Advertisement
ಪಡುಬಿದ್ರಿಯಲ್ಲಿ ಪತ್ರಕರ್ತ ರೊಂದಿಗೆ ಅವರು ಮಾತನಾಡಿ, ಕಂಬಳಾಭಿಮಾನಿ ಸಿಎಂ ಸಿದ್ದರಾಮಯ್ಯ ಅವರ ಆಸೆಯಂತೆ ಬೆಂಗಳೂರಿನಲ್ಲಿ ಕಂಬಳ ನಡೆಸುವ ಬಗ್ಗೆ ತಯಾರಿ ನಡೆಸಲಾಗುತ್ತಿದೆ. ರಾಜಧಾನಿಯಲ್ಲಿ ಕಂಬಳ ನಡೆಯುತ್ತಿ ರುವುದು ಹೆಮ್ಮೆಯ ವಿಚಾರವಾಗಿದ್ದು ಕಂಬಳದ ಯಶಸ್ಸಿಗೆ ಎಲ್ಲರ ಸಹಕಾರವೂ ಅತ್ಯಗತ್ಯ ಎಂದರು.
ಸುಮಾರು 1ಎಕ್ರೆ ಜಾಗದಲ್ಲಿ “ಕಂಬಳ ಭವನ’ ನಿರ್ಮಾಣದ ಯೋಜನೆಯಿದೆ. ಕಂಬಳದ ಕ್ರೀಡೆ ಯನ್ನು ಶಿಸ್ತು ಹಾಗೂ ಸಮಯ ಪಾಲನೆಯೊಂದಿಗೆ 24 ಗಂಟೆಗೊಳಗೆ ಮುಕ್ತಾಯಗೊಳಿಸುವುದು, ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸಲಾ ಗುವುದು. ಕಳೆದ ವರ್ಷ 18 ಕಂಬಳ ಜರಗಿತ್ತು. ಈ ಬಾರಿ 24 ಜೋಡುಕೆರೆ ಕಂಬಳಗಳ ಅರ್ಜಿ ಬಂದಿವೆ. ವೇಳಾಪಟ್ಟಿ ಸಿದ್ದಮಾಡುವುದೇ ಸಮಿತಿಯ ಮುಂದಿರುವ ದೊಡ್ಡ ಸವಾಲು. ಇದೀಗ 224 ಜೋಡಿ ಕೋಣಗಳು ಕಂಬಳ ಕೂಟದಲ್ಲಿ ಭಾಗವಹಿಸುತ್ತಿರುವುದು ಇತಿಹಾಸ. ಯುವಕರು, ಮಹಿಳೆಯರಲ್ಲದೇ ವಿದೇಶಿಗರೂ ಈ ಕ್ರೀಡೆಯತ್ತ ಆಕರ್ಷಿತರಾಗಿದ್ದಾರೆ ಎಂದು ಅವರು ವಿವರಿಸಿದರು.