Advertisement

ಬೀದರ್ ತಾಲೂಕಿನಲ್ಲಿ ಚಿರತೆ ಹೆಜ್ಜೆ ಗುರುತು… : ವಿಡಿಯೋದಲ್ಲಿ ಸೆರೆಯಾಯ್ತು ಚಿರತೆ ಸಂಚಲನ

08:23 PM Apr 10, 2022 | Team Udayavani |

ಬೀದರ್ : ತಾಲೂಕಿನ ಮರಖಲ್ ಗ್ರಾಮದ ಸಮೀಪದಲ್ಲಿ ಪಾಳು ಬಿದ್ದಿರುವ ನೀರು ಶುದ್ಧೀಕರಣ ಘಟಕದಲ್ಲಿ ಚಿರತೆ ಇರುವುದು ವಿಡಿಯೋ ಕ್ಯಾಮೆರಾ ಮೂಲಕ ಖಚಿತವಾಗಿದ್ದು, ಹೆಜ್ಜೆ ಗುರುಗಳು ಸಹ ಪತ್ತೆಯಾಗಿವೆ. ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರೆಸಿದ್ದು, ಸದ್ಯ ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.

Advertisement

ಘಟಕದಲ್ಲಿ ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತನ ಮೇಲೆ ಶುಕ್ರವಾರ ಕಾಡು ಪ್ರಾಣಿಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತ್ತು. ನಂತರ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಚಿತ್ರ ಸೆರೆಯಾಗುತ್ತಿದ್ದಂತೆ ಚಿರತೆ ಇರುವುದು ಖಚಿತವಾಗಿತ್ತು. ಡಿಎಫ್‌ಒ ಶಿವಶಂಕರ ಎಸ್. ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಶನಿವಾರದಿಂದ ಚಿರತೆ ಹಿಡಿಯುವ ಕಾರ‍್ಯಾಚರಣೆ ನಡೆಸುತ್ತಿದೆ.

ಒಂದೂವರೆ ವರ್ಷದ ಈ ಚಿರತೆ ಮರಿ ತೆಲಂಗಾಣದಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ. ಶನಿವಾರ ರಾತ್ರಿಯಿಂದ ಸ್ಥಳದಲ್ಲೇ ವಾಸ್ತವ್ಯ ಹೂಡಿರುವ ಅರಣ್ಯ ಇಲಾಖೆ ಸಿಬ್ಬಂದಿ ಬೋಟ್ ಮೂಲಕ ಮಾಂಜ್ರಾ ನದಿ ದಾಟಿ ಚಿರತೆ ಪತ್ತೆಗೆ ಕಾರ್ಯಾಚರಣೆ ನಡೆಸಿದರೂ ಚಿರತೆ ಸಿಕ್ಕಿಲ್ಲ. ಚಿರತೆಯ ಸೆರೆಗಾಗಿ ಪಂಜರ ಈಗಾಗಲೇ ಇಡಲಾಗಿದೆ. ನಂತರದ ಕಾರ್ಯಾಚರಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿರುವ ಶಿವಶಂಕರ ಜನವಾಡಾ ಸುತ್ತಲ ವಿವಿಧ ಗ್ರಾಮಗಳ ಜನರಿಗೆ ಈಗಾಗಲೇ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಯಾರೂ ಮನೆಯ ಹೊರಗಡೆ ಮಲಗಬೇಡಿ. ಮಕ್ಕಳನ್ನು ಹೊರಗೆ ಬಿಡದಂತೆ ತಿಳಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ :ವಿಜಯಪುರ ಜಿಲ್ಲೆಯಲ್ಲಿ ಸಿಡಿಲಿಗೆ ಮೂರು ಜಾನುವಾರುಗಳು ಬಲಿ

Advertisement

Udayavani is now on Telegram. Click here to join our channel and stay updated with the latest news.

Next