Advertisement

ಜೀವನ ಸುಜ್ಞಾನ -ಅನುಭವ ಪ್ರಧಾನವಾಗಿರಿಸೋಣ

01:08 AM Dec 25, 2021 | Team Udayavani |

ನಯ-ವಿನಯಗಳ ಪ್ರತಿರೂಪದ, ಉಲ್ಲಾಸಮಯ, ಸಾಧನಾಭರಿತ ಜೀವನಕ್ಕೆ ಸುಜ್ಞಾನ, ಅನುಭವ ಸೋಪಾನ ವಾಗಬೇಕು. ಹಾಗಾದಾಗ ಮಾತ್ರ ಜೀವನಕ್ಕೆ ಸುಂದರ ಆಕೃತಿ ಸಿಗಲು ಸಾಧ್ಯ. ಇಲ್ಲವಾದರೆ ಬದುಕು ನೀರಸ, ಬರ
ಡಾಗುವ ಸಂಭವ ಅಧಿಕ. ಜೀವನ ಪಯಣದಲ್ಲಿ ತಿರುವುಗಳಿವೆ. ಈ ತಿರುವುಗಳಲ್ಲಿ ನೋವು, ನಲಿವಿನ ಅನುಭವಗಳಿವೆ. ಈ ಅನುಭವ ನಮಗೆ ಸಾವಿರ ಪಾಠ ಕಲಿಸುತ್ತದೆ. ಜೀವನದ ಅನುಭವ ಪ್ರಾಪ್ತಿಯ ಪಯಣ ಮಾತ್ರ ನಿರಂತರ ವಾಗಿರಬೇಕು. ನದಿಯಂತೆ ಹರಿದು, ಸಾಗರದಂತೆ ವಿಸ್ತಾರವಾದರೆ ಚೆನ್ನ.

Advertisement

ಈ ಮೇಲಿನ ಯುಕ್ತಿಗಳು ಅನುಭವ ಮಂಟಪ ಕಟ್ಟಲು, ಅನುಭವದ ಜತೆ ಅನುಸಂಧಾನಗೆೃಯ್ಯಲು ಅನುಭವ ಜೀವನ ದಲ್ಲಿ ಭದ್ರಬುನಾದಿಯಾಗಲು ಪ್ರೇರೇಪಿ ಸುವಂಥವುಗಳು. ಅನುಭವ ಕೇವಲ ನಾಲ್ಕು ಅಕ್ಷರಗಳ ಪದವಾಗಿರಬಹುದು. ಆದರೆ ವಿಶಾಲವಾದ ವ್ಯಾಪ್ತಿ ಹೊಂದಿ ರುವ, ಶಬ್ದ. ಮರುಭೂಮಿಯ ಓಯ ಸಿಸ್‌ ಥರಾ. ಬಾಳಲ್ಲಿ ಮುನ್ನಡೆಯಲು ದೀವಟಿಗೆ. ಬದುಕಲ್ಲಿ ಸಾಧನೆಗಳು ಸುಲಭದಲ್ಲಿ ದಕ್ಕುವುದಿಲ್ಲ. ಸುಲಭದ ಸಾಧನೆಯ ಸ್ವಾದವೂ ಅಷ್ಟಕಷ್ಟೇ. ಸಾಧನೆಯ ಹಿಂದಿನ ಪರಿಶ್ರಮ, ಅನುಭವ ಅಗಾಧ ವಾಗಿದ್ದು ಮೇಲ್ನೋಟಕ್ಕೆ ಇದು ಕಾಣದೇ ಇರಬಹುದು. ಸಾಧನೆ ಹಿನ್ನೆಲೆಯ ಚಿಂತನ- ಮಂಥನ ನಡೆಸಿದರೆ ಪ್ರಯತ್ನ, ಪರಿಶ್ರಮಗಳು ಎದ್ದು ತೋರುತ್ತವೆ. ಸೋಲು- ಗೆಲುವು ನಮ್ಮನ್ನು ಅನುಭವದೆ ಡೆಗೆ ಕೊಂಡೊಯ್ಯುತ್ತದೆಯಾದ್ದರಿಂದ ನಮ್ಮ ಪ್ರಯತ್ನ ನಿರಂತರವಾಗಿರಬೇಕು.

ಹೀಗೆ ಜೀವನವೊಂದು ವಿಸ್ಮಯ ಅನುಭವಗಳ ಆಗರ. ಜೀವನ ಸಂಚಾರಿ ಪಾಠ ಶಾಲೆಯು ಸರಿ, ವಿಶ್ವ ವಿದ್ಯಾ ನಿಲಯಯವೂ ಹೌದು. ಜೀವನ ಯಾವತ್ತೂ ನಿಂತ ನೀರಾಗಬಾರದು. ಸದಾ ಚಲನಶೀಲವಾಗಿರಬೇಕು. ಕ್ರಿಯಾ ಶೀಲತೆ, ಸೃಜನಶೀಲತೆಗಳ ಸಂಗಮವಾಗ ಬೇಕು. ಬದುಕಲ್ಲಿ ನಾವು ಒಂದೊಂದು ಹೆಜ್ಜೆಯಿಟ್ಟಂತೆ ಹೊಸ ಅನುಭವ, ಜ್ಞಾನ ಪ್ರಾಪ್ತಿಯಾಗುತ್ತದೆ. ಅನುಭವ-ಜ್ಞಾನ ಹೆಚ್ಚಾದಂತೆ, ಆತ್ಮವಿಶ್ವಾಸ, ಧನಾತ್ಮಕತೆ ವೃದ್ಧಿಸುತ್ತದೆ. ಅನಂತರ ಇದೇ ಆತ್ಮ ವಿಶ್ವಾಸ, ಧನಾತ್ಮಕತೆ ಸಾಧನೆಯಾಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ಬದುಕನ್ನು ಅನುಭವ -ಸುಜ್ಞಾನದ ಸಂಪಾದನೆಯತ್ತ ಸದಾ ತೆರೆದಿಡಬೇಕು ಮತ್ತು ಇವುಗಳಿಂದ ಸಾಧನೆಯತ್ತ ಕೇಂದ್ರೀಕೃತ
ಗೊಳಿಸಬೇಕು. ಅನುಭವ ನೀಡಿದ ಪಾಠಗಳು ಸ್ಮತಿ ಪಟಲದಲ್ಲಿ ಅಚ್ಚೊತ್ತಿ ನಮ್ಮನ್ನು ಸಮರ್ಪಕ ಪಥದಲ್ಲಿ ಕೊಂಡೊಯ್ಯುತ್ತವೆ.

“ದೇಶ ಸುತ್ತು ಕೋಶ ಓದು’ ಎಂಬಂತೆ ನಾನಾ ಭಾಗಗಳ ಪ್ರವಾಸ, ವಿವಿಧ ಜನಜೀವನಗಳ ಬಗ್ಗೆ ತಿಳಿವಳಿಕೆ, ನಮ್ಮ ಧರ್ಮ ಗ್ರಂಥಗಳ ಓದುವಿಕೆ, ಅನುಭವಸ್ಥ- ಹಿರಿಯರೊಡನೆ ಸಲ್ಲಾಪ, ಸಾಮಾಜಿಕ ಜಾಲ ತಾಣ. ಮುದ್ರಣ- ದೃಶ್ಯ ಮಾಧ್ಯಮಗಳೊಂದಿಗೆ ಸಂಬಂಧ, ಕಾವ್ಯ- ಸಾಹಿತ್ಯ -ಕಾದಂಬರಿಗಳ ಓದುವಿಕೆ, ತಾಳಮದ್ದಲೆ ಯಕ್ಷಗಾನ, ನಾಟಕ ಗಳಂತಹ ಕಲಾಪ್ರಕಾರಗಳ ಆಸಕ್ತಿ, ಧಾರ್ಮಿಕ ಕ್ರಿಯಾ ಕಲಾಪಗಳಲ್ಲಿ ತೊಡ ಗಿಸಿ ಕೊಳ್ಳುವಿಕೆ, ಜ್ಞಾನಿ- ಪ್ರಾಜ್ಞರೊಂದಿಗೆ ಒಡನಾಟ, ನಾನಾ ಸಾಧಕರ ಸಾಧನೆಯ ಬಗ್ಗೆ ತಿಳಿಯುವುದು.. ಇವೆಲ್ಲವುಗಳ ನಿರಂತರತೆಗಳಿಂದ ಅನುಭವ ರಾಶಿ ಶೇಖರಣೆಯಾಗುವುದು.

ನುರಿತ-ಪರಿಣತ ಅನುಭವವು ಬಾಳಿಗೆ ಭರವಸೆಯ ಬೆಳಕಾಗಿ, ಚೆೃತನ್ಯ ದಾಯಕ ವಾಗಿ ಜೀವನವನ್ನು ಉನ್ನತಿಯತ್ತ ಕೊಂಡೊಯ್ಯುತ್ತದೆ. ಜೀವನದ ಸ್ವರೂಪಕ್ಕೆ ಸುಂದರ ರೂಪ, ಚೇತೋಹಾರಿ ಆಕೃತಿ ನೀಡುತ್ತದೆ. ಕಿಶೋರಾವಸ್ಥೆಯಿಂದ ಹಿಡಿದು ಮುದಿತನವರೆಗಿನ ಬದುಕಿಗೆ, ವಿವಿಧ ಹಂತಗಳಲ್ಲಿ ಅನುಭವದ ಆವಶ್ಯ ಕತೆ ಬೇಕಾಗುತ್ತದೆ. ಕಾಲದ ಬೇಡಿಕೆ ಯನ್ವಯ ಆಯಾಯ ಅನುಭವ ಗಳಿಸಿ ಮುನ್ನಡೆದರೆ ಬಾಳು ಅಮೃತ- ಸುಮ ಧುರವಾಗುವುದು ನಿಸ್ಸಂಶಯ.

Advertisement

ಸುಜ್ಞಾನದ ಬದುಕು ಅಸೀಮವಾ ದುದು. ಅನುಭವ-ಜ್ಞಾನ ರಾಶಿಯಜೀವನ, ಬದುಕಿನ ಅರಿವಿನ ತಣ್ತೀಗುಣ ಗಳನ್ನು ಸು#ರಿಸಿ ಮಾನವನನ್ನು ಅಲೌಕಿಕ- ಲೌಕಿಕ ಸಾಧನೆಯೆಡೆಗೆ ಕೊಂಡೊಯ್ಯು ತ್ತದೆ. ಸುಸಂಸ್ಕೃತ ನಾಗರಿಕತೆಗೆ, ಸಾರ್ಥಕಬದುಕಿಗೆ ಹೇತುವಾಗುತ್ತದೆ.ಸುಜ್ಞಾನಿಗಳ ಬದುಕು ಪ್ರೇರಣಾಸ್ರೋತ ವಾಗಿದ್ದು ಇಂಥವರ ವ್ಯಕ್ತಿತ್ವ ಆಕರ್ಷಕವಾಗಿರು ವುದು. ಹೀಗೆ ಜನಜೀವನ ಅನುಭವ ಜನ್ಯದೆಡೆಗೆ ಸಾಗಬೇಕು.

- ಸಂದೀಪ್‌ ನಾಯಕ್‌ ಸುಜೀರ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next