Advertisement
ನಗರ ಹೊರವಲಯದ ನಾಗಾವಿ ಬಳಿಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿಯಲ್ಲಿ ಬುಧವಾರ ಆರಂಭಗೊಂಡ ಮೂರು ದಿನಗಳ ಸ್ವರಾಜ್ ಅಂತಾರಾಷ್ಟ್ರೀಯ ಸಮ್ಮೇಳನದ ಭಾಗವಾಗಿ ಆಯೋಜಿಸಿರುವ ಸ್ವರಾಜ್ ಪರಿಕಲ್ಪನೆಯ ವಿವಿಧ ಆಯಾಮಗಳನ್ನು ಬಿಂಬಿಸುವ ಪ್ರದರ್ಶನೀಯಗಳಿಗೆ ಚಾಲನೆ ನೀಡಿ, ಬಳಿಕ ಕೌಶಲ್ಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಕೇಂದ್ರದ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ ಮಾತನಾಡಿ, ಜನತೆಗೆ ಯಾವುದೇ ವಿಷಯದ ಅರ್ಥ ಗೊತ್ತಿದ್ದರೂ ಅದನ್ನು ಪಾಲಿಸುತ್ತಿಲ್ಲ. ಇದು ಸ್ವರಾಜ್ ವಿಷಯದಲ್ಲೂ ಆಗಿದೆ. ಕಲೆ ಮತ್ತು ಸಂಸ್ಕೃತಿ ನಮ್ಮ ಬದುಕಿನ ಭಾಗ ಎಂದು ಬಣ್ಣಿಸಿದರು.
ಗ್ರಾಮೀಣ ವಿಶ್ವವಿದ್ಯಾಲಯದ ಕುಲಪತಿ ಡಾ|ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಈ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಶ್ರೀಲಂಕಾ, ಚೀನಾ, ಇಂಡೋನೇಶಿಯಾ ಸೇರಿದಂತೆ 14 ದೇಶಗಳು ಹಾಗೂ ಭಾರತದ ಹಲವು ರಾಜ್ಯಗಳಿಂದ ಪ್ರತಿನಿ ಧಿಗಳು ಭಾಗವಹಿಸಿದ್ದಾರೆ. ಈ ಸಮ್ಮೇಳನ ಕೇವಲ ಸಂಶೋಧನೆ, ಪ್ರಬಂಧ ಮಂಡನೆ, ಪತ್ರಿಕೆಗಳ ಪ್ರಸ್ತುತಪಡಿಸುವುದಷ್ಟೇ ಅಲ್ಲ, ಸಮ್ಮೇಳನ ಪ್ರಾಯೋಗಿಕ ಪರಿಕಲ್ಪನೆಯಲ್ಲಿ ಇರಲಿದೆ ಎಂದರು.
ಪ್ರಜ್ಞಾ ಪ್ರವಾಹದ ಅಖೀಲ ಭಾರತೀಯ ಸಹ ಸಂಯೋಜಕ ರಘುನಂದನ್, ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ಬಸವರಾಜ ಲಕ್ಕಣ್ಣವರ ವೇದಿಕೆಯಲ್ಲಿದ್ದರು. ಗಿರೀಶ ದೀಕ್ಷಿತ ಸ್ವಾಗತಿಸಿದರು. ಚಂದನಾ ವಿಶ್ವನಾಥ ನಿರೂಪಿಸಿದರು. ಶಶಿಕಾಂತ ಡಿ.ಎಚ್. ವಂದಿಸಿದರು.
ಗದ್ಗದಿತರಾದ ಮಂಜಮ್ಮ ಜೋಗತಿಕೊಲೆಗಾರ ಮಗನನ್ನು, ದುರ್ನಡತೆ ಮಗಳನ್ನು ಸ್ವೀಕರಿಸುವ ಪೋಷಕರು ತೃತೀಯ ಲಿಂಗಿಗಳನ್ನು ಮಕ್ಕಳೆಂದು ಸ್ವೀಕರಿಸುವುದಿಲ್ಲ. ಗರ್ಭದಲ್ಲಿ ನನ್ನಂತಹ ಮಕ್ಕಳು (ತೃತೀಯ ಲಿಂಗಿಗಳು) ಹುಟ್ಟಿದರೆ ಹೊರದೂಡದೇ ಅವರಿಗೂ ಶಿಕ್ಷಣ ಕೊಡಿಸಿದರೆ ಭವಿಷ್ಯದಲ್ಲಿ ಸ್ವಾವಲಂಬಿಗಳಾಗಿ ಬದುಕು ನಡೆಸಬಹುದು ಎಂದು ಜೋಗತಿ ಮಂಜಮ್ಮ ವೇದಿಕೆಯಲ್ಲಿ ಗದ್ಗದಿತರಾಗಿ ಮನವಿ ಮಾಡಿದರು. ಆಹಾರದಲ್ಲೂ ದೇಶೀ ಪದ್ಧತಿ
ಸ್ವರಾಜ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ದೇಶದ ವಿವಿಧ ರಾಜ್ಯಗಳು, ಶ್ರೀಲಂಕಾ, ಚೀನಾ, ಇಂಡೋನೇಶಿಯಾ ಸೇರಿ 14 ದೇಶಗಳ ಪ್ರತಿನಿಧಿಗಳಿಗೆ ರೊಟ್ಟಿ, ಚಪಾತಿ ಜತೆ ಕಿಚಡಿ, ಮಾದಲಿ ಸೇರಿದಂತೆ ದೇಶೀ ಊಟ ಸಿದ್ಧಪಡಿಸಿ ಉಣಬಡಿಸಲಾಗುತ್ತಿದೆ. ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಶ್ರೀಲಂಕಾ, ಚೀನಾ, ಇಂಡೋನೇಶಿಯಾ ಸೇರಿ 14 ದೇಶಗಳು ಹಾಗೂ ಭಾರತದ ಹಲವು ರಾಜ್ಯಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಇದು ಕೇವಲ ಸಂಶೋಧನೆ, ಪ್ರಬಂಧ ಮಂಡನೆ, ಪತ್ರಿಕೆಗಳ ಪ್ರಸ್ತುತ ಪಡಿಸುವುದಷ್ಟೇ ಅಲ್ಲ. ಸಮ್ಮೇಳನ ಪ್ರಾಯೋಗಿಕ ಪರಿಕಲ್ಪನೆಯಲ್ಲಿ ಇರಲಿದೆ.
ಪ್ರೊ| ವಿಷ್ಣುಕಾಂತ ಚಟಪಲ್ಲಿ, ಕುಲಪತಿ, ಗ್ರಾವಿವಿ ಶಿಕ್ಷಣ ಕಲಿಸಿದರೆ ಮಾತ್ರ ವಿವಿಗಳ ಉದ್ದೇಶ ಸಾಕಾರಗೊಳ್ಳುವುದಿಲ್ಲ. ನಯ, ವಿನಯತೆ, ಹಿರಿಯರಿಗೆ ಗೌರವ, ನಮ್ಮ ಸಂಸ್ಕೃತಿ, ನಮ್ಮ ಉಡುಪು, ಆಹಾರ ಪದ್ಧತಿ, ಕೃಷಿ ಬಗ್ಗೆ ವಿವಿಗಳಲ್ಲಿ ಧಾರೆ ಎರೆಯಬೇಕು.
ಪದ್ಮಶ್ರೀ ಮಂಜಮ್ಮ ಜೋಗತಿ