Advertisement
ಕಾರ್ಕಳದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಕಳದ ಚರಿತ್ರೆಯಲ್ಲಿ ಈ ಪರಿಸ್ಥಿತಿ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ಬಾಯಿ ಚಪಲಕ್ಕೆ ಮಾತನಾಡುವವರಿಗೆ ಉತ್ತರ ನೀಡುವುದು ಪ್ರಜಾಪ್ರಭುತ್ವದಲ್ಲಿ ಅನಿವಾರ್ಯ. ನಕಲಿ ಮೂರ್ತಿ ಸ್ಥಾಪಿಸಿ ಧರ್ಮದ ವಿಷಯದಲ್ಲಿ ಇಡೀ ರಾಜ್ಯಕ್ಕೆ ಕಳಂಕ ತಂದಿದ್ದಾ ರೆ. ಆಗಿರುವ ತಪ್ಪನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಏನೇನೋ ಮಾತನಾಡಿದ್ದಾರೆ. ನಾನು ಧರಿಸಿದ್ದ ಉಡುಗೆಯ ಬಗ್ಗೆಯೂ ಮಾತನಾಡಿದ್ದಾರೆ. ಇನ್ನು ಮುಂದೆ ನಾನು ಬೇಕಾದರೆ ಅವರಲ್ಲಿ ಯಾವ ರೀತಿಯ ಉಡುಗೆ ಧರಿಸಬೇಕೆಂದು ಕೇಳಿಯೇ ಉಡುತ್ತೇನೆ ಎಂದರು. ಕಾರ್ಕಳದಲ್ಲಿ ಜಾತಿಗಳ ನಡುವೆ ವೈಷಮ್ಯದ ಬೀಜ ಬಿತ್ತಿ ಕಂದಕ ಮೂಡಿಸಿದ್ದಾರೆ. ನಾನು ರಾಜಕೀಯಕ್ಕೆ ಬಂದಿರುವುದು ಒಳ್ಳೆಯ ಸಾಮಾಜಿಕ ಕಾರ್ಯ ನಡೆಸಲು. ಸುನಿಲ್ ಕುಮಾರ್ ಅವರ ಹಾಗೆ ಅಧಿಕಾರ, ದುಡ್ಡು ಗಳಿಸಲು ಅಲ್ಲ. ಇವರು ಕಾಂಗ್ರೆಸ್‌ನವರಿಗೆ ಮಾಡಿದ ಅನ್ಯಾಯವನ್ನು ಎಳೆಎಳೆಯಾಗಿ ಹೇಳಬಲ್ಲೆ ಎಂದರು.
Related Articles
Advertisement
ಇಡೀ ಪ್ರತಿಮೆಯೇ ನಕಲಿ: ಶುಭದ ರಾವ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಮಾತನಾಡಿ, ಬೆಂಗಳೂರಿನಿಂದ ಪರಶುರಾಮನ ಮೂರ್ತಿಯ ಭಾಗಗಳನ್ನು ಪೊಲೀಸರು ವಶಕ್ಕೆ ಪಡೆದು ತಂದ ಬಳಿಕ ಇಡೀ ಪ್ರತಿಮೆಯೇ ನಕಲಿಯಾಗಿದೆ ಎಂದುಜಗಜ್ಜಾಹೀರಾಗಿದೆ. ಬೆಂಗಳೂರಿನಲ್ಲಿ ಪರಶುರಾಮನ ಮೂರ್ತಿಯ ಕಾಲು ಸೇರಿದಂತೆ ಸೊಂಟದ ಕೆಳಗಿನ ಎಲ್ಲ ಭಾಗಗಳು ದೊರೆತಿರುವುದರಿಂದ ಬೆಟ್ಟದ ಮೇಲೆ ಈಗ ಇರುವ ಭಾಗವೂ ನಕಲಿ ಎಂದು ಸಾಬೀತಾಗಿದೆ. ಶಾಸಕರು ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಹೇಳಿದ್ದ ಸುಳ್ಳು ಜಗತ್ತಿಗೆ ಗೊತ್ತಾಗಿದೆ. ಕಾರ್ಕಳ ಶಾಸಕರು ಕ್ಷಮಾಪಣೆ ಕೇಳಿ ಪ್ರಾಯಶ್ಚಿತ್ತದ ಸಲುವಾಗಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತೇನೆ ಎಂದರು. ಬಿಪಿನ್‌ಚಂದ್ರಪಾಲ್ ನಕ್ರೆ, ವಿವೆಕಾನಂದ ಶೆಣೈ, ದಿನೇಶ್, ಅಜಿತ್‌ಕುಮಾರ್ ಹೆಗ್ಡೆ, ತಾರಾನಾಥ ಕೋಟ್ಯಾನ್, ದಿನೇಶ್ ಶೆಟ್ಟಿ, ಶಶಿಕಲಾ ಉಪಸ್ಥಿತರಿದ್ದರು.