Advertisement

ಮಹಿಳೆ ಆರ್ಥಿಕ ಸ್ವಾವಲಂಬಿಯಾಗಲಿ

04:23 PM Oct 16, 2020 | Suhan S |

ಚಿಕ್ಕೋಡಿ: ರೈತ ಮಹಿಳೆಯರು ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಕೃಷಿ ಚಟುವಟಿಕೆಗಳ ಜೊತೆಗೆ ಸರ್ಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಕಿರು ಉದ್ದಿಮೆಗಳನ್ನು ಪ್ರಾರಂಭಿಸಿ ಆರ್ಥಿಕ ಸ್ವಾವಲಂಬನೆ ಹೊಂದಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ನಗರದ ಲೋಕೋಪಯೋಗಿ ಇಲಾಖೆ ಸಭಾಭವನದಲ್ಲಿ ಕೃಷಿ ಇಲಾಖೆ 2020-21 ನೇ ಸಾಲಿನ ಆತ್ಮ ಯೋಜನೆಯಡಿ ರೈತ ಮಹಿಳಾ ದಿನಾಚರಣೆಯ ಅಂಗವಾಗಿಹಮ್ಮಿಕೊಂಡ ಕಿಸಾನ್‌ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಉತ್ಪನ್ನಗಳ ಆದಾಯದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರ್ಕಾರವಿಶೇಷ ಯೋಜನೆಯೊಂದನ್ನು ರೂಪಿಸುತ್ತಿದ್ದು, 2022ರ ಒಳಗಾಗಿಅದರ ಲಾಭ ಕೃಷಿಕರಿಗೆ ದೊರಕಲಿದೆ. ಕೃಷಿಕ ಮಹಿಳೆಯರು ಕಿರುಉದ್ದಿಮೆಗಳನ್ನು ಪ್ರಾರಂಭಿಸಲು ವಿವಿಧಇಲಾಖೆಗಳು ಸಬ್ಸಿಡಿಯೊಂದಿಗೆ ಸಾಲಸೌಲಭ್ಯ ನೀಡುತ್ತಿದ್ದು, ಅದರ ಸದ್ಬಳಕೆ ಮಾಡಿಕೊಳ್ಳಬೇಕು. ಕೃಷಿಕ ಮಹಿಳೆಯರು ಲಘು ಉದ್ದಿಮೆಗಳಲ್ಲಿ ಉತ್ಪಾದಿಸಿದ ಹಪ್ಪಳ,ಶ್ಯಾಂಡಿಗೆ, ಶ್ಯಾವಿಗೆ, ಉಪ್ಪಿನಕಾಯಿ,ಚಟ್ನಿ ಮೊದಲಾದವುಗಳನ್ನು ಜ್ಯೋತಿಬಜಾರ್‌ ಮೂಲಕ ಮಾರಾಟದ ವ್ಯವಸ್ಥೆ ಮಾಡಲಾಗುವುದು ಎಂದರು.

ಬ್ರಹ್ಮಕುಮಾರಿ ಶಾಂತಕ್ಕ ಮಾತನಾಡಿ, ನಾವು ದುಡಿಯುವ ಕ್ಷೇತ್ರದಲ್ಲಿ ಶ್ರದ್ಧೆ ಮತ್ತು ಪರಿಶ್ರಮ ಇರಬೇಕು. ಹೊಸತನಅಳವಡಿಸಿಕೊಳ್ಳಬೇಕು. ಕೃಷಿಕನಿಗೆ ಮಾತ್ರ ಅನ್ನದಾತ ಎಂಬ ಗೌರವ ಪ್ರಾಪ್ತವಾಗಿದೆ.ಯೋಗಿ ಜೀವನ ಕೃಷಿಕರಿಂದ ಮಾತ್ರ ಸಾಧ್ಯ ಎಂದರು. ಕೃಷಿಯಲ್ಲಿ ವೈಜ್ಞಾನಿಕತೆ ಬೇಕು. ಆದರೆ, ಭೂಮಿ ಮತ್ತು ಮನುಷ್ಯನ ಆರೋಗ್ಯಕ್ಕೆ ಪೂರಕವಾದ ಕೃಷಿಪದ್ಧತಿ ಅಳವಡಿಸಿಕೊಳ್ಳಬೇಕು. ನಮಗೆ ಬೇಕಾಗುವ ತರಕಾರಿ, ಹಣ್ಣು, ದ್ವಿದಳ ಧಾನ್ಯ, ಆಹಾರ ಧಾನ್ಯಗಳನ್ನು ನಾವೇ ಸಾವಯವ ಪದ್ಧತಿಯಲ್ಲಿ ಉತ್ಪಾದಿಸಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಕೃಷಿ ಇಲಾಖೆ ಡಿಡಿ ಎಲ್‌.ಐ.ರೂಡಗಿ, ಎಡಿ ಮಂಜುನಾಥ ಜನಮಟ್ಟಿ, ಮಾದರಿ ಕೃಷಿಕ ಮಹಿಳೆ ಲಲಿತಾ ಕಮತೆ ಮಾತನಾಡಿದರು. ಬ್ರಹ್ಮಕುಮಾರಿ ಸುಶೀಲಾ ಅಕ್ಕನವರು, ಮಾದರಿ ಕೃಷಿಕ ಮಹಿಳೆ ಅಶ್ವಿ‌ನಿಖೋತ್‌, ಮಹಾದೇವಿ, ಕೃಷಿ ಅಧಿ ಕಾರಿಜಾತಗಾರ ಸೇರಿದಂತೆ ನೂರಾರು ಕೃಷಿಕ ಮಹಿಳೆಯರು ಪಾಲ್ಗೊಂಡಿದ್ದರು.

ಕೃಷಿಯಲ್ಲಿ ಮಹಿಳೆ ಪಾತ್ರ ಅನನ್ಯ: ಕೊಳೇಕರ

Advertisement

ಬೈಲಹೊಂಗಲ: ಕೃಷಿಯಲ್ಲಿ ಪುರುಷರಿಗೆ ಸಿಗುವ ಆದ್ಯತೆ ಮಹಿಳೆಯರಿಗೆ ಸಿಗುತ್ತಿಲ್ಲ. ಮಹಿಳೆಯರು ಜಮೀನಿನ ಎಲ್ಲ ಕೆಲಸಗಳನ್ನುಮಾಡುತ್ತಾರೆ. ಪುರುಷರಿಗೆ ಸಮನಾಗಿದುಡಿಯುವ ಎಷ್ಟೋ ಮಹಿಳೆಯರು ಇದ್ದಾರೆ. ಆದರೆ ಅವರು ಬೆಳಕಿಗೆ

ಬರುತ್ತಿರುವುದು ಕಡಿಮೆ. ಒಟ್ಟಾರೆ ಕೃಷಿಯಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದೆ ಎಂದು ಬೆಳಗಾವಿ ಉಪ ಕೃಷಿ ನಿರ್ದೇಶಕ ಎಚ್‌. ಡಿ. ಕೊಳೇಕರ ಹೇಳಿದರು.

ಗುರುವಾರ ತಾಲೂಕಿನ ಮತ್ತಿಕೊಪ್ಪಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ, ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ತ್ರೀ-ಪುರುಷ ಶ್ರಮದಲ್ಲಿ ವ್ಯತ್ಯಾಸವಿಲ್ಲದಿದ್ದರೂ ಸಂಬಳದಲ್ಲಿ

ವ್ಯತ್ಯಾಸವಿದೆ. ಒಂದು ಅಧ್ಯಯನದ ಪ್ರಕಾರ ಹಳ್ಳಿಗಳಲ್ಲಿ ಶ್ರಮ ಶಕ್ತಿಯು ಶೇ. 65 ಕ್ಕಿಂತ ಹೆಚ್ಚಿನ ಭಾಗವನ್ನು ಹೆಣ್ಣು ಮಕ್ಕಳೇ ಪೂರೈಸುತ್ತಾರೆ. ರೈತ ಮಹಿಳೆಯರು 24 ತಾಸುಗಳಲ್ಲಿ 10 ರಿಂದ 12 ತಾಸು ಕೆಲಸ ನಿರ್ವಹಿಸುತ್ತಾರೆ. ಮಹಿಳೆಯರುಯಾವುದೇ ಕೆಲಸ ಕೊಟ್ಟರೂ ನೈಪುಣ್ಯ, ಶ್ರದ್ಧೆಯಿಂದ ನಿರ್ವಹಿಸುತ್ತಾರೆಂದರು.

ಅಧ್ಯಕ್ಷತೆ ವಹಿಸಿದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥೆ ಶ್ರೀದೇವಿ ಅಂಗಡಿ ಮಾತನಾಡಿ, ಮಹಿಳೆಯರು ತಾವು ಬೆಳೆದಫಸಲನ್ನು ನೇರವಾಗಿ ಮಾರಾಟ ಮಾಡದೇ ಅವುಗಳ ಮೌಲ್ಯವರ್ಧನೆ ಮಾಡಿ ಹೆಚ್ಚಿನ ಆದಾಯಗಳಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಕೃಷಿಯಲ್ಲಿ ಸಾಧನೆಗೈದ ರೈತ ಮಹಿಳೆಯರಾದ ಮಹಾದೇವಿ ಪಾಟೀಲ, ಅಕ್ಕತಂಗೇರಹಾಳ ಮತ್ತು ಶಾಂತಾ ಕಮ್ಮಾರ, ಕಿಟದಾಳ ಅವರನ್ನು ಸನ್ಮಾನಿಸಲಾಯಿತು.

ರೈತ ಮಹಿಳೆಯರಿಗೆ ರಂಗೋಲಿ,ಪೌಷ್ಟಿಕ ಆಹಾರ ತಯಾರಿಕೆ ಸ್ಪರ್ಧೆ ಏರ್ಪಡಿಸಲಾಗಿತ್ತು. 30 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.ಬಿ.ಎಂ. ಕಂಕಣವಾಡಿಆಯುರ್ವೇದ ಮಹಾ ವಿದ್ಯಾಲಯದ ಡಾ| ಅಶೋಕ ಪಾಟೀಲ, ಸಹ ಪ್ರಾಧ್ಯಾಪಕ ಡಾ. ಸಂಜಯ ಟೊಣ್ಣಿ, ಉದ್ಯಮಿ ಭಾಗ್ಯಶ್ರೀ ಅಕ್ಕಿ ಮಾತನಾಡಿದರು.ತಾಲೂಕ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಬಸವರಾಜ ಬೀರುಕಲ್‌ ನಿರೂಪಿಸಿದರು. ಉಮೇಶ ಯರಗಟ್ಟಿ ವಂದಿಸಿದರು

 

Advertisement

Udayavani is now on Telegram. Click here to join our channel and stay updated with the latest news.

Next