Advertisement
ಶಾಲೆಗಳಿಗೇಕೆ ಧರ್ಮ?ಶಾಲೆಗಳಲ್ಲಿ ಧರ್ಮ ಇರಬಾರದು. ಎಲ್ಲರೂ ಸಮಾ ನತೆಯಿಂದ ಇರಬೇಕು. ಶಿಕ್ಷಣ ಅತೀ ಮುಖ್ಯ. ಎಲ್ಲದ್ದ ಕ್ಕಿಂತಲೂ ಈ ಬಗ್ಗೆ ಹೆಚ್ಚು ಗಮನ ಕೊಡಿ. ಕ್ಷುಲ್ಲಕ ವಿಷಯವನ್ನು ಇಷ್ಟು ದೊಡ್ಡದು ಮಾಡಬಾರದು. ಈಗ ಈ ವಿಷಯ ನ್ಯಾಯಾಲಯದಲ್ಲಿ ಇದೆ. ನ್ಯಾಯಾ ಲಯದ ತೀರ್ಪಿಗೆ ಎಲ್ಲರೂ ಬದ್ಧರಾಗಿ ಇರಬೇಕು.
– ಶ್ರೀ ಸಿದ್ಧಲಿಂಗ ಸ್ವಾಮೀಜಿ, ತುಮ ಕೂರು ಸಿದ್ಧಗಂಗಾ ಮಠ
ವಿದ್ಯಾರ್ಥಿಗಳು ಸಂಯಮ ಕಳೆದುಕೊಳ್ಳಬಾರದು. ನಾಡಿನಲ್ಲಿ ಇಂಥ ಬೆಳವಣಿಗೆ ಒಳ್ಳೆಯದಲ್ಲ. ನ್ಯಾಯಾಲಯ ಏನು ಹೇಳುತ್ತದೆಯೋ ಆ ರೀತಿ ತೀರ್ಮಾನ ಮಾಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಗಲಾಟೆ, ಗದ್ದಲಕ್ಕೆ ಅವಕಾಶ ಮಾಡಿ ಕೊಡಬಾರದು. ಶಿಕ್ಷಣಕ್ಕೆ ಆದ್ಯತೆ ಕೊಡಿ.
-ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ, ಉಡುಪಿ ಪೇಜಾವರ ಮಠ ಎಲ್ಲರ ಭಾವನೆಗಳಿಗೂ ಗೌರವ ನೀಡಬೇಕು
ವಿದ್ಯಾರ್ಥಿಗಳಿಗೆ ಶಿಕ್ಷಣ ಬಹುಮುಖ್ಯ. ಈ ನೆಲದ ಕಾನೂನು ಎಲ್ಲರಿಗೂ ಒಂದೇ. ಪ್ರಸ್ತುತ ಸನ್ನಿವೇಶದಲ್ಲಿ ಶಾಂತಿ-ಸೌಹಾರ್ದಕ್ಕೆ ಎಲ್ಲರೂ ಪ್ರಯತ್ನಿಸಬೇಕು. ಶಾಲೆಗಳಲ್ಲಿ ಸಮವಸ್ತ್ರಕ್ಕೆ ಆದ್ಯತೆ ನೀಡಬೇಕು. ಜತೆಗೆ ಎಲ್ಲರ ಭಾವನೆಗಳನ್ನೂ ಗೌರವಿಸಬೇಕು. ಕಾಗಿನೆಲೆ ಯಲ್ಲಿ ನಾವೂ ಶಾಲೆ ನಡೆಸುತ್ತಿದ್ದೇವೆ. ಶೇ. 90ರಷ್ಟು ಮುಸ್ಲಿಂ ಸಮುದಾಯದವರಿದ್ದಾರೆ. ಅಲ್ಲಿ ಬುರ್ಖಾ, ಹಿಜಾಬ್ ಧರಿಸಿ ಶಾಲೆ ಕಾಂಪೌಂಡ್‌ವರೆಗೂ ಬಂದು ಬಳಿಕ ಅವರಿಗಾಗಿಯೇ ನೀಡಲಾದ ಪ್ರತ್ಯೇಕ ಕೊಠಡಿಯಲ್ಲಿ ಬದಲಾಯಿಸಿ ಪ್ರಾರ್ಥನೆ ಹಾಗೂ ತರಗತಿಯಲ್ಲಿ ಸಮವಸ್ತ್ರದಲ್ಲೇ ಇರುತ್ತಾರೆ. ಇಂಥ ಅವಕಾಶ ಕಲ್ಪಿಸುವುದು ಸೂಕ್ತ.
-ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕಾಗಿನೆಲೆ ಕನಕಗುರುಪೀಠ
Related Articles
ಹಿಜಾಬ್ ಕುರಿತು ಎದ್ದಿರುವ ಅಪಸ್ವರ ಹಾಗೂ ಅವು ಗಳಿಂದ ಉಂಟಾದ ಪ್ರಕ್ಷುಬ್ಧತೆಯ ಬಗ್ಗೆ ತೀವ್ರ ವೇದನೆ ಯಿದೆ. ಶೈಕ್ಷಣಿಕ ಸಂಸ್ಥೆಗಳ ಶಾಂತಿ ಯುತ ವಾತಾವರಣಕ್ಕೆ ಧಕ್ಕೆ ಉಂಟಾ ಗುತ್ತಿರುವುದು ಅತ್ಯಂತ ಕಳವಳಕಾರಿ. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಯೋಚಿಸಬೇಕು. ಕಾನೂನು ಮತ್ತು ಸುವ್ಯವಸ್ಥೆ, ಕೋಮು ಸೌಹಾರ್ದ, ಶಾಂತಿ – ಸಾಮರಸ್ಯವನ್ನು ಕಾಪಾಡುವುದು ನಾಗರಿಕ ಸಮಾಜದ ಜವಾಬ್ದಾರಿ. ವಿಶೇಷವಾಗಿ ವಿದ್ಯಾರ್ಥಿ ಸಮುದಾಯ ಸಂಯಮವನ್ನು ಕಾಯ್ದುಕೊಳ್ಳಬೇಕು.
-ಡಾ| ಮೊಹಮ್ಮದ್ ಸಾದ್ ಬೆಲಗಾಮಿ,
ರಾಜ್ಯಾಧ್ಯಕ್ಷರು, ಜಮಾತೆ ಇಸ್ಲಾಮಿ ಹಿಂದ್-ಕರ್ನಾಟಕ
Advertisement
ಓದಿ ನತ್ತ ಗಮನ ನೀಡಿಪರೀಕ್ಷೆಗಳು ಹತ್ತಿರವಾಗುತ್ತಿರುವಾಗ ಚೆನ್ನಾಗಿ ಓದಿಕೊಳ್ಳ ಬೇಕಾಗಿದ್ದ ವಿದ್ಯಾರ್ಥಿಗಳು ವಿವಾದದ ಸುಳಿಯಲ್ಲಿ ಸಿಲುಕಿರುವುದು ಬೇಸರದ ವಿಷಯ. ಒಂದು ಸಾಧಾರಣ ವಿಷಯವನ್ನು ವಿವಾದವನ್ನಾಗಿಸಿ, ಅದರಲ್ಲಿ ವಿದ್ಯಾರ್ಥಿ ಗಳನ್ನು ಸಿಲುಕಿಸಿರುವುದು ಅವರ ಭವಿಷ್ಯದ ಕುರಿತು ಯೋಚಿಸುವಂತೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಮತ್ತೆ ಎಲ್ಲರೂ ಸಹ ಅದೇ ತರಗತಿಗಳಿಗೆ ಹೋಗಿ, ಒಬ್ಬರನ್ನೊಬ್ಬರು ನೋಡಬೇಕಿರುವುದರಿಂದ ಈ ಮನಃಸ್ಥಿತಿಯನ್ನು ಬದಲಿಸಿಕೊಳ್ಳಿ. ಕೋರ್ಟ್ ತೀರ್ಪು ಏನೇ ಬಂದರೂ ಶಾಂತಿ, ಸಮಾಧಾನದಿಂದ ವರ್ತಿಸಿ, ಚೆನ್ನಾಗಿ ಓದಿ,
-ಡಾ| ಪೀಟರ್ ಮಚಾದೋ, ಮಹಾಧರ್ಮಾಧ್ಯಕ್ಷ