ಸಿರವಾರ: ಹಳೆ ದ್ವೇಷದ ಹಿನ್ನೆಲೆ ಯುವಕನನ್ನು ಕೊಲೆಗೈದ ಘಟನೆ ನ.26ರ ಮಂಗಳವಾರ ರಾತ್ರಿ ತಾಲೂಕಿನ ಮಾಚನೂರು ಗ್ರಾಮದಲ್ಲಿ ನಡೆದಿದೆ.
ಸಮೀರ್ ಪಾಷ (24) ಮೃತ ಯುವಕ.
ಈತನನ್ನು ಅದೇ ಗ್ರಾಮದ 6 ಜನ ಯುವಕರು ಸೇರಿ ಕೊಲೆ ಮಾಡಿದ್ದಾರೆ ಎಂದು ಮೃತಪಟ್ಟ ಯುವಕನ ತಂದೆ ಪಕೀರ್ ಸಾಬ್ ದೂರು ನೀಡಿದ್ದಾರೆ.
ಪೋಲಿಸ್ ಪ್ರಕರಣದಲ್ಲಿ ಮೊಹರಂ ಹಬ್ಬದಲ್ಲಿ ಜಗಳ ಆಡಿದ್ದರು. ಹಳೆ ವೈಷಮ್ಯ ಎಂದು ಪ್ರಕರಣ ದಾಖಲಾಗಿದೆ. ಮಾಚನೂರು ಗ್ರಾಮದಲ್ಲಿ ನ.27ರ ಬುಧವಾರ ಸಂಜೆ ಯುವಕನ ಅಂತ್ಯಕ್ರಿಯೆ ನಡೆಯಿತು.
ಎಸ್ಪಿ ಭೇಟಿ: ಮಾಚನೂರು ಯುವಕನ ಕೊಲೆಯ ವಿಷಯ ತಿಳಿದು ಸ್ಥಳಕ್ಕೆ ರಾಯಚೂರು ಎಸ್ಪಿ ಎಂ.ಪುಟ್ಟಮಾದಯ್ಯ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಕುಮಾರ ಆರ್. ಹಾಗೂ ಸಿಂಧನೂರು ಡಿವೈಎಸ್ಪಿ ಬಿಎಸ್ ತಳವಾರ, ಸಿಪಿಐ ಎಂ.ಶಶಿಕಾಂತ, ಪಿಎಸ್ಐ ಅಮರೇಶಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಕಣಕ್ಕೆ ಸಂಬಂಧಿಸಿದಂತೆ ರಮೇಶ, ರಾಘು ಹಾಗೂ ಸುರೇಶ ಎಂಬವರನ್ನು ಬಂಧಿಸಿದ್ದು, ಇನ್ನೂ 3 ಜನರ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ.
ಸಿರವಾರ ತಾಲೂಕಿನ ಮಾಚನೂರು ಗ್ರಾಮದ ಕೊಲೆ ಪ್ರಕರಣದ ಸ್ಥಳಕ್ಕೆ ಬುಧುವಾರ ಎಸ್ಪಿ ಪುಟ್ಟಮಾದಯ್ಯ ಭೇಟಿ ನೀಡಿದರು.