Advertisement

Hunsur: ಕುಪ್ಪೆ ಬಳಿ ಚಿರತೆ ಸೆರೆ; ನಾಗನಹಳ್ಳಿಯಲ್ಲಿ ಚಿರತೆ ಮರಿಗಳು ಪತ್ತೆ

10:45 AM Dec 17, 2023 | Team Udayavani |

ಹುಣಸೂರು: ತಾಲೂಕಿನ ಕುಪ್ಪೆ ಗ್ರಾಮದ ಜಮೀನಿನಲ್ಲಿರಿಸಿದ್ದ ಬೋನಿನಲ್ಲಿ  ಚಿರತೆ ಬಂಧಿಯಾಗಿದೆ.

Advertisement

ಈ ಪ್ರದೇಶದಲ್ಲಿ ಸಾಕು ಪ್ರಾಣಿಗಳಿಗೆ ಕಂಠಕವಾಗಿದ್ದ ಚಿರತೆಯನ್ನು ಸೆರೆ ಹಿಡಿಯಲು ಕುಪ್ಪೆಯ ರೈತರ ಮನವಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಸೆರೆಗೆ ಇಟ್ಟಿದ್ದ ಬೋನಿನಲ್ಲಿ ನಾಯಿ ತಿನ್ನುವ ಆಸೆಯಿಂದ ಒಳಹೊಕ್ಕಿದ್ದ ಸುಮಾರು 3 ವರ್ಷದ ಚಿರತೆ ಬಂಧಿಯಾಗಿದೆ.

ಸೆರೆ ಸಿಕ್ಕಿರುವ ಚಿರತೆಯನ್ನು ಉದ್ಯಾನವನಕ್ಕೆ ಬಿಡಲಾಯಿತೆಂದು ಆರ್.ಎಫ್.ಓ. ನಂದಕುಮಾರ್ ತಿಳಿಸಿದ್ದಾರೆ.

ನಾಗನಹಳ್ಳಿಯಲ್ಲಿ ಚಿರತೆ ಮರಿಗಳು:

ನಗರಕ್ಕೆ ಸಮೀಪದ ನಾಗನಹಳ್ಳಿಯ ನಾಗೇಶ್ ಎಂಬವವರ ಜಮೀನಿನಲ್ಲಿ ಕಳೆದ ಒಂದು ವಾರದಿಂದ ಪುಟಾಣಿ ಚಿರತೆ ಮರಿಗಳು ಓಡಾಡುತ್ತಿದ್ದು, ಸುತ್ತಮುತ್ತಲಿನಲ್ಲಿ ತಾಯಿ ಚಿರತೆ ಇರಬಹುದು ಎಂಬ ಕಾರಣದಿಂದ ಗ್ರಾಮಸ್ಥರಿಗೆ ಜಮೀನಿಗೆ ತೆರಳದಂತಾಗಿದೆ. ಮರಿಯೊಂದಿಗೆ ತಾಯಿ ಚಿರತೆಯನ್ನು ಸೆರೆ ಹಿಡಿದು ಆತಂಕ ದೂರ ಮಾಡುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next