Advertisement

ಖಾಸಗಿ ಆಸ್ಪತ್ರೆಗಳಿಗೂ ಸಬ್ಸಿಡಿ ನೀಡಲಿ: ಡಾ.ಎಸ್.ಪಿ.ಯೋಗಣ್ಣ

10:51 PM Jun 10, 2022 | Team Udayavani |

ಹುಣಸೂರು: ಸರ್ಕಾರಗಳು ಉದ್ದಿಮೆ, ಕೈಗಾರಿಕೆಗಳಿಗೆ ನೀಡುವಂತೆ ಖಾಸಗಿ ಆಸ್ಪತ್ರೆಗೆಳ ಶಸ್ತ್ರ ಚಿಕಿತ್ಸಾ ಪರಿಕರ ಹಾಗೂ ಅತ್ಯಾಧುನಿಕ ಸಲಕರಣೆಗಳಿಗೆ ಸಬ್ಸಿಡಿ ನೀಡಿದಲ್ಲಿ ಬಡವರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡಲು ಸಾದ್ಯವಾಗಲಿದೆ ಎಂದು ಮೈಸೂರಿನ ಸುಯೋಗ್ ಆಸ್ಪತ್ರೆ ಮುಖ್ಯಸ್ಥ ಡಾ.ಎಸ್.ಪಿ.ಯೋಗಣ್ಣ ತಿಳಿಸಿದರು.

Advertisement

ಹುಣಸೂರು ತಾಲೂಕಿನ ಕೆಂಡಗಣಸ್ವಾಮಿ ಗದ್ದಿಗೆ ಗ್ರಾಮದಲ್ಲಿ ರಾಜ್ಯ ತೋಟಗಾರಿಕೆ ಮಂಹಾಮಂಡಳಿ ಉಪಾಧ್ಯಕ್ಷ ಸೂರ್ಯಕುಮಾರ್ ನಿರ್ಮಿಸಿರುವ ಸೂರ್ಯ ಯಶೋಧ ಆಸ್ಪತ್ರೆ ಉಧ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ದೇಶದ ಜನತೆಗೆ ಆರೋಗ್ಯ ಸೇವೆ ನೀಡಲು ಸರ್ಕಾರಗಳು ವಿಫಲವಾಗಿದರೂ, ಕೆಲವರು ಖಾಸಗಿ ಆಸ್ಪತ್ರೆ ಎಂದರೆ ದಂಧೆಕೋರರಂತೆ ಕಾಣುತ್ತಾರೆ. ಆದರೆ ಖಾಸಗಿ ಆಸ್ಪತ್ರೆ ನಡೆಸುವುದು ಸುಲಭದ ಕೆಲಸವಲ್ಲ. ಸರ್ಕಾರಗಳು ಕೈಗಾರಿಕೆ, ಉದ್ದಿಮೆ ಹಾಗೂ ಇತರೆ ಕ್ಷೇತ್ರಗಳಿಗೆ ನೀಡಿದಂತೆ ಖಾಸಗಿ ಆಸ್ಪತ್ರೆಗಳ ಆತ್ಯಧುನಿಕ ಸಲಕರಣೆಗಳಿಗೆ ಸಬ್ಸಿಡಿ ನೀಡಿದರೆ ನಾವುಗಳು ಕನಿಷ್ಠ ದರದಲ್ಲಿ ಬಡವರಿಗೆ ಆರೋಗ್ಯ ಸೇವೆ ನೀಡಲು ಸಾಧ್ಯ, ನಗರ ಪ್ರದೇಶದಲ್ಲಿ ಆಸ್ಪತ್ರೆ ಆರಂಭಿಸಿ ಸಾಕಷ್ಟು ಸಂಕಷ್ಟಗಳು ಎದುರಾಗುತ್ತವೆ. ಆದರೆ ಗದ್ದಿಗೆಯಂತ ಹಳ್ಳಿಯಲ್ಲಿ ಸುಸಜ್ಜಿತ ಆಸ್ಪತ್ರೆ ಆರಂಭಿಸುವ ಮೂಲಕ ಗ್ರಾಮೀಣ ಭಾಗದ ಜನರ ಸೇವೆಗೆ ಸೂರ್ಯಕುಮಾರ್ ಕುಟುಂಬ ನಿಂತಿರುವುದನ್ನು ಶ್ಲಾಘಿಸಿ, ತಮ್ಮ ಸುಯೋಗ್ ಆಸ್ಪತ್ರೆಯಿಂದಲೂ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.

ಸೂರ್ಯ ಕುಮಾರ್ ಮಾತನಾಡಿ ತಮ್ಮ ಇಬ್ಬರು ಮಕ್ಕಳು ಸಹ ವೈದ್ಯರಾಗಿದ್ದು, ಇವರ ಸೇವೆ ನಮ್ಮೂರಿನ ಸುತ್ತಮುತ್ತಲಿನ ಜನರಿಗೆ ಸಿಗಲೆಂದು ತಾವು ಇಲ್ಲಿ ಆಸ್ಪತ್ರೆ ನಿರ್ಮಿಸಿದ್ದು, ಸದಾ ಜನರ ಸೇವೆಗಾಗಿ ತಮ್ಮ ಕುಟುಂಬ ಮೀಸಲಿರಲಿದೆ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ ನಿರ್ಮಲಾನಂದನಾಥ ಸ್ವಾಮಿಜಿ ಇತರೆ ಜೀವಿಗಳ ಜನ್ಮ ಭೋಗಕ್ಕಾಗಿ ಮಾತ್ರ ಸೀಮಿತಗೊಳಿಸಿದ ದೇವರು ಮನುಷ್ಯ ಜನ್ಮವನ್ನು ಮಾತ್ರ ಯೋಗಕ್ಕಾಗಿ ಸಿಮೀತಗೋಳಿಸಿರುವುದರಿಂದ ಅದನ್ನು ಸರಿಯಾದ ಮಾರ್ಗದಲ್ಲಿ ಸದುಪಯೋಗಪಡಿಸಿಕೊಂಡು ಇತರರಿಗೆ ಸೇವೆ ಮಾಡುವುದೆ ಮನುಷ್ಯನ ಬದುಕಿಗೆ ಅರ್ಥ, ಪ್ರಸ್ತುತ ಆರೋಗ್ಯಕ್ಕಿಂತ ಮಹಭಾಗ್ಯ ಮತ್ತೊಂದಿಲ್ಲ, ಈ ನಿಟ್ಟಿನಲ್ಲಿ ಸೂರ್ಯಕುಮಾರ್ ಗ್ರಾಮಾಂತರ ಮಂದಿಗೆ ಆರೋಗ್ಯ ಸೇವೆ ನೀಡಲು ಮುಂದಾಗಿರುವುದು ಪ್ರಶಂಸನೀಯ ಎಂದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮಿ, ಕಾಗಿನೆಲೆ ಶಾಖಾ ಮಠದ ಶಿವಾನಂದಪುರಿಸ್ವಾಮಿ, ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮಿಜಿ, ಗದ್ದಿಗೆ ದೇವಾಲಯದ ಪ್ರಧಾನ ಅರ್ಚಕ ಕೆಂಡಗಣ್ಣಪ್ಪ, ಮುಖಂಡರಾದ ಕೆ.ಪಿ.ಬಸವೇಗೌಡ, ಮಂಗಳ ರತ್ನಯ್ಯಾಚಾರ್, ಕೆಂಡಗಣ್ಣಶೆಟ್ಟಿ,ವಸಂತಕುಮಾರ್, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೆಶಕ ಡಾ ಯೋಗೇಶ್‌ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next