Advertisement
2008ರಲ್ಲಿ ಕಾಲೇಜಿಗೆ ಸೇರಿದಂತೆ ಎಂಟು ಕೊಠಡಿಯುಳ್ಳ ಕಟ್ಟಡ ನಿರ್ಮಿಸಲಾಗಿದ್ದು, ಪ್ರಸ್ತುತ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ಸುಮಾರು 448 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 8 ಕೊಠಡಿಗಳಲ್ಲಿ 6 ಕೊಠಡಿಗಳನ್ನು ವಿದ್ಯಾರ್ಥಿಗಳ ಬೋಧನೆಗೆಗಾಗಿ ಬಳಸುತ್ತಿದ್ದಾರೆ, ಇನ್ನುಳಿದ 2 ಕೊಠಡಿಯನ್ನು ಕಾಲೇಜು ಸಿಬ್ಬಂದಿ ಹಾಗೂ ವಿಜ್ಞಾನದ ಪ್ರಯೋಗಲಾಯಕ್ಕೆ ಬಳಸಲಾಗಿದೆ.
Related Articles
Advertisement
ಗ್ರಾಪಂ ಗಮನಕ್ಕೆ: ಉಪನ್ಯಾಸಕರು ತಮ್ಮ ಕೈಲಾಗುವ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದು. ಆದರೆ ಕಟ್ಟಡ ಬಿರುಕು, ಮೈದಾನ ಸಮತಟ್ಟು , ಚರಂಡಿ ಸಮಸ್ಯೆ ಮುಂತಾದವು ಉನ್ನತ ಮಟ್ಟದಲ್ಲಿ ಕೈಗೊಳ್ಳುವ ಕಾರ್ಯಗಳಾಗಿದ್ದು ಈ ಬಗ್ಗೆ ಗ್ರಾಪಂಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಗ್ರಾಮ ಪಂಚಾಯಿತಿ ಕೊಡಲೇ ಎಚ್ಚೆತ್ತು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾಲೇಜು ಸಿಬ್ಬಂದಿ ಮನವಿ ಮಾಡಿದ್ದಾರೆ.
ಕ್ರೀಡೆಗೂ ಹಿನ್ನಡೆ: ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕ್ರೀಡಾಪಟ್ಟುಗಳಿದ್ದು ಅವರಿಗೆ ಸೂಕ್ತ ತರಬೇತಿ ಅವಶ್ಯ ಕತೆಯಿದೆ. ಸರಿಯಾಗಿ ನಿರ್ವಹಣೆ ಕಾಣದ ಮೈದಾ ನದಿಂದ ಕ್ರೀಡಾ ಚಟುವಟಿಕೆಗಳು ತೀವ್ರ ಹಿನ್ನಡೆ ಯಾಗಿದೆ. ಗ್ರಾಮೀಣ ಪ್ರತಿಭೆಗಳು ಸರಿಯಾಗಿ ತರ ಬೇತಿ ಪಡೆಯಲು ಸಾಧ್ಯವಾಗದೆ ಕಮರಿ ಹೋಗು ತ್ತಿದ್ದಾರೆ. ಮಳೆ ಬಂದರೆ ನೀರು ತುಂಬಿ ಕೆರೆಯಂತಾಗಿ ಮಾರ್ಪಾಡಾಗುವ ಮೈದಾನದಲ್ಲಿ ಕ್ರೀಡಾಭ್ಯಾಸ ಹೇಗೆ ಸಾಧ್ಯ ಎಂಬುದು ಕ್ರೀಡಾಭಿಮಾನಿಗಳ ಪ್ರಶ್ನೆ ?
ಕಾಲೇಜಿನ ಆವರಣದಲ್ಲಿ ಮಳೆ ಬಂದರೆ ನೀರು ನಿಂತುಕೊಳ್ಳುವ ಬಗ್ಗೆ ಇಲಾಖೆಗೆ ಲಿಖೀತ ರೂಪದಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಜಿಪಂ ಸಭೆಯಲ್ಲೂ ಸಹ ಹಲವು ಬಾರಿ ತಿಳಿಸಿದ್ದೇವೆ ಹಾಗೂ ಗ್ರಾಪಂ ಅಧ್ಯಕ್ಷ, ಸದಸ್ಯರಿಗೂವಸ್ತುಸ್ಥಿತಿ ಬಗ್ಗೆ ತಿಳಿದಿದೆ. ಆದರೂ ಜನಪ್ರತಿನಿಧಿಗಳು ಮಾತ್ರ ಈ ಕಾಲೇಜಿಗೂ ನಮಗೆ ಸಂಬಂಧವೇ ಇಲ್ಲ ಎಂಬುವ ರೀತಿ ವರ್ತಿಸುತ್ತಿದ್ದಾರೆ. ಇದು ಹೀಗೆ ಮೂಮದುವರಿದರೆ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವೆ.
ಕಾಂತರಾಜು, ಪ್ರಾಂಶುಪಾಲ ಶಾಸಕ ಮಂಜುನಾಥ್ ಪ್ರತಿನಿಧಿಸಿದ್ದ ಕೇತ್ರ ಶಾಸಕ ಎ.ಮಂಜುನಾಥ್ ಜಿಪಂನಲ್ಲಿ ಗೆಲುವು ನೀಡಿ ರಾಜಕೀಯವಾಗಿ ಪುನಜನ್ಮ ನೀಡಿದ ಕ್ಷೇತ್ರ ಕುದೂರು, ಹೋಬಳಿ ಕೇಂದ್ರದ ಸರ್ಕಾರಿ ಕಾಲೇಜು ಇಂತಹ ಪರಿಸ್ಥಿತಿಯಿದ್ದರೂ ಜನಪ್ರತಿ ನಿಧಿಗಳು ಮಾತ್ರ ಕಣ್ಮುಚ್ಚಿಕೊಳಿತ್ತಿದ್ದಾರೆ. ಮಳೆ ಬಂದರೆ ಕಾಲೇಜಿಗೆ ಬರಲು ಮುಜುಗರ ವಾಗುತ್ತದೆ. ಈ ಕಾಲೇಜಿಗೆ
ಯಾಕಾದರೂ ಸೇರಿ ಕೊಂಡೆವೋ ಎಂಬ ಮನೋಭಾವನೆ ವಿದ್ಯಾರ್ಥಿ ಗಳಲ್ಲಿ ಮೂಡುತ್ತದೆ. ಅತ್ತ ಇಲಾಖೆಯೂ ತಲೆಕಡೆಸಿಕೊಳ್ಳುತ್ತಿಲ್ಲ ಇತ್ತ ಗ್ರಾಪಂ ಸಹ ಚರಂಡಿ ನಿರ್ಮಾಣದ ವಿಷಯದಲ್ಲಿ ಜಾಣಕುರುಡು ಪ್ರದರ್ಶಿಸುತ್ತಿದೆ, ಶಾಸಕರು ನಮ್ಮ ಕಾಲೇಜಿನ ಸಮಸ್ಯೆ ಬಗೆಹರಿಸುತ್ತಾರೆ ಎಂಬ ನಿರೀಕ್ಷೆಯ ಲ್ಲಿದ್ದೇವೆ ಎಂದು ವಿದ್ಯಾರ್ಥಿಗಳು ಉದಯವಾಣಿ ಬಳಿ ಸಮಸ್ಯೆ ಹೇಳಿಕೊಂಡಿದ್ದಾರೆ. ಕೆ.ಎಸ್.ಮಂಜುನಾಥ್ ಕುದೂರು