Advertisement
ಜಾಗತಿಕ ಮಟ್ಟದ ಹೂಡಿಕೆದಾರರ ಆಕರ್ಷಣೆ. ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶ. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಜತೆಗೆ ಸಣ್ಣ ಕೈಗಾರಿಕೆಗಳ ಸ್ಥಾಪನೆ ಮತ್ತು ವಹಿವಾಟು ವಿಸ್ತರಣೆಗೆ ಉತ್ತೇಜನ ನೀಡುವ ಉದ್ದೇಶದ ಕೈಗಾರಿಕಾ ನೀತಿ ಜಾರಿಯಾಗಿದೆ. ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಜತೆಗೆ 20 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ. ಕೈಗಾರಿಕಾ ಸ್ನೇಹಿ ವಾತಾವರಣ ಸೃಷ್ಟಿ ಜತೆಗೆ ಉದ್ದಿಮೆದಾರರ ನಿರೀಕ್ಷೆಗಳಿಗೆ ಸ್ಪಂದಿಸುವ ಅಂಶಗಳನ್ನು ನೀತಿ ಒಳಗೊಂಡಿದ್ದು, ಉತ್ತಮ ಸ್ಪಂದನೆಯ ನಿರೀಕ್ಷೆಯಲ್ಲಿ ಇಲಾಖೆ ಇದೆ.
ಪ್ರಸಕ್ತ ಸಾಲಿನಲ್ಲಿ ಜಾರಿಗೊಳಿಸಲಾಗಿರುವ “ಪ್ರಮಾಣಪತ್ರ ಆಧಾರಿತ ಅನುಮತಿ’ ಯೋಜನೆ ಅಡಿಯಲ್ಲಿ ಉದ್ದಿಮೆದಾರರು ಸ್ವಯಂ ಘೋಷಣೆ ಪತ್ರ ಮುಖೇನ ಅತ್ಯಂತ ಸರಳವಾಗಿ ಕೈಗಾರಿಕೆಗಳನ್ನು ಸ್ಥಾಪಿಸ ಬಹುದಾಗಿದೆ. ನಾನಾ ಇಲಾಖೆಗಳ ಆಯ್ದ 15 ಉದ್ಯಮ ಸೇವೆಗಳು ಇದರ ವ್ಯಾಪ್ತಿಗೆ ಬರಲಿವೆ. ಹಾಗೆಯೇ ಕರ್ನಾಟಕ ಕೈಗಾರಿಕಾ ಸೌಲಭ್ಯ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಕೈಗಾರಿಕೆ ಸ್ಥಾಪನೆಗೆ ಭೂಪರಿವರ್ತನೆ, ಕಟ್ಟಡ ನಕ್ಷೆ ಸೇರಿ ಇತರ ಅನುಮತಿ ಪಡೆಯುವವರೆಗೆ ಕೈಗಾರಿಕೆ ಸ್ಥಾಪನೆಗೆ ಕಾಯುವ ಅಗತ್ಯವಿಲ್ಲ. ಜಿಲ್ಲಾ ಹಾಗೂ ರಾಜ್ಯ ಸಮಿತಿಯಿಂದ ಅನುಮತಿ ದೊರೆತ ಕೂಡಲೇ ಕಾಮಗಾರಿ ಆರಂಭಿಸಬಹುದಾಗಿದೆ. ಇದಕ್ಕೆ ಆದ್ಯತೆ ಸಿಗಲಿ
ಆಟೋಮೊಬೈಲ್ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ಸೇವಾ ವಲಯಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವ ಅಗತ್ಯವಿದೆ.
ರಾಜ್ಯದ ದ್ವಿತೀಯ, ತೃತೀಯ ಹಂತದ ನಗರಗಳಲ್ಲಿ ಹೂಡಿಕೆದಾರರು ಕೈಗಾರಿಕೆ ಸ್ಥಾಪಿಸಲು ಪ್ರೋತ್ಸಾಹಿಸಬೇಕು.
Related Articles
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹರಳೂರು- ಮುದ್ದೇನಹಳ್ಳಿಯ ಕೆಐಎಡಿಬಿ ಕೈಗಾರಿಕ ಪ್ರದೇಶದಲ್ಲಿ “ಡಿಫೆನ್ಸ್ ಮತ್ತು ಏರೋಸ್ಪೇಸ್ ಎಕ್ಯುಪ್‌ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್’ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿ ನಲ್ಲಿ ಕೈಗಾರಿಕ ವಸಾಹತು ಸ್ಥಾಪನೆ., ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ತಂತ್ರಜ್ಞಾನ ಸೇವೆ ಕಲ್ಪಿಸಲು ಬೆಂಗಳೂರಿನಲ್ಲಿ “ಸೆಂಟರ್ ಫಾರ್ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್’ ಸಂಸ್ಥೆ ಸ್ಥಾಪನೆ “ಕಾಯರ್ ಎಕ್ಸ್‌ಪೀರಿಯನ್ಸ್ ಸೆಂಟರ್’ ಹಾಗೂ “ತೆಂಗು ಆಧಾರಿತ ಕೈಗಾರಿಕ ಪಾರ್ಕ್’
Advertisement
– ಎಂ. ಕೀರ್ತಿಪ್ರಸಾದ್