Advertisement

ಪಾಕ್‌ ಇಂಜಿನಿಯರ್‌ಗಳಿಗೆ ಎಲ್‌ಇಟಿ ಮ್ಯಾನೇಜ್‌ಮೆಂಟ್‌ ಕೋರ್ಸ್‌ !

03:48 PM Jun 21, 2018 | udayavani editorial |

ಹೊಸದಿಲ್ಲಿ : ಪಾಕಿಸ್ಥಾನದ ಲಷ್ಕರ್‌ ಎ ತಯ್ಯಬ ಉಗ್ರ ಸಂಘಟನೆ ನಿರುದ್ಯೋಗಿ ಪಾಕ್‌ ಇಂಜಿನಿಯರ್‌ಗಳಿಗೆ ಲಾಹೋರ್‌ನಲ್ಲಿ  ಮ್ಯಾನೇಜ್‌ಮೆಂಟ್‌ ಕೋರ್ಸು ನೀಡುತ್ತಿರುವುದಾಗಿ ಮೂಲಗಳು ತಿಳಿಸಿವೆ. 

Advertisement

ಈ ಕೋರ್ಸ್‌ ಮುಗಿದ ಬಳಿಕ ಪಾಕ್‌ ಇಂಜಿನಿಯರ್‌ಗಳು ಚೀನ-ಪಾಕಿಸ್ಥಾನ ಆರ್ಥಿಕ ವಲಯ ಯೋಜನೆಯಲ್ಲಿ ಉದ್ಯೋಗ ಪಡೆದು ತಮಗೆ ಸಿಗುವ ವೇತನದ ಒಂದು ಭಾಗವನ್ನು  ಭಾರತದ ವಿರುದ್ಧ ಭಯೋತ್ಪಾದಕ ದಾಳಿ ನಡೆಸುವ ಎಲ್‌ಇಟಿ ಉಗ್ರ ಸಂಘಟನೆಗೆ ನೀಡಬೇಕು ಎಂದು ತಾಕೀತು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಪಾಕ್‌ ಇಂಜಿನಿಯರುಗಳಿಗೆ ಉದ್ಯಮ ವ್ಯವಸ್ಥಾಪನೆ ಕೋರ್ಸ್‌ ನಡೆಸುವ ಪರಿಣತಿ ಲಷ್ಕರ್‌ ಉಗ್ರ ಸಂಘಟನೆಗೆ ಏನಿದೆ ಎಂಬ ಮೂಲಭೂತ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ; ಆದರೆ ಪಾಕ್‌ ಇಂಜಿನಿಯರ್‌ಗಳು ಚೀನ-ಪಾಕ್‌ ಆರ್ಥಿಕ ವಲಯದಲ್ಲಿ ಕೆಲಸ ಮಾಡುವ ಮೂಲಕ ಚೀನೀ ಇಂಜಿನಿಯರ್‌ಗಳ ಸುರಕ್ಷೆ ಮತ್ತು ಭದ್ರತೆಗೆ ಇನ್ನಷ್ಟು ಅಪಾಯ ಕಾದಿರುವುದನ್ನು ಶಂಕಿಸಲಾಗಿದೆ. 

ಅಂದ ಹಾಗೆ ಪಾಕ್‌ ಇಂಜಿನಿಯರ್‌ಗಳಿಗೆ ಮ್ಯಾನೇಜ್‌ಮೆಂಟ್‌ ಕೋರ್ಸ್‌ ನೀಡುವ ಸಂಪೂರ್ಣ ಹೊಣೆಗಾರಿಕೆಯನ್ನು  ಎಲ್‌ಇಟಿ ಉಗ್ರ ಮತ್ತು ಮುಂಬಯಿ ದಾಳಿಯ ಮಾಸ್ಟರ್‌ ಮೈಂಡ್‌ ಎನ್ನಲಾದ ಅಬ್ದುಲ್‌ ರೆಹಮಾನ್‌ ಮಕ್ಕಿ ಗೆ ನೀಡಲಾಗಿದೆ.ಸುಮಾರು 300 ಪಾಕ್‌ ಇಂಜಿನಿಯರ್‌ಗಳು ಈಗಾಗಲೇ ಮ್ಯಾನೇಜ್‌ಮೆಂಟ್‌ ಕೋರ್ಸಿಗೆ ಸೇರಿದ್ದಾರೆಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next