Advertisement

ಮುತ್ತಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಚಿರತೆ

04:06 PM Jun 25, 2021 | Team Udayavani |

ಕಲಘಟಗಿ: ಉತ್ತರ ಕನ್ನಡ ಜಿಲ್ಲೆ ಧುಂಡಶಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿನ ಶಿಗ್ಗಾವಿ ತಾಲೂಕಿನ ಮುತ್ತಳ್ಳಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಜಮೀನಿನಲ್ಲಿ ಚಿರತೆ ಅಡ್ಡಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸಿದ್ದಾರೆ.

Advertisement

ಇಲ್ಲಿನ ವಲಯಾರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ಕಾರ್ಯೋನ್ಮುಖರಾಗಿದ್ದು, ತಾಲೂಕಿನ ಕೊನೆಯಂಚಿನ ಬೆಂಡಲಗಟ್ಟಿ-ಬೀರವಳ್ಳಿ ಗ್ರಾಮಗಳ ಜಮೀನುಗಳಿಗೆ ಹೊಂದಿಕೊಂಡ ಅರಣ್ಯ ಪ್ರದೇಶದಲ್ಲಿ ತೀವ್ರ ನಿಗಾ ವಹಿಸಲು ಕಾರ್ಯಾಚರಣೆ ಇಂದಿಗೂ ಮುಂದುವರಿಸಲಾಗಿದೆ. ತಾಲೂಕಿನ ಅರಣ್ಯ ವ್ಯಾಪ್ತಿ ಪ್ರದೇಶದಿಂದ ಕೆಲವೇ ಕಿಲೋಮೀಟರ್‌ ಅಂತರದಲ್ಲಿರುವ ಶಿಗ್ಗಾವಿ ತಾಲೂಕಿನ ಮುತ್ತಳ್ಳಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಜಮೀನಿನಲ್ಲಿ ಚಿರತೆ ಅಡ್ಡಾಡಿರುವ ಕುರಿತು ಅದರ ಹೆಜ್ಜೆ ಗುರುತು ಕಾಣಿಸಿಕೊಂಡಿದೆ.

ಚಿರತೆಯ ಚಲನ ವಲನದ ಕುರಿತು ನಿಗಾ ವಹಿಸಲು ಉಪ ವಲಯಾರಣ್ಯಾ ಧಿಕಾರಿ ನೇತೃತ್ವದಲ್ಲಿ ಇಲಾಖಾ ಸಿಬ್ಬಂದಿಯ ಎರಡು ತಂಡಗಳನ್ನು ರಚಿಸಲಾಗಿದೆ. ತಮ್ಮ ಸಿಬ್ಬಂದಿ ಗಡಿಯಂಚಿನ ಭಾಗದಲ್ಲಿ ಎರಡು ದಿನಗಳಿಂದ ಠಿಕಾಣಿ ಹೂಡಿ ನಿಗಾ ವಹಿಸಿದೆ ಎಂದು ವಲಯಾರಣ್ಯಾ ಧಿಕಾರಿ ಶ್ರೀಕಾಂತ ಪಾಟೀಲ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next