ಸಿಎಂ ಹುದ್ದೆಯಿಂದ ಕೇಜ್ರಿವಾಲ್‌ರನ್ನು ಕಿತ್ತು ಹಾಕುವಂತೆ ನಿರ್ದೇಶನ ಕೋರಿ ಸಲ್ಲಿಕೆಯಾಗಿದ್ದ 2ನೇ ಪಿಐಎಲ್ ಕುರಿತು ದಿಲ್ಲಿ ಹೈಕೋರ್ಟ್‌ನ ಹಂಗಾಮಿ ನ್ಯಾ| ಮನಮೋಹನ್ ಮತ್ತು ನ್ಯಾ| ಮನ್‌ಮಿತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ಪೀಠವು, ರಾಷ್ಟ್ರದ ಹಿತಾಸಕ್ತಿ ಬಂದಾಗ ವೈಯಕ್ತಿಕ ಹಿತಾಸಕ್ತಿಗಳು ಗೌಣವಾಗಬೇಕು ಎಂದು ಮಾರ್ಮಿಕವಾಗಿ ಹೇಳಿತು.
Advertisement
ಕೇಜ್ರಿವಾಲ್ ಫೋಟೋ!ಕೇಜ್ರಿವಾಲ್ ಆಪ್ ಶಾಸಕರಿಗೆ ಬರೆದ ಸಂದೇಶವನ್ನು ಅವರ ಪತ್ನಿ ಸುನೀತಾ ಓದಿದ್ದಾರೆ. ಈ ವೇಳೆ, ಗೋಡೆ ಮೇಲೆ ಒಂದು ಬದಿಯಲ್ಲಿ ಭಗತ್ ಸಿಂಗ್ ಮತ್ತು ಮತ್ತೂಂದು ಬದಿಯಲ್ಲಿ ಅಂಬೇಡ್ಕರ್ ಹಾಗೂ ಮಧ್ಯೆ ಜೈಲಲ್ಲಿರುವ ಕೇಜ್ರಿವಾಲ್ ಫೋಟೋ ಕಂಡು ಬಂತು.