ಶಹಾಬಾದ: ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಗ್ರಾಮೀಣ ಸಂಸ್ಥೆಗಳ ಪದಾಧಿಕಾರಿಗಳು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದು ಭಂಕೂರ ಹಿರೋಡೇಶ್ವರ ರೈತ ಉತ್ಪಾದಕರ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ ಗುರು ಪಿ.ಎಚ್ ಹೇಳಿದರು.
ತಾಲೂಕಿನ ಭಂಕೂರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜ್ಞಾನ ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಕೃಷಿ, ಕುರಿ ಸಾಕಣೆಯಂತ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಬಹುದು. ಈ ನಿಟ್ಟಿನಲ್ಲಿ ಜ್ಞಾನವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕೆಲಸ ಮಾಡಲಿ ಎಂದರು. ನಿವೃತ್ತ ಶಿಕ್ಷಕ ಎಚ್.ವೈ.ರಡ್ಡೇರ್ ಮಾತನಾಡಿ, ಸರ್ಕಾರೇತರ ಸಂಸ್ಥೆಯಾದ ಜ್ಞಾನ ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆ ಈಗ ಕಣ್ಣು ತೆರೆದಿದೆ. ಹಂತಹಂತವಾಗಿ ಬೆಳೆಯಲಿ ಎಂದರು.
ಶಿಕ್ಷಕ ಮಲ್ಲಿನಾಥ ಜಿ.ಪಾಟೀಲ ಮಾತನಾಡಿದರು. ಗ್ರಾಪಂ ಸದಸ್ಯ ಶರಣಗೌಡ ದಳಪತಿ, ಬಸವ ಸಮಿತಿ ಪ್ರೌಢಶಾಲೆ ಮುಖ್ಯ ಶಿಕ್ಷಕ ರಮೇಶ ಅಳ್ಳೋಳ್ಳಿ ವೇದಿಕೆ ಮೇಲಿದ್ದರು. ಸಂಸ್ಥೆ ಅಧ್ಯಕ್ಷ ವಿರೇಂದ್ರ.ಸಿ.ರಾಠೊಡ, ಕಾರ್ಯದರ್ಶಿ ಉತ್ತಮ ಡಿ.ಚವ್ಹಾಣ, ಉಪಾಧ್ಯಕ್ಷ ಭಗವಂತ, ಖಜಾಂಚಿ ನಾಗೇಂದ್ರ ಚೆಂಗಟಿ, ಸದಸ್ಯರಾದ ಆನಂದ ಎಂ.ರಾಠೊಡ, ಸುನೀಲಕುಮಾರ, ಮಧುಮತಿ.ಜೆ.ಚವ್ಹಾಣ ಇದ್ದರು.