Advertisement

ಚಿರತೆ ಹಾವಳಿ: ಅರಣ್ಯಾಧಿಕಾರಿಗಳ ಭೇಟಿ;  ಬೋನು ಇಡುವ ಭರವಸೆ

02:50 AM Jul 19, 2017 | Team Udayavani |

ಮಡಂತ್ಯಾರು: ಮಚ್ಚಿನ ಮತ್ತು ಸುತ್ತಲಿನ ಕೆಲವು ಗ್ರಾಮಗಳಲ್ಲಿ ಚಿರತೆಯ ಓಡಾಟ ಇದೆ ಎಂಬ ಗ್ರಾಮಸ್ಥರ ಆತಂಕದ ಹಿನ್ನೆಲೆಯಲ್ಲಿ ಮಂಗಳವಾರ ಅರಣ್ಯ ಅಧಿಕಾರಿಗಳು ಹಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ನೆತ್ತರ, ಪಾಲೇದು, ಕೋರೋಡಿ, ಬಂಗೇರ ಕಟ್ಟೆ  ನಿವಾಸಿಗಳಿಂದ ಮಾಹಿತಿ ಪಡೆದರು. ಚಿರತೆ ಕಂಡುಬಂದಲ್ಲಿ ಕೂಡಲೇ ಅರಣ್ಯ ಇಲಾಖೆಗೆ (08256-232146)  ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದರು. ಗೇರುಕಟ್ಟೆ ಉಪ ವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್‌, ಮಡಂತ್ಯಾರು ಉಪ ವಲಯ ಅರಣ್ಯ ಅಧಿಕಾರಿ ಮಾರ್ಕ್‌ ಡಿ’ಸೋಜ, ಮಡಂತ್ಯಾರು ಅರಣ್ಯ ರಕ್ಷಕ ಪರಮೇಶ್ವರ್‌ ಪಟಗಾರ್‌, ಮಚ್ಚಿನ ಅರಣ್ಯ ರಕ್ಷಕ ಸತೀಶ್‌ ಡಿ’ಸೋಜ ಅವರು ಭೇಟಿ ನೀಡಿದ ಅರಣ್ಯ ಇಲಾಖೆಯ ತಂಡದಲ್ಲಿದ್ದರು. 

ಚಿರತೆ ಓಡಾಟದಿಂದ ಗ್ರಾಮಸ್ಥರು ಆತಂಕಗೊಂಡಿರುವ ಬಗ್ಗೆ “ಉದಯವಾಣಿ’ ಜು.17ರಂದು ವಿಶೇಷ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next