Advertisement

ಕನ್ನಡ ಹೋರಾಟಗಾರರು ಸೇನಾನಿಗಳಾಗಲಿ

03:40 PM Sep 01, 2022 | Team Udayavani |

ಯಡ್ರಾಮಿ: ನಾಡು-ನುಡಿ, ಭಾಷೆ-ಗಡಿ ರಕ್ಷಣೆಗೆ ಕಂಕಣ ಬದ್ಧರಾಗ ಬಯಸುವ ಯುವ ಕಾರ್ಯಕರ್ತರು ಜಾತಿ, ಧರ್ಮಗಳ ವಾಸನೆ ಸುಳಿಯದಂತೆ ಸೇನಾನಿಗಳಾಗಿ ಕಾರ್ಯನಿರ್ವ ಹಿಸಬೇಕು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ ನವಲಗುಂದ ಹೇಳಿದರು.

Advertisement

ತಾಲೂಕಿನ ಮಳ್ಳಿ ಗ್ರಾಮದಲ್ಲಿ ನೂತನವಾಗಿ ರಚನೆಯಾದ ಜೈ ಕರ್ನಾಟಕ ಸಂಘಟನೆ ಗ್ರಾಮ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಜೈ ಕರ್ನಾಟಕ ಸಂಘಟನೆಯಿಂದ ವಿಶೇಷ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಸಂಘಗಳು ಕಟ್ಟುವುದು ಕೇವಲ ಶಕ್ತಿ ಪ್ರದರ್ಶನಕ್ಕಲ್ಲ. ಸಂಘದ ಮೂಲ ಉದ್ದೇಶಗಳನ್ನು ಈಡೇರಿಸುವತ್ತ ಪ್ರತಿ ಕಾರ್ಯಕರ್ತರು ನಿರಂತರ ಜಾಗೃತಿ ವಹಿಸಬೇಕು ಎಂದರು.

ಗ್ರಾಮದ ಮುಖಂಡ ಗೊಲ್ಲಾಳಪ್ಪಗೌಡ ಪೊಲೀಸ್‌ಪಾಟೀಲ, ಸಂತೋಷ ಯಾದಗಿರಿ, ಗ್ರಾಪಂ ಉಪಾಧ್ಯಕ್ಷ ಬಸನಗೌಡ ಮಾಲಿಪಾಟೀಲ ಸಸಿ ನೆಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖಂಡರಾದ ಮಲರೆಡ್ಡಿ ಕೊಂಗಂಡಿ, ರಮೇಶ ಸಾಹು ಸೂಗೂರ, ಶಿವನಗೌಡ ಪೊಲೀಸ್‌ಪಾಟೀಲ, ರಾಮನಗೌಡ ಪೊಲೀಸ್‌ಪಾಟೀಲ, ಡಾ|ಜಾಫರ್‌ ಗುಡ್ನಾಳ, ಜೈ ಕರ್ನಾಟಕ ತಾಲೂಕು ಅಧ್ಯಕ್ಷ ಅಮರನಾಥ ಕುಳಗೇರಿ, ಗ್ರಾಮ ಘಟಕದ ಅಧ್ಯಕ್ಷ ಸಿದ್ಧನಗೌಡ ಪೊಲೀಸ್‌ಪಾಟೀಲ, ನಿಂಗನಗೌಡ ಲಕ್ಕೊಂಡ, ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಅಮೋಫೆಪ್ಪ ದೇವರಮನಿ ಹಾಗೂ ಗ್ರಾಪಂ ಸದಸ್ಯರು ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next