Advertisement

ಹೋಳಿ ಬಣ್ಣಗಳಂತೆ ಎಲ್ಲರ ಬದುಕು ವರ್ಣರಂಜಿತವಾಗಲಿ: ಶ್ರೀ

09:38 PM Mar 23, 2019 | Team Udayavani |

ದಾವಣಗೆರೆ: ಕಾಮದಹನ ಎಂದರೆ ಕೇವಲ ಪ್ರತಿಮೆ ಸುಟ್ಟುಹಾಕುವುದಲ್ಲ. ನಮ್ಮಲ್ಲಿರುವ ಎಲ್ಲಾ ಕೆಟ್ಟಗುಣಗಳನ್ನು ಸುಟ್ಟುಹಾಕುವ ಸಂಕೇತ ಎಂದು ಅವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ವಿಶ್ಲೇಷಿಸಿದ್ದಾರೆ.

Advertisement

ಗುರುವಾರ ಬಾಡಾ ಕ್ರಾಸ್‌ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಆಯೋಜಿಸಲಾಗಿದ್ದ 220ನೇ ಹೋಳಿ ಹುಣ್ಣಿಮೆಯ ಶಿವಾನುಭವಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹೋಳಿ ಓಕಳಿ ಬಣ್ಣಗಳನ್ನು ಎರಚುವ ವರ್ಣರಂಜಿತ ಹಬ್ಬ. ನಮ್ಮೆಲ್ಲರ ಬದುಕು ಸಹ ಹಾಗೆಯೇ ವರ್ಣರಂಜಿತವಾಗಿರಲಿ ಎಂದು ಆಶಿಸಿದರು.

ಇಂದಿನ ವಿಭಿನ್ನ ವಾತಾವರಣದಲ್ಲಿ ಎಲ್ಲಾ ಜಂಜಾಟಗಳನ್ನು ಬದಿಗಿರಿಸಿ ಉತ್ತಮ ಬದುಕು ಸಾಗಿಸಬೇಕಿದೆ. ನೆಮ್ಮದಿ, ಸಹಬಾಳ್ವೆ, ಸೌಹಾರ್ದತೆ ಜೊತೆ ಆದರ್ಶವಾದ ಬದುಕನ್ನು ನಡೆಸುವ ಮೂಲಕ ದೇವರು ನೀಡಿದ ಬದುಕನ್ನು ಉತ್ತಮ ರೀತಿಯಲ್ಲಿ ಸಾಗಿಸಬೇಕು ಎಂದು ತಿಳಿಸಿದರು.
 
ವರ್ಣಮಯ ದೃಷ್ಟಿಯಿಂದ ನೋಡಿದಾಗ ಮಾತ್ರ ಬದುಕು ವರ್ಣರಂಜಿತವಾಗುವ ಮೂಲಕ ಎಲ್ಲರ ಹಿತವನ್ನು ಬಯಸುತ್ತದೆ. ಮಾತ್ರವಲ್ಲ ಆಧ್ಯಾತ್ಮಿಕ ಚಿಂತನೆಯ ನೆಲಗಟ್ಟಿನಲ್ಲಿ ಚಿಂತಿಸುವ ದೃಷ್ಟಿಕೋನದಲ್ಲಿ ಸಾಗಬೇಕಿದೆ ಎಂದು ಹೇಳಿದರು. 

ಪುಟ್ಟರಾಜ ಗವಾಯಿಗಳು ಇಂದು ಇಲ್ಲದಿದ್ದರೂ ಅವರ ಚೇತನ ಗದ್ದುಗೆ ರೂಪದಲ್ಲಿ ಇಲ್ಲಿದೆ. ಆವರ ಪ್ರೇರಣೆ ಇಲ್ಲದೇ ಯಾವುದೇ ಒಂದು ಕಡ್ಡಿ ಅಲುಗಾಡಲು ಸಾಧ್ಯವಿಲ್ಲ. ಅವರ ಆಶಿರ್ವಾದವೇ ಇಂತಹ ಎಲ್ಲಾ ಕಾರ್ಯಕ್ರಮಗಳಿಗೆ ಕಾರಣ ಎಂದರು.

ಮಹಾನಗರ ಪಾಲಿಕೆ ಸದಸ್ಯ ಎಚ್‌.ಜಿ. ಉಮೇಶ್‌ ಮಾತನಾಡಿ, ಧರ್ಮಕಾರ್ಯಗಳಲ್ಲಿ ಪುಟ್ಟರಾಜಗವಾಯಿ ಮಠ ವಿಶ್ವ ಖ್ಯಾತಿ ಹೊಂದಿದೆ. ನಮ್ಮ ಭಾಗದಲ್ಲಿ ಶಾಖೆ ಇರುವುದು. ಅದರಲ್ಲೂ ಸಂಗೀತ ಸೇವೆ ನೀಡುವ ಮೂಲಕ ಅಂಧರನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತಿರುವುದು ಶ್ಲಾಘನೀಯ ಕಾರ್ಯ. ಇಂತಹ ಸ್ಥಳ ಪ್ರವಾಸೋದ್ಯಮ ತಾಣವಾಗಬೇಕಿದೆ. ರಾಷ್ಟ್ರಿಯ ಹೆದ್ದಾರಿ ಸಮೀಪದಲ್ಲೇ ಇರುವ ಆಶ್ರಮ ಪ್ರಯಾಣಿಕರಿಗೆ ಆಶ್ರಯತಾಣವಾಗಲಿ. ಅದೇ ರೀತಿ ಪ್ರಯಾಣಿಕರು ಮಠದ ಅಭಿವೃದ್ಧಿ ಗೆ ಶ್ರಮಿಸಲಿ ಎಂದರು.

Advertisement

ನೂತನ ಶಿಲಾಮಂಟಪದ ತುಲಾಭಾರ ದಾನಿಗಳಾದ ಆರ್‌. ಲಲಿತಮ್ಮ, ರುದ್ರಯ್ಯ, ಆರ್‌. ರಾಜಶೇಖರ್‌, ಮಂಜುಳಮ್ಮ, ಜನತಾ ವಿದ್ಯಾಲಯದ ಉಮೇಶ್‌, ಟಿ.ಕೆ. ಕರಿಬಸಪ್ಪ, ವಸಂತಮ್ಮ, ಟಿ.ಕೆ. ವೀರಣ್ಣ, ಉಮಾ, ನಂದಿನಿ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next