ಕುರುಗೋಡು: ಎಂ. ಸೂಗೂರು ಗ್ರಾಮದ 3ನೇ ವಾರ್ಡಿನ ಅಂಬೇಡ್ಕರ್ ನಗರದಲ್ಲಿ ಭೀಮ್ ಆರ್ಮಿ ಸಂಘಟನೆಯ ನೂತನ ಗ್ರಾಮ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪ್ರಾರಂಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಾಗಪ್ಪ ಮಾತನಾಡಿ, ತಾಲೂಕಿನ ದಲಿತ, ಹಿಂದುಳಿದ ಅಲ್ಪಸಂಖ್ಯಾತರು ಸಂವಿಧಾನಾತ್ಮಕವಾದ ಹಕ್ಕುಗಳನ್ನು ಪಡೆಯಲು ನಿರಂತರ ಹೋರಾಟ ನಡೆಸುತ್ತಿದ್ದು, ಯುವಕರನ್ನು ಸಂಘಟಿಸುವ ಉದ್ದೇಶದಿಂದ ನೂತನ ಗ್ರಾಮ ಘಟಕ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಂತರ ಸಂಘದ ತಾಲೂಕು ಅಧ್ಯಕ್ಷ ಕೊಡ್ಲೆ ಧರ್ಮರಾಜ್ ಮಾತನಾಡಿ, ನಮ್ಮ ಸಂಘಟನೆ ಭೀಮ್ ಆರ್ಮಿ ಅಂದರೆ ಒಂದು ಜಾತಿಗೆ, ಒಂದು ಧರ್ಮಕ್ಕೆ, ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ, ಪ್ರತಿಯೊಬ್ಬರ ಪರವಾಗಿ ಕೆಲಸ ಮಾಡುವ ಸಂಘಟನೆಯಾಗಿದೆ. ಸಂವಿಧಾನ ಶಿಲ್ಪಿ, ಭಾರತ ರತ್ನ, ವಿಶ್ವಜ್ಞಾನಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬುದ್ಧ, ಜ್ಞಾನಜ್ಯೋತಿ ಬಸವಣ್ಣ, ಕನಕದಾಸ, ಟಿಪ್ಪು ಸುಲ್ತಾನ, ಪೆರಿಯಾರ್ ರಾಮಸ್ವಾಮಿ, ಜ್ಯೋತಿಬಾಫುಲೆ, ಸಾವಿತ್ರಿ ಬಾಫುಲೆ ಮುಂತಾದ ಮಹನೀಯರ ತತ್ವ ಸಿದ್ಧಾಂತ, ಆದರ್ಶಗಳನ್ನು ಇಟ್ಟುಕೊಂಡು ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಸಮಾಜ ನಿರ್ಮಾಣಕ್ಕಾಗಿ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ವ್ಯಾಖ್ಯೆಯೊಂದಿಗೆ, ಬಹುಸಂಖ್ಯಾತರ ಪರವಾಗಿ, ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿರುವುದರ ವಿರುದ್ಧ, ಬಡಜನರ ಮೇಲೆ ನಡೆಸುತ್ತಿರುವ ದೌರ್ಜನ್ಯ ದಬ್ಬಾಳಿಕೆಗಳ ವಿರುದ್ಧ, ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳ ವಿರುದ್ಧ, ಶೋಷಣೆಯ ವಿರುದ್ಧ, ಕೋಮುವಾದಿಗಳ ವಿರುದ್ಧ, ಮೌಢ್ಯತೆಗಳ ವಿರುದ್ಧ ಜಾಗೃತಿ, ಮೂಡಿಸಿ, ಪ್ರತಿಭಟಿಸಿ ಧ್ವನಿ ಎತ್ತುವಂತಹ ಕೆಲಸ ನಮ್ಮ ಸಂಘಟನೆಯಿಂದ ಮಾಡುತ್ತೇವೆ ಎಂದರು.
ಪದಾಧಿಕಾರಿಗಳು ಆಯ್ಕೆ:
ಅಧ್ಯಕ್ಷರಾಗಿ ಮಾರೆಪ್ಪ, ಉಪಾಧ್ಯಕ್ಷರಾಗಿ ಎಚ್. ಹನುಮಂತಪ್ಪ, ಬಸವರಾಜ್, ಹುಲುಗಪ್ಪ, ಶಿವರಾಮ್, ಅಂಜಿನಪ್ಪ, ನಿಂಗಪ್ಪ, ಗೌರವ ಅಧ್ಯಕ್ಷ ಅಂಜಿನಪ್ಪ ಎಂ., ಪ್ರಧಾನ ಕಾರ್ಯದರ್ಶಿ ಎಂ. ರಮೇಶ್, ಸಹ ಕಾರ್ಯದರ್ಶಿ ಎಚ್. ಆರ್. ಪ್ರಕಾಶ್, ಖಜಾಂಚಿಯಾಗಿ ಎಸ್. ಬಿ.ಬೀರಪ್ಪ ಶೇಖರ್, ಹಾಗೂ ಸುಮಾರು 40 ಕ್ಕೂ ಹೆಚ್ಚು ಸದಸ್ಯರು ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಮಾರೆಪ್ಪ ಕುರುವಳ್ಳಿ, ಹುಲುಗಪ್ಪ ಮಣ್ಣೂರು, ಸಂಘದ ತಾಲೂಕು ಉಪಾಧ್ಯಕ್ಷ ಮಷುದ್, ಟಿಪ್ಪು, ಮುಸ್ತಫ್, ಪ್ರಧಾನ ಕಾರ್ಯದರ್ಶಿ ಪ್ರರ್ತೆಶ್, ಖಜಾಂಚಿ ಅಲಿಬಾಸ್, ಎಎಸ್ಐ ವೆಂಕಟರಮಣ, ವಕೀಲ ಪಕ್ಕೀರಪ್ಪ, ಗ್ರಾಮದ ಮುಖಂಡರಾದ ಎಚ್. ಆರ್. ಮಲ್ಲಪ್ಪ, ದೊಡ್ಡಬಸಪ್ಪ, ಉಳೆನೂರು ನಾಗಪ್ಪ, ವಿರೇಶ್, ಎಚ್. ಆರ್ ಲಕ್ಷಣ, ವಿರೇಶ್, ಹುಲುಗಪ್ಪ,ಸೋಮಶೇಖರ್, ಈರೇಶ್, ಚವುಡಿಕೆ ಈರಣ್ಣ, ವಿರೇಶ್, ನಾಗರಾಜ್, ಜಗದೀಶ್ ಸೇರಿದಂತೆ ಇತರರು ಇದ್ದರು.