ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಳ್ಳಗೆರೆ ಗ್ರಾಮ ಪಂಚಾಯತಿ, ಮಾಯಮ್ಮನ ಪಾಳ್ಯದ ವೃದಟಛಿ ಕೊರೊನಾ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಶಾಸಕ ಡಿ.ಸಿ.ಗೌರಿಶಂಕರ್ ಸೀಲ್‌ಡೌನ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನ ಬಳ್ಳಗೆರೆ ಗ್ರಾಪಂ ವ್ಯಾಪ್ತಿಯ ಮಾಯಮ್ಮನ ಪಾಳ್ಯ ಗ್ರಾಮದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗ್ರಾಮವನ್ನು ಕಂಟೈನ್‌ಮೆಂಟ್ ಝೋನ್ ಆಗಿ ಪರಿವರ್ತಿಸಿದ್ದು, ಗ್ರಾಮಸ್ಥರಿಗೆ ಅಗತ್ಯ ಪಡಿತರ ಕಿಟ್, ಸ್ಯಾನಿಟೈಸರ್ ಅನ್ನು ವಿತರಿಸಿದರು.
ನಂತರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಕಂಟೈನ್ ಮೆಂಟ್ ಝೋನ್‌ನಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗೆ ವೈಯಕ್ತಿಕವಾಗಿ ಊಟದ ವ್ಯವಸ್ಥೆ ಮಾಡಿಸುವ ಭರವಸೆ ನೀಡಿ, ಗ್ರಾಮಸ್ಥರು ಅಧಿಕಾರಿ ಗಳೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮೊದಲನೇ ಕೊರೊನಾ ಪ್ರಕರಣ ಇದಾಗಿದ್ದು,
ರೋಗ ವನ್ನು ಹಬ್ಬದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡು ವಂತೆ ತಿಳಿಸಿದ ಅವರು ಮಾಯಮ್ಮನ ಪಾಳ್ಯದ ಗ್ರಾಮಕ್ಕೆ ಅಗತ್ಯ ವಸ್ತುಗಳನ್ನು ಪೂರೈಸುವುದಾಗಿ ತಿಳಿಸಿದರು. ಗ್ರಾಮಸ್ಥರಿಗೆ ಊಟ ವ್ಯವಸ್ಥೆ ಅಗತ್ಯವಾದಲ್ಲಿ ಅದಕ್ಕೂ ಸಹಕಾರ ನೀಡುವುದಾಗಿ ಹೇಳಿದರು.
ಕ್ವಾರಂಟೈನ್ ಪ್ರದೇಶಕ್ಕೂ ಭೇಟಿ: ಮಾಯಮ್ಮನ ಪಾಳ್ಯದ ಕೊರೊನಾ ಸೋಂಕಿತ ವೃದಟಛಿನ ಸಂಪರ್ಕದಲ್ಲಿದ್ದ 38 ಮಂದಿಯನ್ನು ಸಿರಿವರದ ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಶಾಸಕ ಗೌರಿಶಂಕರ್ ಭೇಟಿ ನೀಡಿ ಕ್ವಾರಂಟೈನ್ ನಲ್ಲಿರುವವರಿಗೆ ಮಾಡಿರುವ ವ್ಯವಸ್ಥೆಯನ್ನು ಪರಿಶೀಲಿಸಿದರು.
ಮಾಯಮ್ಮನಪಾಳ್ಯ ಗ್ರಾಮಸ್ಥರು ಶಾಸಕ ಡಿ.ಸಿ. ಗೌರಿಶಂಕರ್ ಅವರಿಗೆ ಬಿಪಿ, ಶುಗರ್ ಮಾತ್ರೆಗಳನ್ನು ಕೊಡಿಸುವಂತೆ ಮನವಿ ಮಾಡಿದರು ಇದಕ್ಕೆ ಸ್ಪಂದಿಸಿದ ಶಾಸಕರು ವೈದ್ಯರು ನೀಡಿರುವ ಸಲಹಾ ಚೀಟಿಯನ್ನು ನೀಡಿದರೆ ಔಷಧಿ ವಿತರಿಸುವ ಭರವಸೆ ನೀಡಿದರು. ಡಿಎಚ್‌ಒ ಡಾ.ನಾಗೇಂದ್ರಪ್ಪ, ನೋಡಲ್ ಅಧಿಕಾರಿ ಡಾ.ಕೇಶವರಾಜು, ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ಹಾಲನೂರು ಅನಂತಕುಮಾರ್ ಇದ್ದರು.