Advertisement
ಶಾಲೆಯ ಮೇಲ್ಛಾವಣಿಗೆ ಅಳವಡಿಸಿರುವ ಮರದ ತೀರುಗಳು ಗೆದ್ದಲು ಹಿಡಿದಿವೆ. ಹೆಂಚುಗಳು ಕುಸಿದು ಬೀಳುತ್ತಿವೆ, ಕಿಟಕಿಯ ಸರಳುಗಳು ಕಳಚಿಕೊಂಡಿವೆ, ಶೌಚಾಲಯ ಅದ್ವಾನಗೊಂಡಿದೆ. ಜೋರು ಮಳೆ ಬಂದರೆ ಕೊಠಡಿಯಲ್ಲಿ ನೀರು ಸೋರುತ್ತದೆ. ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ಈ ಶಾಲೆಯಲ್ಲಿ 200 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ಅಚ್ಚರಿಯ ಸಂಗತಿ.
Related Articles
Advertisement
ಗೆದ್ದಲು ಹಿಡಿದ ಕೊಠಡಿಗಳು: ಶಾಲೆಯಲ್ಲಿರುವ ಹೆಂಚಿನಿಂದ ಕೂಡಿರುವ ಮೂರು ಕೊಠಡಿಗಳು ಗೆದ್ದಲು ಹಿಡಿದಿವೆ. ಹೆಂಚು, ತೀರು, ಬಾಗಿಲು, ಕಿಟಕಿಗಳು ಹಾಳಾಗಿವೆ. ಭಾರೀ ಮಳೆ ಬಂದರೆ ಶಾಲೆ ಕೊಠಡಿಗಳು ಸೋರಲಾರಂಭಿಸುತ್ತವೆ. ಆರ್‌ಸಿಸಿ ಕಟ್ಟಡದಲ್ಲೂ ಮೇಲ್ಛಾವಣಿಯ ಕಾಂಕ್ರೀಟ್ ಕುಸಿದು ಬೀಳಲಾರಂಭಿಸಿದೆ.
ಮಕ್ಕಳು ಪಾರು: ಇತ್ತಿಚೆಗೆ ಸುರಿದ ಭಾರೀ ಮಳೆಯಿಂದ ಆಧಾರ ಕಳಚಿಕೊಂಡ ಹೆಂಚುಗಳು ಒಂದು ಕೊಠಡಿಯೊಳಗೆ ಕುಸಿದು ಬಿದ್ದಿವೆ. ರಾತ್ರಿ ಸಮಯದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಹೆಂಚುಗಳು ಕಳಚಿ ಬಿದ್ದಿವೆ. ಶಾಲಾ ಸಮಯದಲ್ಲಿ ಕುಸಿದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು ಎಂದು ಶಾಲೆಯ ಮುಖ್ಯ ಶಿಕ್ಷಕ ಬಿ.ಶ್ರೀನಿವಾಸಮೂರ್ತಿ ಆತಂಕದಿಂದ ನುಡಿದರು.
ಅ.20ರಿಂದ 26ರವರೆಗೆ ಸುರಿದ ಜಿಡಿ ಮಳೆಯಿಂದ ಗೆದ್ದಲಿನಿಂದ ಕೂಡಿದ್ದ ತೀರು, ಗೋಡೆಗಳು ಹಾಳಾಗಿ ಕುಸಿದಿದ್ದು, ಶಾಲಾ ಕೊಠಡಿಗಳು ಜಲಾವೃತಗೊಂಡು ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಉಂಟಾಗಿತ್ತು. ಶಾಲೆಯಲ್ಲಿರುವ 4, 5 ಮತ್ತು 6ನೇ ತರಗತಿಯ ಶಾಲಾ ಕೊಠಡಿಗಳೂ ಕುಸಿದು ಬೀಳುತ್ತಿದ್ದು, ಯಾವ ಸಂದರ್ಭದಲ್ಲಿ ಏನು ಅನಾಹುತ ಸಂಭವಿಸಬಹುದೋ ಎಂಬ ಆತಂಕ ಸೃಷ್ಟಿಯಾಗಿದೆ.
ಖಾಸಗಿ ಶಾಲೆಗಳಿಗೆ ಸಡ್ಡು: 66 ವರ್ಷಗಳನ್ನು ಪೂರೈಸುತ್ತಿರುವ ಈ ಶಾಲೆ ಉತ್ತಮ ದಾಖಲಾತಿಯನ್ನು ಹೊಂದಿದೆ. 2017-18ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಒಂದರಿಂದ ಏಳನೇ ತರಗತಿಯವರೆಗೆ 200 ಮಕ್ಕಳು ವ್ಯಾಸಂಗ ಮಾಡುತ್ತಿ¨ªಾರೆ. 10 ಮಂದಿ ಶಿಕ್ಷಕ-ಶಿಕ್ಷಕಿಯರು ಕರ್ತವ್ಯ ನಿರ್ವಹಿಸುತ್ತಿದ್ದು, ಉತ್ತಮ ಶಾಲಾ ಪರಿಸರವನ್ನು ಹೊಂದಿದೆ.
ಈ ಶಾಲೆಗೆ ಸುತ್ತಲಿನ ಚಿಂದಗಿರಿದೊಡ್ಡಿ, ಚಿಕ್ಕಮಂಡ್ಯ, ಕೆರೆಯಂಗಳ, ದೇವೇಗೌಡನದೊಡ್ಡಿ ಗ್ರಾಮದಿಂದ ವ್ಯಾಸಂಗಕ್ಕೆ ಮಕ್ಕಳು ಬರುತ್ತಿ¨ªಾರೆ. ಚಿಕ್ಕಮಂಡ್ಯ ಸಮೀಪದÇÉೇ ವಿಶ್ವಮಾನವ ವಿದ್ಯಾಸಂಸ್ಥೆ, ಎಸ್‌ಎಲ್‌ಎನ್, ಉನ್ನತಿ, ಜೆಎಸ್‌ಎಸ್, ಸುಭಾಷ್, ಎಸ್‌ಬಿಇಟಿ, ಐಡಿಯಲ್ ವಿದ್ಯಾಸಂಸ್ಥೆಗಳಿದ್ದರೂ ಅವುಗಳಿಗೆ ಸಡ್ಡು ಹೊಡೆದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುನ್ನಡೆಯುತ್ತಿದೆ.
ಶಾಲೆಯ ಪರಿಸರ, ಮಕ್ಕಳ ಬೌದ್ಧಿಕ ಗುಣಮಟ್ಟ, ಇಲಾಖಾ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಅಜೀಮ್ ಪ್ರೇಮ್ ಜೀ ಫೌಂಡೇಷನ್ ವತಿಯಿಂದ ಯುಎಸ್‌ಎ ತಂಡ, ಪ್ರಥಮ್ ಸಂಸ್ಥೆ ವತಿಯಿಂದ ಯುಎಸ್‌ಎ ಮತ್ತು ಬೆಂಗಳೂರು ತಂಡ ಪರಿಶೀಲನೆ ನಡೆಸಿ ಪ್ರಶಂಸೆ ವ್ಯಕ್ತಪಡಿಸಿವೆ.
ಶಾಲಾ ಮಕ್ಕಳ ಹಿತದೃಷ್ಟಿಯಿಂದ ಹೊಸದಾಗಿ ಮೂರು ಕೊಠಡಿಗಳ ನಿರ್ಮಾಣ, ಒಂದು ಅಕ್ಷರ ದಾಸೋಹ ಕೊಠಡಿ ಹಾಗೂ ಐದು ಕೊಠಡಿಗಳನ್ನು ದೊಡ್ಡ ಪ್ರಮಾಣದಲ್ಲಿ ದುರಸ್ತಿ ಮಾಡಿಸಿಕೊಡಬೇಕಾದ ಅಗತ್ಯವಿದೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ, ತಾಲೂಕು ಪಂಚಾಯಿತಿಗೆ ಮನವಿ ಮಾಡಲಾಗಿದೆ. ದಾನಿಗಳ ಸಹಕಾರ ಪಡೆದು ಶಾಲೆ ಕೊಠಡಿಗಳ ದುರಸ್ತಿಗೆ ಪ್ರಯತ್ನಿಸುತ್ತಿದ್ದೇನೆ.-ಬಿ.ವಿ.ಶ್ರೀನಿವಾಸಮೂರ್ತಿ, ಮುಖ್ಯ ಶಿಕ್ಷಕ