ಕೊರೊನಾದಿಂದಾಗಿ ದೇಶದ ಅರ್ಥ ವ್ಯವಸ್ಥೆಯ ಮೇಲೆ ಇನ್ನೂ ಕರಾಳ ಛಾಯೆ ಇದೆ. ಕೇಂದ್ರ ಸರಕಾರ ಫೆ.1ರಂದು ಮಂಡಿಸಲಿರುವ ಮುಂಗಡ ಪತ್ರದಲ್ಲಿ ಹತ್ತು ಹಲವು ಕ್ಷೇತ್ರಗಳಿಗೆ ನೆರವು ನೀಡ ಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ಪ್ರಕಟಿಸಿದ ಆತ್ಮನಿರ್ಭರ ಪ್ಯಾಕೇಜ್ ನಲ್ಲಿ ಕೇವಲ ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ಸೇರ್ಪಡೆ ಮಾಡಲಾಗಿದೆ. ಅದರಲ್ಲಿ ರಾಜ್ಯ ಸರಕಾರಗಳ ವ್ಯಾಪ್ತಿಯಲ್ಲಿರುವ ಹಣಕಾಸು ನಿಗಮ ನಿಯಮಿತಗಳು ಇವೆ. ಅದರಲ್ಲಿಯೂ ಕೂಡ ಸ್ವಾವಲಂಬನೆಯ ಭಾರತದ ಅನ್ವಯ ನೆರವು ನೀಡುವಂತೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು.
ಆನ್‌ಲೈನ್ ಮೂಲಕ ನಡೆಸುವ ಎಲ್ಲ ವಹಿ ವಾಟುಗಳಿಗೆ ತೆರಿಗೆ ವಿಧಿಸಬಾರದು ಎಂದು ಮನವಿ ಮಾಡಿದ್ದೇವೆ. ಮಧ್ಯಮ, ಸಣ್ಣ, ಅತೀ ಸಣ್ಣ ಉದ್ದಿಮೆ ಗಳು ಹಲವು ಚಾಲ್ತಿ ಖಾತೆಗಳನ್ನು ಹೊಂದಲು ಅವಕಾಶ ಮಾಡಿಕೊಡಬೇಕು ಎಂದೂ ಕೇಳಿಕೊಂಡಿ ದ್ದೇವೆ. ಇದರ ಜತೆಗೆ ಎಂಎಸ್‌ಎಂಇ ಕ್ಷೇತ್ರಕ್ಕೆ ಮುಂದಿ ನ 2 ವರ್ಷ ಸಾಲ ಪಾವತಿ ಮಾಡಲು ಸಾಧ್ಯವಾಗದೇ ಇದ್ದರೆ ಅದನ್ನು ಅನುತ್ಪಾದಕ ಆಸ್ತಿ ಎಂದು ಪರಿ ಗಣಿಸುವುದು ಬೇಡ. ಏಕೆಂದರೆ ಸೋಂಕಿನ ಹಿನ್ನೆಲೆ ಯಲ್ಲಿ ನಿಧಾನಕ್ಕೆ ಉದ್ದಿಮೆಗಳು ಚೇತರಿಕೆ ಕಾಣುತ್ತಿವೆ. 2-3 ವರ್ಷಗಳ ಬಳಿಕ ಪರಿಸ್ಥಿತಿ ಸುಧಾರಿಸಲಿದೆ. ತೆರಿಗೆ ಪ್ರಮಾಣದಲ್ಲಿ ಕಡಿಮೆ ಮಾಡುವುದು, ಏರುತ್ತಿರುವ ಉಕ್ಕು ಬೆಲೆ ತಗ್ಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು.
ಗೃಹ ನಿರ್ಮಾಣ ಮಾದರಿ: ಗೃಹ ನಿರ್ಮಾಣ ಕ್ಷೇತ್ರಕ್ಕೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡು ವಂತೆ ಕೈಗಾರಿಕಾ ಕ್ಷೇತ್ರಗಳಿಗೂ ಮುಂದಿನ ಎರಡು ವರ್ಷಗಳ ಕಾಲ ಸಾಲ ನೀಡಿಕೆ ವ್ಯವಸ್ಥೆ ಆಗಬೇಕು ಎನ್ನು ವುದು ನಮ್ಮ ನಿಲುವು. ಅನಂತರ ಸದ್ಯ ಇರುವ ವ್ಯವಸ್ಥೆ ಮುಂದು ವರಿಸಬಹುದು ಎಂದು ಕೇಂದ್ರಕ್ಕೆ ಮನವಿ ಮಾಡಿ ದ್ದೇವೆ. ಕೈಗಾರಿಕೆ ಕ್ಷೇತ್ರಕ್ಕೆ ಸದ್ಯ ಶೇ.11, ಶೇ.12ರ ಬಡ್ಡಿಯಲ್ಲಿ ಸಾಲ ನೀಡಲಾಗುತ್ತದೆ.
ಜಿಎಸ್‌ಟಿ ಸರಳ ಮಾಡಬೇಕು: ಜಿಎಸ್‌ಟಿ ಪಾವತಿ ಮತ್ತು ವಿವರ ಅಪ್‌ಲೋಡ್ ಮಾಡುವ ಸಂದ ರ್ಭದಲ್ಲಿ ಸಂಸ್ಥೆಯ ಸಂಪೂರ್ಣ ವಿವರಗಳನ್ನು ನೀಡ ಬೇಕಾಗು ತ್ತದೆ. ಜಿಎಸ್‌ಟಿ ನೋಂದಣಿ ಸಂಖ್ಯೆ ಹಾಕಿದರೆ ಸಂಸ್ಥೆಯ ಎಲ್ಲ ಮಾಹಿತಿ ಸಿಗುವಂತೆ ವ್ಯವಸ್ಥೆ ಮಾಡ ಬೇಕು. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಎಂಬ ಕೇಂದ್ರದ ಆಶಯ ಸಮರ್ಥವಾಗಿ ಜಾರಿಯಾಗಲು ಇಂಥ ಕ್ರಮ ಅಗತ್ಯ ಎಂದು ವಿತ್ತ ಸಚಿವರಿಗೆ ಮನವಿಯಲ್ಲಿ ಪ್ರಸ್ತಾವ ಮಾಡಿದ್ದೇವೆ. ಸರಿಯಾದ ರೀತಿಯಲ್ಲಿ ಮಾಹಿತಿ ನೀಡದೇ ಇದ್ದವರು ಮತ್ತು ಅದಕ್ಕೆ ಸಹಕರಿಸದೇ ಇದ್ದವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಅಭ್ಯಂತರವಿಲ್ಲ.
ಸ್ಟಾರ್ಟ್‌ಅಪ್ ಗಳಿಗೆ ನೆರವು: ಕಳೆದ ಬಜೆಟ್‌ನಲ್ಲಿ ನವೋದ್ಯಮಗಳಿಗೆ ಶೇ.15 ತೆರಿಗೆ ವಿನಾಯಿತಿ ಪ್ರಕಟಿಸಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಅದು ಸೂಕ್ತ ರೀತಿಯಲ್ಲಿ ಜಾರಿಯಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಅದನ್ನು ಮುಂದುವರಿಸಬೇಕು.
ಹಳಿ ದ್ವಿಗುಣಕ್ಕೆ ಮನವಿ: ಬೆಂಗಳೂರಿನಿಂದ ಮಂಗ ಳೂರಿಗೆ ಇರುವ ರೈಲು ಹಳಿಯನ್ನು ದ್ವಿಪಥಗೊಳಿ ಸಲು ಕೇಂದ್ರ ಸರಕಾರಕ್ಕೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬರುತ್ತಿದ್ದೇವೆ. ಶಿರಾಡಿ ಘಾಟ್‌ನಲ್ಲಿ ಸುರಂಗದ ಮೂಲಕ ರಸ್ತೆ ನಿರ್ಮಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಅದರ ಕೆಲಸ ಶುರುವಾಗಿ ಶೀಘ್ರ ಮುಕ್ತಾಯವಾಗುವ ನಿರೀಕ್ಷೆ ಇದೆ. ಇದರಿಂದಾಗಿ ಚೆನ್ನೈ, ಕೊಚ್ಚಿಗೆ ಸರಕು ಸಾಗಣೆ ಮಾಡುವವರು ಮಂಗಳೂರು ಬಂದರಿಗೆ ಸಾಗಿ ಸಲಿದ್ದಾರೆ. ಇದರಿಂದ ರಾಜ್ಯಕ್ಕೂ ಅನು ಕೂಲ ವಾಗಿ ಪರಿಣಮಿಸಲಿದೆ.