Advertisement
ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಅಖೀಲ ಭಾರತ ಅಂತರ್ ವಿವಿ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗರ ಪ್ರಜ್ಞ ಗೌರವ ಸಮ್ಮಾನ ಕಾರ್ಯಕ್ರಮದಲ್ಲಿ ಭಾಗವಿಹಿಸಿದ ಸಂದರ್ಭದಲ್ಲಿ ನಡೆದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ನಾನು ಕಾರ್ಕಳದ ಅಜೆಕಾರಿನಲ್ಲಿ ಹುಟ್ಟಿ ಬೆಳೆದದ್ದು. ಬಾಲ್ಯದಿಂದಲೇ ಕಬಡ್ಡಿ ಬಗ್ಗೆ ಆಸಕ್ತಿ ಇತ್ತು. ಆಳ್ವಾಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುವ ಸಂದರ್ಭ ಅನೇಕ ಪಂದ್ಯಗಳಲ್ಲಿ ಭಾಗವಹಿಸಿದ್ದೆ. ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಿವಿಯನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದೇನೆ. * ಪ್ರೊ ಕಬಡ್ಡಿ ಬಗ್ಗೆ ಅನಿಸಿಕೆ?
ಪ್ರೊ ಕಬಡ್ಡಿ ಲೀಗ್ ದೇಶಿ ಆಟಕ್ಕೆ ಹೊಸ ಆಯಾಮ ನೀಡಿದೆ. ಹೊಸ ಪ್ರತಿಭೆಗಳಿಗೆ ವೇದಿಕೆ ಆಗುವುದರ ಜತೆಗೆ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ. ತೆಲುಗು ಟೈಟಾನ್ಸ್, ಗುಜರಾತ್, ತಮಿಳ್ ತಲೈವಾಸ್ ಮತ್ತು ಬೆಂಗಾಲ್ ವಾರಿಯರ್ ತಂಡದಲ್ಲಿ ಆಡಿದ್ದೇನೆ. ಅಲ್ಲಿ ಹಿರಿಯ -ಕಿರಿಯ ಆಟಗಾರರ ಸಲಹೆ ಪಡೆದುಕೊಂಡಿದ್ದೇನೆ. ಇದೀಗ ಬೆಂಗಾಲ್ ವಾರಿಯರ್, ಭಾರತ ತಂಡದ ಕಬಡ್ಡಿ ಆಟಗಾರ ಮಣೀಂದರ್ ಸಿಂಗ್ ಅವರೊಂದಿಗೆ ಆಡಲು ಅವಕಾಶ ದೊರಕಿದೆ. ಅವರಿಂದ ಸಲಹೆಗಳನ್ನು ಪಡೆದು ಮುಂದೆ ಭಾರತ ತಂಡವನ್ನು ಪ್ರತಿನಿಧಿಸುವ ಹಂಬಲವಿದೆ.
Related Articles
ಭಾರತದ ಮಣ್ಣಿನ ಕ್ರೀಡೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ವಿದೇಶದಲ್ಲೂ ಪ್ರೊ ಕಬಡ್ಡಿ ಮಾದರಿಯ ಪಂದ್ಯಾಟ ನಡೆಯುವಂತಾಗಬೇಕು. ಇಂದು ಬೆಂಗಳೂರಿನಲ್ಲಿ ಅನೇಕ ಕಬಡ್ಡಿ ಕ್ಲಬ್‌ಗಳು ಹುಟ್ಟಿಕೊಂಡಿವೆ. ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಬಡ್ಡಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಒಲಪಿಕ್ಸ್‌ನಲ್ಲಿ ಕಬಡ್ಡಿ ಸೇರ್ಪಡೆ ಆಗಬೇಕೆಂಬುವುದು ನನ್ನ ಆಶಯ.
Advertisement
* ಅಭಿಮಾನಿಗಳ ಪ್ರೋತ್ಸಾಹ ಹೇಗಿದೆ?ಮಂಗಳೂರು, ಕಾರ್ಕಳದಲ್ಲಿ ಬೆಳೆದಿದ್ದರಿಂದ ಇಲ್ಲಿನ ಪರಿಸರದ ಬಗ್ಗೆ ಪರಿಚಯವಿದೆ. ಇಲ್ಲಿನ ಮೀನು ಊಟ ತುಂಬ ಇಷ್ಟ. ಜನ ಗುರುತಿಸಿ ಆಟೋಗ್ರಾಫ್, ಸೆಲ್ಫಿ ಪಡೆಯುತ್ತಿದ್ದಾರೆ. ಕಬಡ್ಡಿ ಕ್ರೀಡಾಪಟುಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ. ಖುಷಿ ಅನಿಸುತ್ತಿದೆ. * ಇಷ್ಟಪಡುವ ಇತರ ಕ್ರೀಡೆ ಹಾಗೂ ಕ್ರೀಡಾಪಟು ಯಾರು?
ವಾಲಿಬಾಲ್ ಇಷ್ಟದ ಆಟ. ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಮತ್ತು ವಿರಾಟ್ ಕೊಹ್ಲಿ ಇಷ್ಟ.ದ ತಾರೆಯರು. * ಕಾರ್ತಿಕ್ ಚಿತ್ರಾಪುರ