ಕೊರಟಗೆರೆ: ಅರಣ್ಯ ಇಲಾಖೆಗೆ ಬಂದ ಖಚಿತ ಮಾಹಿತಿ ಮೇರೆಗೆ, ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈರೇನಹಳ್ಳಿಯ ಗ್ರಾಮದ ನದಿಯ ದಡದಲ್ಲಿ ಮೇಯುತ್ತಿದ್ದ ಮೇಕೆಗಳ ಮೇಲೆ ಚಿರತೆಯೊಂದು ದಾಳಿ ಮಾಡಿರುವ ಘಟನೆ ನಡೆದಿದೆ.
ತಾಲ್ಲೂಕಿನ ಅರಸಾಪುರ ಗ್ರಾಪಂಗೆ ಸೇರಿದ ಬೈರೇನಹಳ್ಳಿ ಗ್ರಾಮದ ವಾಸಿಯಾದ ಅಂಜಿನಮ್ಮ ಕೋಂ ಕರಿತಿಮ್ಮಯ್ಯ ರವರು ಗ್ರಾಮದ ಪಕ್ಕದಲ್ಲಿರುವ ಜಯಮಂಗಲಿ ನದಿಯ ದಡದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದಾಗ, ಏಕಾ ಏಕಿ ಚಿರತೆಯೊಂದು ದಾಳಿ ಮಾಡಿದೆ.
ದಾಳಿ ಮಾಡಿದ ರಭಸಕ್ಕೆ ಒಂದು ಮೇಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು , ಚಿರತೆ ದಾಳಿಯನ್ನು ಕಂಡ ರೈತ ಕರಿತಿಮ್ಮಯ್ಯ ಗಾಬರಿಯಿಂದ ಉಳಿದ ಮೇಕೆಗಳನ್ನು ಓಡಿಸಿದಾಗ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ. ಸತ್ತ ಮೇಕೆಯನ್ನು ವೈದ್ಯಕೀಯ ಪರೀಕ್ಷೆ ನಡೆಸಿದರು.
ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಇ ಪರಿಹಾರದಲ್ಲಿ ದಾಖಲೆ ಮಾಡಿಕೊಂಡು ರೈತನಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಚಿರತೆಯನ್ನು ಸೆರೆಹಿಡಿಯಲು ಗ್ರಾಮದ.ಚಿಕ್ಕನಹಳ್ಳಿ ಕೆರೆಯಲ್ಲಿ ಎರಡು ಭೋನುಗಳನ್ನು ಇಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸುರೇಶ್ ತಿಳಿಸಿದರು.
ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ನಾಗರಾಜು,ಅರಣ್ಯ ರಕ್ಷಕ ಚಾಂದ್ ಪಾಷ ಇದ್ದರು.
ಇದನ್ನೂ ಓದಿ : ವಾಹನ ಸಂಚಾರಕ್ಕೆ ನೆರವಾಗಬೇಕಿದ್ದ ಕೋನ್‌ಗಳಿಂದಲೇ ಸಂಚಕಾರ!