Advertisement

“ವಿದ್ಯಾರ್ಥಿಗಳು ಸಮಾಜಕ್ಕೆ  ಮಾದರಿಯಾಗಲಿ’

03:45 AM Jul 03, 2017 | Harsha Rao |

ಮೂಲ್ಕಿ: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯ ಜತೆಗೆ ಸಮಾಜದ ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿ ಬೆಳೆಯಬೇಕು. ನಿಮ್ಮ ಆದರ್ಶವನ್ನು ಮುಂದಿನ ವಿದ್ಯಾರ್ಥಿಗಳು ಅನುಸರಿಸು ವಂಥ ವ್ಯಕ್ತಿತ್ವವನ್ನು ನೀವು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಆರ್ಥಿಕ ಸ್ಥಾಯೀ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಹೇಳಿದರು.

Advertisement

ಅವರು ಮೂಲ್ಕಿಯ ಕೋಟೆಕೇರಿ ಶ್ರೀ ನವದುರ್ಗಾ ಯುವಕ ವೃಂದದ ಮೂಲಕ ಜರಗಿದ ಸಾಧಕ ವಿದ್ಯಾರ್ಥಿಗಳ ಸಮ್ಮಾನ ಹಾಗೂ ಶೇ. 100 ಫಲಿತಾಂಶವನ್ನು ಪಡೆದ ಶಿಕ್ಷಣ ಸಂಸ್ಥೆಗಳ ಗೌರವಾರ್ಪಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಕೇವಲ ಶಿಕ್ಷಣ ಮಾತ್ರ ಬದುಕನ್ನು ಕಟ್ಟಿ ಕೊಡದು. ಉತ್ತಮ ಗುಣ ನಡತೆ ಮತ್ತು ಸತ್‌ಚಾರಿತ್ರ್ಯ,ಹಿರಿಯರನ್ನು ಗೌರವದಿಂದ ಕಾಣುವಂತಹ ಉತ್ತಮ ಅಂಶಗಳು ಮಕ್ಕ ಳಲ್ಲಿ ಇದ್ದಾಗ ಮಾತ್ರ ಬದುಕಿನಲ್ಲಿ ಉತ್ತುಂಗಕ್ಕೆ ಏರಲು ಸಾಧ್ಯ ಎಂದು ಹೇಳಿದರು.

ಮೂಲ್ಕಿ ನಗರ ಪಂಚಾಯತ್‌ ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಸಾಧನೆ ಮಾಡಿದವರನ್ನು ಹಾಗೂ ಊರಿಗೆ ಹಿತವೆನಿಸುವ ಕೆಲಸ ಮಾಡಿದವರನ್ನು ಗುರುತಿಸಿ ಅವರನ್ನು ವೇದಿಕೆಯತ್ತ ತರುವ ಪ್ರಯತ್ನದಲ್ಲಿ ನವದುರ್ಗಾ ಯುವಕ ಸಂಸ್ಥೆಯ ಪ್ರಯತ್ನಗಳು ಇತರಿಗೆ  ಪ್ರೇರಣೆಯಾಗಿ ಮೂಡಿ ಬಂದಿದೆ. ಇಂತಹ ಪ್ರಯತ್ನಗಳು ಇನ್ನೂ ಉತ್ತಮವಾಗಿ ನಡೆಯಲಿ ಎಂದು ಹೇಳಿದರು.

ಪಿಯುಸಿ ಮತ್ತು ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಮೂಲ್ಕಿ ಪರಿಸರದ ವಿದ್ಯಾರ್ಥಿಗಳನ್ನು   ಸಮ್ಮಾನಿಸಲಾಯಿತು. ಶೇ.100 ಫಲಿತಾಂಶವನ್ನು ಪಡೆದ ಪರಿಸರದ ಶಿಕ್ಷಣ ಸಂಸ್ಥೆಗಳಾದ ಕಿಲ್ಪಾಡಿಯ ಮಹರ್ಷಿ ವಿದ್ಯಾಪೀಠ ಶಾಲೆ ಹಾಗೂ ಮೆಡಲಿನ್‌ ವಿದ್ಯಾಸಂಸ್ಥೆಯನ್ನು  ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು. 

Advertisement

ಮೂಲ್ಕಿ ನಗರ ಪಂಚಾಯತ್‌ ಸದಸ್ಯರಾದ ಯೋಗೀಶ್‌ ಕೋಟ್ಯಾನ್‌, ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಮತ್ತು  ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ ಅತಿಥಿಗಳಾಗಿದ್ದರು.
ನವದುರ್ಗಾ ಯುವಕ ವೃಂದದ ಜಯ ಸಿ.ಪೂಜಾರಿ ಸ್ವಾಗತಿಸಿದರು. ಸುರೇಶ್‌ ಡಿ.ಎಸ್‌.ವಂದಿಸಿದರು.
ವಿಜಯ ಕುಮಾರ್‌ ಕುಬೆವೂರು ಮತ್ತು ಉದಯ ಅಮೀನ್‌ ಮಟ್ಟು ಕಾರ್ಯಕ್ರಮ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next