾ ಶೆಟ್ಟಿ, ದುರ್ಗಾಪ್ರಸಾದ್‌ ಶೆಟ್ಟಿಗಾರ್‌, ಯೋಗಿತಾ, ದೀûಾ, ಅನುಷ್‌ ಕುಮಾರ್‌ ಶೆಟ್ಟಿ, ಎಸ್‌.ವಿ. ರಾಹುಲ್‌, ಎಸ್‌.ಜಿ. ರಕ್ಷಿತ್‌ ಮತ್ತು ರûಾ ಆರ್‌. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ವಿಜೇತ‌ರನ್ನು ಅಭಿನಂದಿಸ ಲಾಯಿತು. ಜ್ಞಾನಸುಧಾ ಪತ್ರಿಕೆಯ 20ನೇ ಸಂಚಿಕೆಯ ಬಿಡುಗಡೆ ಈ ಸಂದರ್ಭದಲ್ಲಿ  ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next