ಕೊಳ್ಳೇಗಾಲ: ರಾತ್ರಿ ವೇಳೆ ಬಂದು ಗ್ರಾಮಸ್ಥರು ನಿದ್ದೆಗೆಡಿಸಿದ್ದ ಚಾಲಾಕಿ ಚಿರತೆ ಬೋನ್ ಇಟ್ಟಿದ್ದರೂ ಅದರತ್ತ ಸುಳಿಯದೇ
ಕುರಿಗಳನ್ನು ತಿಂದು ಪರಾರಿಯಾಗಿದೆ. ತಾಲೂಕಿನ ಯಡಕುರಿಯ ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯೇಕ್ಷವಾಗಿರುವುದು ಗ್ರಾಮದ ಸುತ್ತಮುತ್ತಲಿನ ಜನರು ಭಯಭೀತಗೊಳಿಸಿದೆ. ಕಾಡಿನಿಂದ ಗ್ರಾಮಕ್ಕೆ ಬಂದ ಚಿರತೆ ಎರಡು ಕುರಿಯನ್ನು ತಿಂದು ಪರಾರಿಯಾಗಿದೆ.
ಬೆಳಗಾಗುತ್ತಿದ್ದಂತೆ ನೋಡಿದ ಗ್ರಾಮಸ್ಥರು ಎರಡು ಕುರಿಗಳನ್ನು ತಿಂದಿರುವ ಮೂಳೆ ಬಿಸಾಡಿರುವುದನ್ನು ಕಂಡು ಚಿರತೆಯ ಗುರುತನ್ನೇ ಕಂಡು ಭಯಭೀತರಾಗಿದ್ಧಾರೆ.
ರಾತ್ರಿಯ ಹೊತ್ತು ಗ್ರಾಮದಲ್ಲಿ ಓಡಾಡಿರುವ ಚಿರತೆಯನ್ನು ಹಿಡಿಯುವಂತೆ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಯಡ ಕುರಿಯ ಸೇತುವೆ ಬಳಿ ಮತ್ತು ಸತ್ತೇ ಗಾಲ ನಾಲೆಯ ಬಳಿ ಎರಡು ಬೋನ್ ಅಳವಡಿಸಿದ್ದರು.
ಇದನ್ನೂ ಓದಿ: ಶಿಕ್ಷಕರು, ಎಸ್‌ಡಿಎಂಸಿಗೂ ತಿಳಿಸದೇ ಶಾಲೆಯಲ್ಲಿ 10 ಬೃಹತ್ ಮರಗಳ ಹನನ
ಚಿರತೆ ಬೋನಿಗೆ ಬಾರದೆ ನಾಪತ್ತೆಯಾಗಿದ್ದು, ಆಹಾರ ತಿಂದು ಕಾಡಿನ ಕಡೆಗೆ ಹೋಗಿರಬಹುದೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಚಿರತೆ ಸೆರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಎಫ್ಒ ಪ್ರವೀಣ್ ಒಲೆಯರ್ ತಿಳಿಸಿದ್ದಾರೆ.