Advertisement

ವೈಫ‌ಲ್ಯದಿಂದ ಪಾಠ: ಶಿಖರ್‌ ಧವನ್‌

08:45 AM Aug 22, 2017 | Team Udayavani |

ಡಂಬುಲ: ತನ್ನ ಇಂದಿನ ಬ್ಯಾಟಿಂಗ್‌ ಯಶಸ್ಸಿಗೆ ವೈಫ‌ಲ್ಯ ಕಲಿಸಿದ ಪಾಠದ ಪಾತ್ರ ಬಹಳಷ್ಟಿದೆ ಎಂದು ಟೀಮ್‌ ಇಂಡಿಯಾ ಆರಂಭಕಾರ ಶಿಖರ್‌ ಧವನ್‌ ಹೇಳಿ ದ್ದಾರೆ. ಡಂಬುಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಭಾರತಕ್ಕೆ ಸುಲಭ ಜಯವನ್ನು ತಂದಿತ್ತ ಬಳಿಕ ಅವರು ಮಾತಾಡುತ್ತಿದ್ದರು.

Advertisement

“ವೈಫ‌ಲ್ಯ ಎನ್ನುವುದು ನಮಗೆ ಬಹಳಷ್ಟು ಪಾಠಗಳನ್ನು ಕಲಿಸುತ್ತದೆ. ಈ ವಿಷಯದಲ್ಲಿ ನಾನು ಅದೃಷ್ಟಶಾಲಿ. ಬ್ಯಾಟಿಂಗ್‌ ಬರಗಾಲದಲ್ಲಿದ್ದಾಗ ನನ್ನ ಪ್ರಗತಿ ಬಗ್ಗೆ ಚಿಂತಿಸುತ್ತಿದ್ದೆ. ಫಾರ್ಮ್ನಲ್ಲಿದ್ದಾಗಲೂ ಆಟದ ಪ್ರಗತಿ ಬಗ್ಗೆಯೇ ಯೋಚಿಸುತ್ತಿದ್ದೆ. ವೈಫ‌ಲ್ಯವನ್ನು ನಾನು ಕಲಿಕೆಗಾಗಿ ಮೀಸಲಿರಿಸಿದೆ’ ಎಂದು ಲಂಕಾ ವಿರುದ್ಧ ಪ್ರಚಂಡ ಫಾರ್ಮ್ ತೋರ್ಪಡಿಸುತ್ತಿರುವ ಧವನ್‌ ಹೇಳಿದರು.

“ಮುಂದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಇನ್ನೂ ದೂರದಲ್ಲಿದೆ. ಅಲ್ಲಿಯ ತನಕ ನಾನು ಅತ್ಯುತ್ತಮ ಪ್ರದರ್ಶನವನ್ನು ಕಾಯ್ದುಕೊಳ್ಳಬೇಕು. ಇದು ನನ್ನ ಗುರಿ. ಇಲ್ಲವಾದರೆ ನನ್ನ ಸ್ಥಾನವನ್ನು ತುಂಬಬಲ್ಲ ಬಹಳಷ್ಟು ಮಂದಿ ಆಟಗಾರರಿದ್ದಾರೆ…’ ಎಂದರು.

ಮರಳಿದಾಗಲೆಲ್ಲ ಮಹಾನ್‌ ಸಾಧನೆ
2013ರ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ ವೇಳೆ ಯಲ್ಲೂ ಶಿಖರ್‌ ಧವನ್‌ ಇದೇ ಫಾರ್ಮ್ನಲ್ಲಿದ್ದರು. ಬಳಿಕ ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್‌ ಶತಕ ಬಾರಿಸಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದರು. ಈ ಸಲದ ಚಾಂಪಿಯನ್ಸ್‌ ಟ್ರೋಫಿಗೆ ಮರಳಿದಾಗಲೂ ಧವನ್‌ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಕಳೆದ ವರ್ಷ ನ್ಯೂಜಿಲ್ಯಾಂಡ್‌ ವಿರುದ್ಧದ ಸರಣಿಯ ಬಳಿಕ ಕಳಪೆ ಫಾರ್ಮ್ ಕಾರಣಕ್ಕಾಗಿ ಶಿಖರ್‌ ಧವನ್‌ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಈ ವರ್ಷದ ಚಾಂಪಿಯನ್ಸ್‌ ಟ್ರೋಫಿ ವೇಳೆ ಮತ್ತೆ ತಂಡವನ್ನು ಕೂಡಿಕೊಂಡರು. ಆದರೂ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೆ ಧವನ್‌ ಆಯ್ಕೆಯಾಗಿರಲಿಲ್ಲ. ಮುರಳಿ ವಿಜಯ್‌ ಗಾಯಾಳಾಗಿ ಹೊರಬಿದ್ದುದರಿಂದ ಟೆಸ್ಟ್‌ ತಂಡದಲ್ಲೂ ಧವನ್‌ಗೆ ಅವಕಾಶ ಲಭಿಸಿತು. ಇದನ್ನವರು 2 ಶತಕಗಳೊಂದಿಗೆ ಎರಡೂ ಕೈಗಳಿಂದ ಬಾಚಿ
ಕೊಂಡರು. ಅರ್ಥಾತ್‌, ತಂಡಕ್ಕೆ ಮರಳಿದಾಗಲೆಲ್ಲ ಧವನ್‌ ಅಮೋಘ ಬ್ಯಾಟಿಂಗ್‌ ತೋರ್ಪಡಿಸುತ್ತಲೇ ಬಂದಿರುವುದು ವಿಶೇಷ. 

Advertisement

ನಾನು ಇಂತಿಷ್ಟೇ ರನ್‌ ಬಾರಿಸಬೇಕು, ಇಷ್ಟೇ ಶತಕ ಹೊಡೆಯಬೇಕೆಂಬ ಯಾವುದೇ ಗುರಿಯನ್ನು ಇರಿಸಿಕೊಂಡವನಲ್ಲ. ಆದರೆ ಫಿಟ್‌ನೆಸ್‌ ಜತೆಗೆ ಆಟದ ಕೌಶಲವನ್ನು ಕಾಯ್ದುಕೊಂಡು ಉತ್ತಮ ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ ನಡೆಸುವುದನ್ನು ನಾನು ಬಯಸುತ್ತೇನೆ. ತಂಡದ ಕಿರಿಯ ಆಟಗಾರರೊಂದಿಗೆ ಸ್ಪರ್ಧಿಸಬೇಕಾದರೆ ಫಿಟ್‌ನೆಸ್‌ ಆತ್ಯಗತ್ಯ..
-ಶಿಖರ್‌ ಧವನ್‌

Advertisement

Udayavani is now on Telegram. Click here to join our channel and stay updated with the latest news.

Next