Advertisement

ಕಾಚನಕಟ್ಟೆ ಬಳಿ ಚಿರತೆ ಸೆರೆ

07:29 PM Jan 10, 2021 | Team Udayavani |

ಹುಳಿಯಾರು: ಬುಕ್ಕಾಪಟ್ಟಣ ಅರಣ್ಯ ವಲಯ ವ್ಯಾಪ್ತಿಯ ಹುಳಿಯಾರು ಹೋಬಳಿ ಯಳನಾಡು ಸಮೀಪದ ಕಾಚನಕಟ್ಟೆ ಗಂಗಮ್ಮನ ಕೆರೆ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಶುಕ್ರವಾರ ರಾತ್ರಿ ಚಿರತೆಯೊಂದು ಸೆರೆಯಾಗಿದೆ.

Advertisement

ಕಾಚನಕಟ್ಟೆಯ ಗ್ರಾಮದ ಸುತ್ತಮತ್ತ ಹಲವು ದಿನಗಳಿಂದ ಸಾಕುಪ್ರಾಣಿಗಳನ್ನು ಕದ್ದೊಯ್ದು ಕಾಡ ಕೊಡುತ್ತಿದ್ದ ಚಿರತೆ ಗ್ರಾಮಸ್ಥರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿತ್ತು. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆಯವರು ಎರಡು ಕಡೆ ಪಂಜರವನ್ನಿಟ್ಟು ಚಿರತೆಯ ಚಲನವಲನ ಹಾಗೂ ಓಡಾಟದ ಬಗ್ಗೆ ನಿಗಾವಹಿಸುತ್ತಿದ್ದರು. ಎಂದಿನಂತೆ ಆಹಾರ ಅರಸುತ್ತಾ ಬಂದ ಚಿರತೆ ಇಲಾಖೆಯವರು ಇರಿಸಿದ ಬೋನಿಗೆ ಶುಕ್ರವಾರ ರಾತ್ರಿ ಬಿದ್ದಿದೆ.

ಈ ಹಿಂದೆಯೂ ಕೂಡ ಇದೇ ಪ್ರದೇಶದಲ್ಲಿ ಚಿರತೆಯೊಂದು ಅರಣ್ಯ ಇಲಾಖೆಯ ಪಂಜರದಲ್ಲಿ ಬಿದ್ದಿದ್ದು. ಈಗ ಸೆರೆಯಾಗಿರುವ ಚಿರತೆಯು ಗಂಡು ಚಿರತೆಯಾಗಿದ್ದು ಬಿಸಿಲೆ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.

ಇದನ್ನೂ ಓದಿ:ಸಸಿಹಿತ್ಲು ಬೀಚ್‌ನಲ್ಲಿ ನೀರಿಗಿಳಿದ 7 ಮಂದಿ ರಕ್ಷಣೆ: ಓರ್ವ ಸಾವು, ಮತ್ತೋರ್ವ ನೀರು ಪಾಲು

ತಿಪಟೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜೆ.ಜಿ.ರವಿ ರವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಎಚ್‌.ಮಲ್ಲಿಕಾರ್ಜುನಪ್ಪ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಟಿ.ಕಿರಣ್‌, ಅರಣ್ಯ ರಕ್ಷಕರಾದ ದಿಲೀಪ್‌ ಕುಮಾರ್‌, ಅರಣ್ಯ ವೀಕ್ಷಕರಾದ ಸಂತೋಷ್‌ ಸವಣೂರ, ಎ.ಆರ್‌.ಸುರೇಶ, ದಿನಗೂಲಿ ನೌಕರರಾದ ಯಳನಾಡುವಿನ ನಾಗರಾಜು, ಸಂತೋಷ ಕಾರೇಹಳ್ಳಿರವರು ಚಿರತೆ ಸೆರೆಹಿಡಿಯುವ ಕಾರ್ಯ ಚರಣೆಯಲ್ಲಿ ಭಾಗವಹಿಸಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next