Advertisement

Udupi: ನ್ಯಾಯವಾದಿಗಳು ನ್ಯಾಯಾಂಗ ಸೈನಿಕರಂತೆ ಕಾರ್ಯನಿರ್ವಹಿಸಲಿ: ನ್ಯಾ| ಬಿ. ವೀರಪ್ಪ

12:19 AM Dec 04, 2024 | Team Udayavani |

ಉಡುಪಿ: ಕಠಿನ ಶ್ರಮ, ಶೃದ್ಧೆ, ಏಕಾಗ್ರತೆಯಿಂದ ಪರಿಪೂರ್ಣ ನ್ಯಾಯವಾದಿಗಳಾಗಬಹುದು. ಭ್ರಷ್ಟಾ ಚಾರದ ವಿರುದ್ಧ ವಕೀಲರ ಸಂಘಗಳು ಕಾರ್ಯೋನ್ಮುಖವಾಗ ಬೇಕು. ನ್ಯಾಯ ವಾದಿಗಳು ನ್ಯಾಯಾಂಗ ಸೈನಿಕರಂತೆ ಕಾರ್ಯನಿರ್ವಹಿಸಿದರೆ ಮಾತ್ರ ಸೂಕ್ತ ನ್ಯಾಯ ಒದಗಿಸಲು ಸಾಧ್ಯ ಎಂದು ಉಪ ಲೋಕಾಯುಕ್ತ ನ್ಯಾ| ಬಿ.ವೀರಪ್ಪ ತಿಳಿಸಿದರು.

Advertisement

ಜಿಲ್ಲಾ ನ್ಯಾಯಾಲಯದ ಆವರಣ ದಲ್ಲಿ ಮಂಗಳವಾರ ಉಡುಪಿ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನ್ಯಾಯವಾದಿಗಳು ಸತ್ಯದ ರಕ್ಷಕರು. ಯಾವುದೇ ಭಯವಿಲ್ಲದೆ ಕಾನೂನು ರಕ್ಷಿಸುತ್ತಾರೆ. ಗ್ರಾಮ, ಆಸ್ಪತ್ರೆ, ಹಾಸ್ಟೆಲ್‌ಗ‌ಳಿಗೆ ತೆರಳಿ ಮತ್ತಷ್ಟು ಕಾನೂನು ಜಾಗೃತಿ ಮಾಡುವ ಕೆಲಸ ನ್ಯಾಯವಾದಿಗಳಿಂದ ನಡೆಯಬೇಕು ಎಂದರು.
ದೇಶದಲ್ಲಿ ಪ್ರಸ್ತುತ 5 ಕೋಟಿ ಪ್ರಕ ರಣಗಳು ಬಾಕಿ ಇವೆ. ಜಗತ್ತಿನ ಇತರ ನ್ಯಾಯಾಂಗ ವ್ಯವಸ್ಥೆಗೆ ಹೋಲಿ ಸಿದರೆ ನಮ್ಮಲ್ಲಿ ತ್ವರಿತವಾಗಿ ಪ್ರಕ ರಣಗಳ ವಿಲೇವಾರಿಯಾಗುತ್ತಿದೆ ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್‌ ಎಸ್‌. ಗಂಗಣ್ಣನವರ್‌ ಅಧ್ಯಕ್ಷತೆ ವಹಿಸಿದ್ದರು. ಉಪಲೋಕಾಯುಕ್ತ ನ್ಯಾ| ಬಿ. ವೀರಪ್ಪ ಹಾಗೂ ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾ| ಎ.ಎಸ್‌.ಬೋಪಣ್ಣ ಅವರನ್ನು ಸಮ್ಮಾನಿಸಲಾಯಿತು.

ದೇಶದ ಪ್ರಥಮ ರಾಷ್ಟ್ರಪತಿ, ನ್ಯಾಯವಾದಿ ರಾಜೇಂದ್ರ ಪ್ರಸಾದ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸ ಲಾಯಿತು. ನೂತನ ಕ್ಯಾಲೆಂಡರ್‌ ಅನ್ನು ಬಿಡುಗಡೆಗೊಳಿಸಲಾಯಿತು.

Advertisement

ಸಂಘದ ಅಧ್ಯಕ್ಷ ರೆನೋಲ್ಡ… ಪ್ರವೀಣ್‌ ಕುಮಾರ್‌ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್‌ ಎ.ಆರ್‌ ವಂದಿಸಿದರು. ಟಿ. ಭಾಗವತ ಕೆ.ಜೆ. ಗಣೇಶ್‌ ಪ್ರಾರ್ಥಿಸಿದರು. ನ್ಯಾಯವಾದಿ ಸಹನಾ ಕುಂದರ್‌ ನಿರೂಪಿಸಿದರು.

ನ್ಯಾಯವಾದಿಗಳ ಕೊಡುಗೆ ಅಪಾರ
ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾ| ಎ.ಎಸ್‌. ಬೋಪಣ್ಣ ಉದ್ಘಾಟಿಸಿ, ಸ್ವಾತಂತ್ರ್ಯ ಹೋರಾಟ ಸಹಿತ ದೇಶದ ಅಭಿವೃದ್ಧಿಯಲ್ಲಿ ನ್ಯಾಯವಾದಿಗಳ ಕೊಡುಗೆ ಅಪಾರ. ವ್ಯಾಜ್ಯಗಳನ್ನು ತ್ವರಿತವಾಗಿ ಬಗೆಹರಿಸಬೇಕು. ನ್ಯಾಯ ಒದಗಿಸುವ ಆತ್ಮವಿಶ್ವಾಸ ನ್ಯಾಯವಾದಿಗಳಲ್ಲಿರಬೇಕು. ಸಾಮಾಜಿಕ ಸಮಸ್ಯೆಗಳ ನ್ನು ಇತ್ಯರ್ಥಪಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next