Advertisement

ಕಡೆಗೂ ಬೋನ್‌ಗೆ ಸೆರೆ ಸಿಕ್ಕ  ಗಂಡು ಚಿರತೆ

02:39 PM Feb 04, 2021 | Team Udayavani |

ಎಚ್‌.ಡಿ.ಕೋಟೆ: ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿ ಕೊಂದು ತಿನ್ನುತ್ತಾ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದ್ದ ಗಂಡು ಚಿರತೆಯೊಂದು ನಾಯಕನಹುಂಡಿ ಬಳಿ ಇರಿಸಿದ್ದ ಬೋನಿನಲ್ಲಿ ಸೆರೆ ಸಿಕ್ಕಿದೆ. ಆಗಾಗ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದ ಚಿರತೆ ಜಮೀನುಗಳಲ್ಲಿ ಪ್ರತ್ಯಕ್ಷಗೊಂಡು, ಜನರನ್ನು ಭಯಭೀತಿಗೊಳಿ ಸಿತ್ತು. ಹೀಗಾಗಿ ಚಿರತೆಯನ್ನು ಸೆರೆ ಹಿಡಿ ಯು ವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.

Advertisement

ಈ ನಡುವೆ, ಸೋಮವಾರ ಹಾಡುಹಗಲಿ ನಲ್ಲೇ ಗರ್ಭಿಣಿ ಮೇಕೆಯೊಂದರ ದೇಹ ಸಿಗಿದು ತಿಂದಿದ್ದ ಚಿರತೆಯ ಉಪಟಳದಿಂದ ಮತ್ತಷ್ಟು ಉದ್ರಿಕ್ತರಾಗ ಜನ ಚಿರತೆ ಸೆರೆ ಹಿಡಿಯಲೇಬೇಕೆಂದು ಪಟ್ಟ ಹಿಡಿದಿದ್ದರು. ಜನರ ದೂರನ್ನಾಧರಿಸಿ ಸೋಮವಾರವಷ್ಟೇ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದ ಮಂಗಳಮ್ಮ, ಕರಿಗೌಡ ಎಂಬುವವರ ಜಮೀನಿನಲ್ಲಿ ಬೋನ್‌ ಇರಿಸಿ, ಅದರೊಳಗೆ ಮೇಕೆ ಮೃತದೇಹ ಇಟ್ಟಿದ್ದರು.

ತಡರಾತ್ರಿಆಹಾರ ಅರಸಿ ಬಂದ 8 ವರ್ಷದ ಗಂಡು ಚಿರತೆ ಬೋನ್‌ನಲ್ಲಿ ಬಂಧಿಯಾಗಿದೆ. ಚಿರತೆ ಸೆರೆ ಸಿಕ್ಕಿದ್ದರಿಂದ ಗ್ರಾಮಸ್ಥರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. ವಲಯ ಅರಣ್ಯಾಧಿಕಾರಿ ಶಾಲಿನಿ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಸೆರೆ ಸಿಕ್ಕ ಚಿರತೆಯನ್ನು ಗೂಡ್ಸ್‌ ಆಟೋವೊಂದರಲ್ಲಿ ಅರಣ್ಯ ಇಲಾಖೆ ಆವರಣಕ್ಕೆ ಸ್ಥಳಾಂತರಿಸಿದ್ದಾರೆ. ಅಲ್ಲಿ ಚಿರತೆಯ ಆರೋಗ್ಯದ ಸ್ಥಿತಿ ಗಮನಿಸಿ ಅದು ಆರೋಗ್ಯವಾಗಿರುವುದನ್ನು ಖಾತರಿಪಡಿಸಿಕೊಂಡ ಬಳಿಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next