Advertisement

ಬಹುಪಯೋಗಿ ನಿಂಬೆ  ಹಣ್ಣಿನಿಂದ ಏನೆಲ್ಲಾ ಉಪಯೋಗ ಇದೆ ಗೊತ್ತಾ…?

06:14 PM Sep 08, 2022 | Team Udayavani |

ನಿಂಬೆ ಹಣ್ಣು ಯಾರಿಗೇ ತಾನೇ ಇಷ್ಟವಿಲ್ಲ ಹೇಳಿ! ಈ ನಿಂಬೆ ಹಣ್ಣು ಮಿಟಮಿನ್‌ ಸಿ ಯ ಸಮೃದ್ಧ ಆಗರ. ಅಡುಗೆಯಲ್ಲಿ ಆರೋಗ್ಯಕ್ಕೆ , ಸೌಂದರ್ಯಕ್ಕೆ  ಹೀಗೆ ಹತ್ತು ಹಲವು ವಿಧಗಳಲ್ಲಿ  ನಿಂಬೆ ಅತ್ಯುಪಯುಕ್ತ.

Advertisement

ನಿಂಬೆ ಸಾರು:

ಒಂದು ಚಮಚ ಅಕ್ಕಿ, ಒಂದು ಚಮಚ ಗೋಧಿ , ಒಂದು ಗಂಟೆ ನೆನೆಸಿಡಿ. ಬಳಿಕ ಸ್ವಲ್ಪ ತೆಂಗಿನ ತುರಿ, 4 ಹಸಿ ಮೆಣಸು, ಬೆಲ್ಲ, ಉಪ್ಪು, 2 ಚಮಚ ಜೀರಿಗೆ, ಸ್ವಲ್ಪ ಕೊತ್ತಂಬರಿ ಸೊಪ್ಪು ಹೆಚ್ಚಿ ಬೆರಸಿ ಎಲ್ಲವನ್ನು ನೆನೆಸಿದ ಅಕ್ಕಿ ಮತ್ತು ಗೋಧಿಯೊಂದಿಗೆ ನಯವಾಗಿ ಅರೆಯಬೇಕು. ಬಳಿಕ ನೀರು ಸೇರಿಸಿ ಕುದಿಸಿ ಕೊನೆಯಲ್ಲಿ ಒಂದು ನಿಂಬೆರಸ ಬೆರಸಬೇಕು.ತುಪ್ಪದಲ್ಲಿ ಸಾಸಿವೆ , ಕರಿಬೇವು ,ಇಂಗು , ಮೆಣಸಿನ  ಒಗ್ಗರಣೆ ನೀಡಬೇಕು.

ನಿಂಬೆ -ಪುದೀನಾ ಸಾರು

ಎರಡು ಮುಷ್ಠಿಯಷ್ಟು ಪುದೀನಾ ಎಲೆಗಳನ್ನು ತೊಳೆದು ಸಣ್ಣಗೆ ಹೆಚ್ಚಿ ಕಾವಲಿಯಲ್ಲಿ ತುಪ್ಪ 2 ಚಮಚ , ಸ್ವಲ್ಪ ಕೊತ್ತಂಬರಿ,1ಚಮಚ ಜೀರಿಗೆ, 3 ಹಸಿ ಮೆಣಸು , 3 ಚಮಚ ತೆಂಗಿನ ತುರಿ ,ಒಂದು ಚಮಚ ಮೆಂತ್ಯೆ ಹುರಿದು ಬಳಿಕ ಪುದೀನಾ ಎಲೆ ಸೇರಿಸಿ ಬಾಡಿಸಿ ಎಲ್ಲವನ್ನು ರುಬ್ಬಿ ನೀರು ಸೇರಿಸಿ ತೆಳ್ಳಗೆ ಮಾಡಿ ಉಪ್ಪು ಬೆರಸಿ ಕುದಿಸಿ. ಸಾಸಿವೆ, ಕರಿಬೇವು, ಒಣಮೆಣಸು, ಇಂಗಿನ ಒಗ್ಗರಣೆ ಹಾಕಿ ನಂತರ ಅರ್ಧ ನಿಂಬೆ ರಸ ಬೆರಸಿ ಸ್ವಲ್ಪ ಬೆಲ್ಲ ಸೇರಿಸಿರಿ.

Advertisement

ನಿಂಬೆ -ಖರ್ಜೂರ ಚಟ್ನಿ

ಒಂದು ಕಪ್‌ ಖರ್ಜೂರ,ಒಂದು ನಿಂಬೆ ರಸ ಹಿಂಡಿ 5-6 ಮೆಣಸಿನಕಾಯಿ ರುಚಿಗೆ ಉಪ್ಪು ಬೆರಸಿ ಚೆನ್ನಾಗಿ ರುಬ್ಬಿರಿ.  ಈ ಚಟ್ನಿ ರುಚಿಕರವೂ,ಪೌಷ್ಟಿಕವೂ ಹೌದು.

ಆರೋಗ್ಯ ರಕ್ಷಕ ನಿಂಬೆ ಹಣ್ಣು

1. ಬಾಯಿ ಹುಣ್ಣಿಗೆ ನೀರಿನಲ್ಲಿ ನಿಂಬೆ ರಸ ಉಪ್ಪು ಬೆರಸಿ ಬಾಯಿ ಮುಕ್ಕಳಿಸಿದರೆ ಹುಣ್ಣುಗಳು ನಿವಾರಣೆಯಾಗುವುದು.

2. ಕೈಕಾಲಿನ ಚರ್ಮ ಒಡೆದು ಬಿರುಕು ಬಿಟ್ಟಿದರೆ ನಿಂಬೆಯ ಹೋಳಿನಿಂದ ತಿಕ್ಕಿ ಸುಮಾರು 25 ರಿಂದ 30 ನಿಮಿಷದ ಬಳಿಕ ತೊಳೆದು ಹಾಲಿನ ಕೆನೆ ಲೇಪಿಸಿ ತಿಕ್ಕಬೇಕು.

3. ನಿಂಬೆ ರಸ ,ಈರುಳ್ಳಿ ರಸ ಮತ್ತು ಜೇನು ಬೆರಸಿ ಕುಡಿದರೆ ವಾಂತಿ ಹತೋಟಿಗೆ ಬರುತ್ತದೆ.

4. ನೆಗಡಿ, ಕೆಮ್ಮು, ಕಫ‌ ಇರುವಾಗ ಬಿಸಿ ನೀರಿಗೆ ನಿಂಬೆ ಹಿಂಡಿ, ಕರಿ ಮೆಣಸು ಬೆರಸಿ ಕುಡಿಯುವುದರಿಂದ ನೆಗಡಿ, ಕೆಮ್ಮು, ಕಫ‌ ನಿವಾರಣೆಯಾಗುವುದು.

5.ನಿಂಬೆ ರಸ,ಉಪ್ಪು ಬೆರಸಿ ಹಲ್ಲು ವಸಡುಗಳನ್ನು ತಿಕ್ಕುವುದರಿಂದ ಹಲ್ಲು ಶುಭ್ರವಾಗುವುದು.

6.ತುರಿಕೆ ,ಕಜ್ಜಿ ಇರುವ ಭಾಗದಲ್ಲಿ ನಿಂಬೆರಸ,ಅರಸಿನ ಪುಡಿ,ಉಪ್ಪು ಬೆರಸಿ ತಿಕ್ಕಿದರೆ ಪರಿಹಾರ.

7. ಬೊಜ್ಜು  ಕರಗಿಸಲು ಒಂದು ಕಪ್‌ ಬಿಸಿ ನೀರಿಗೆ ಅರ್ಧ ನಿಂಬೆರಸ ಬೆರಸಿ ನಿತ್ಯ ಖಾಲಿ ಹೊಟ್ಟೆಗೆ ಕುಡಿದು ಒಂದು ಗಂಟೆ ಬಳಿಕ ಹೊಟ್ಟೆ ಖಾಲಿ ಬಿಡಬೇಕು.

ಸೌಂದರ್ಯವರ್ಧಕ  ನಿಂಬೆ ಹಣ್ಣು

1. ಪುದೀನಾ ರಸದೊಂದಿಗೆ ನಿಂಬೆರಸ ಬೆರಸಿ ತಿಕ್ಕಿದರೆ ಮೊಡವೆ ನಿವಾರಕ.

2.ನಿಂಬೆರಸವನ್ನು ಕೂದಲಿನ ಬುಡಕ್ಕೆ ಹಚ್ಚಿ ತಿಕ್ಕುವುದರಿಂದ ತಲೆ ಹೊಟ್ಟು ನಿವಾರಣೆಯಾಗುವುದು.

3.ನಿಂಬೆ ರಸ ,ಜೇನು ಬೆರಸಿ ಪಾನಕದಂತೆ ಕುಡಿದರೆ ಚರ್ಮ ,ಕೂದಲುಗಳಿಗೆ ಉತ್ತಮ.

4.ನಿಂಬೆಯ ಸಿಪ್ಪೆಯನ್ನು ಸಣ್ಣಗೆ ಹಚ್ಚಿ ಒಣಗಿಸಿ ಪುಡಿ ಮಾಡಿ ಕಡಲೆ ಹಿಟ್ಟಿನೊಂದಿಗೆ ಬೆರಸಿಡಬೇಕು ಇದನ್ನು ನಿತ್ಯವು ಹಾಲಿನ ಕೆನೊಂದಿಗೆ ಮುಖಕ್ಕೆ ಲೇಪಿಸಿ ಸ್ನಾನ ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ.

5.ಊಟದ ಬಳಿಕ ನಿಂಬೆರಸಯುಕ್ತ ಬಿಸಿ ನೀರಲ್ಲಿ ಕೈ ತೊಳೆದರೆ ಕೈಯ ಜಿಡ್ಡು ನಿವಾರಣೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next