Advertisement

ಶಿಕ್ಷಣ ಸಂಸ್ಥೆಗಳು ಪಠ್ಯದ ಜೊತೆ ಕ್ರೀಡೆ-ಯೋಗಕ್ಕೂ ಆದ್ಯತೆ ನೀಡಲಿ

02:03 PM Sep 25, 2018 | Team Udayavani |

ದೇವದುರ್ಗ: ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಕ್ರೀಡೆ, ಯೋಗಕ್ಕೂ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಗಿ ಹೇಳಿದರು.

Advertisement

ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವತಿಯಿಂದ ಸಮೀಪದ ಹೂವಿನಹೆಡ್ಗಿ ಗ್ರಾಮದ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಶಿಕ್ಷಕ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ-ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯವಶ್ಯವಾಗಿದೆ. ಶಿಕ್ಷಣವಿಲ್ಲದಿದ್ದರೆ ಜೀವನ ನರಕವಾಗುತ್ತದೆ. ಉತ್ತಮ ಬದುಕಿಗಾಗಿ ಪ್ರತಿಯೊಬ್ಬರಿಗೂ ಶಿಕ್ಷಣ ಅಗತ್ಯವಾಗಿದೆ. ಗುಣಮಟ್ಟದ ಶಿಕ್ಷಣ ಬುನಾದಿ ಹಾಕುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಪರಿವರ್ತನಾ ಕೇಂದ್ರಗಳಾಗಿ ಬೆಳೆಯಬೇಕಿದೆ. ಶಿಲ್ಪಿ ಮೂರ್ತಿಯನ್ನು ಕೆತ್ತಿ ಅದಕ್ಕೆ ಒಂದು ನೀಡುವಂತೆ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಸಂಸ್ಕೃತಿ, ಮೌಲ್ಯ ಬೆಳೆಸಿ ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಂ.ಹತ್ತಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದು, ತಾಲೂಕು ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗುತ್ತಿದೆ ಎಂದರು.

Advertisement

ಆರ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ರಾಜಶೇಖರ ನಾಯಕ ಮಾತನಾಡಿ, ಸ್ವಂತ ಕಟ್ಟಡ ಸೌಲಭ್ಯ ಹೊಂದಿದ ಸಂಸ್ಥೆಗಳಿಗೆ ಬ್ಯಾಂಕ್‌ ವತಿಯಿಂದ ಸಾಲ ಸೌಲಭ್ಯ ನೀಡಲಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರ ಅನುದಾನ ನೀಡುತ್ತಿಲ್ಲ. ಅನೇಕ ತೊಂದರೆ ಮಧ್ಯೆ ಮಕ್ಕಳಿಗೆ ಶಿಕ್ಷಣ ನೀಡುಬೇಕು ಎನ್ನುವ ಉದ್ದೇಶದಿಂದ ಖಾಸಗಿ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಎಂದು ಹೇಳಿದರು.

ಬಸವೇಶ್ವರ ಕಲ್ಯಾಣ ಮಂಟಪ ಮಾಲಿಕ ಅಕ್ಷಯ ಪ್ರಶಸ್ತಿ ಆರಂಭಿಸಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯಧನ ನೀಡಿದರು. ಗಬ್ಬೂರಿನ ಶ್ರೀ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ದೇವದುರ್ಗ ಶಿಖರಮಠದ ಶ್ರೀ ಕಪಿಲ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ದೇವರಗುಂಡಗರ್ತಿ ಸಂಸ್ಥಾನಮಠದ ಶ್ರೀ ನಿಜಲಿಂಗ ಸ್ವಾಮೀಜಿ, ಮಲದಕಲ್‌ ನಿಜಾನಂದ ಯೋಗಾಶ್ರಮದ ಶ್ರೀ ಗುರುಬಸವ ರಾಜಗುರುಗಳು, ಅಧ್ಯಕ್ಷ ಚನ್ನಪ್ಪ ಬೂದಿನಾಳ, ಸಿಪಿಐ ಟಿ.ಸಂಜೀವಕುಮಾರ, ಮಹಾದೇವಮ್ಮ, ಲತಾ
ದೇವರು, ಪ್ರಕಾಶ ಖೇಣೇದ, ವಿರುಪಾಕ್ಷಪ್ಪಗೌಡ ಮುಷೂuರು, ವಕೀಲ ವಿ.ಎಂ.ಮೇಟಿ, ಸುಭಾಷ ಪಾಟೀಲ, ತಿರುಪತಿ ಸುಗೂರು, ಬಸವರಾಜ ಯಾಟಗಲ್‌, ಕರಲಿಂಗಯ್ಯಸ್ವಾಮಿ, ಬಲಭೀಮ ಹೂಗಾರ, ಚನ್ನಬಸವ ವಕೀಲ, ಗಗನ ಪಾಟೀಲ ಸೇರಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next