Advertisement

ಅಪರಾಧ ತಡೆಗೆ ಪ್ರತಿಯೊಬ್ಬರು ಮುಂದಾಗಲಿ: ಚಂದ್ರಶೇಖರ

03:14 PM Dec 20, 2021 | Team Udayavani |

ಯಾದಗಿರಿ: ದೇಶದ ಕಾನೂನಿಗೆ ಗೌರವಿಸಿ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರತಿಯೊಬ್ಬ ನಾಗರಿಕರು ಸಹಕಾರ ನೀಡಬೇಕು ಎಂದು ನಗರ ಠಾಣೆ ಪಿಎಸ್‌ಐ ಚಂದ್ರಶೇಖರ ತಿಳಿಸಿದರು.

Advertisement

ಇಲ್ಲಿನ ಗಾಂಧಿ ಚೌಕ್‌, ಗಂಜ್‌ ಸರ್ಕಲ್‌, ಹೊಸ ಬಸ್‌ ನಿಲ್ದಾಣ ಹತ್ತಿರ ಪೊಲೀಸ್‌ ಇಲಾಖೆ ವತಿಯಿಂದ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಅಪರಾಧ ಚಟುವಟಿಕೆ ನಡೆಯುವ ಬಗ್ಗೆ ಸಾರ್ವಜನಿಕರು ಜಾಗೃತಿ ವಹಿಸಿ ಪೊಲೀಸ್‌ ಇಲಾಖೆಗೆ ಸಹಕಾರ ನೀಡಬೇಕು. ಅಪರಾಧ ನಡೆಯುವ ಮುನ್ನವೇ ಜಾಗೃತಿ ಮೂಡಿಸುವ ಕಾರ್ಯಕ್ರಮವೇ ಅಪರಾಧ ತಡೆ ಮಾಸಾಚರಣೆಯ ಮುಖ್ಯ ಉದ್ದೇಶವಾಗಿದೆ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದೆ ಎಂದರು.

ದೈವ ಮತ್ತು ದೇವರ ಪೂಜೆ ಅಂತ ವಂಚಿಸುವ ತಂಡಗಳ ಬಗ್ಗೆ ಮತ್ತು ಕಡಿಮೆ ದರದಲ್ಲಿ ಮನೆಯ ಸಾಮಾನು ಸರಬರಾಜು ಮಾಡುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಹಬ್ಬ ಹರಿದಿನ ಮತ್ತು ಸಮಾರಂಭಗಳಿಗೆ ತೆರಳುವ ವೇಳೆ ಮಹಿಳೆಯರು ತಮ್ಮ ಆಭರಣಗಳನ್ನು ಪ್ರದರ್ಶನ ಮಾಡಬಾರದು. ಶಾಲೆಗೆ ತೆರಳುವ ಮಕ್ಕಳ ಬಗ್ಗೆ ಪೋಷಕರು ತಿಂಗಳಿಗೊಮ್ಮೆ ಶಾಲೆಗೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.

ಅಪರಾಧ ವಿಭಾಗದ ಪಿಎಸ್‌ಐ ವೀರಣ್ಣ ಸಿಬ್ಬಂದಿಗಳಾದ ಅಬ್ದುಲ್‌ ಭಾಷಾ, ಜಗನಾಥರೆಡ್ಡಿ, ಶಿವಶಂಕರ, ದಾವಲ್‌ ಸಾಬ್‌ ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next