Advertisement

ಅಶ್ವಥ್ ನಾರಾಯಣ, ಮಾಧುಸ್ವಾಮಿ ಜವಾಬ್ದಾರಿ ಹುದ್ದೆ ನಿಭಾಯಿಸುವುದು ಸೂಕ್ತವಲ್ಲ: ಸದನ ಸಮಿತಿ

03:00 PM Jan 29, 2021 | Team Udayavani |

ಬೆಂಗಳೂರು: ವಿಶೇಷ ಅಧಿವೇಶನದ ವೇಳೆ ವಿಧಾನ ಪರಿಷತ್ ನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ತನ್ನ ಮಧ್ಯಂತರ ವರದಿ ನೀಡಿದ್ದು, ನಿಯಮ ಬಾಹಿರವಾಗಿ ಉಪ ಸಭಾಪತಿಯವರಿಗೆ ಪೀಠ ಅಲಂಕರಿಸಲು ಪ್ರಚೋದನೆ ನೀಡಿದ ಡಿಸಿಎಂ ಅಶ್ವತ್ಥ ನಾರಾಯಣ ಮತ್ತು ಸಚಿವ ಮಾಧುಸ್ವಾಮಿ ಸರ್ಕಾರದ ಯಾವುದೇ ಜವಾಬ್ದಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವುದು ಸೂಕ್ತವಲ್ಲ ಎಂದಿದೆ.

Advertisement

ಮರಿತಿಬ್ಬೇ ಗೌಡ ನೇತೃತ್ವದ ಸದನ ಸಮಿತಿಯ ತನ್ನ ಮಧ್ಯಂತರ ವರದಿಯಲ್ಲಿ ಕೆಲವು ಶಿಫಾರಸ್ಸುಗಳನ್ನು ಮಾಡಿದೆ. ಘಟನೆಯ ವೇಳೆ ಉಪ ಸಭಾಪತಿಯಾಗಿದ್ದ ಧರ್ಮೇಗೌಡ ಅವರು ನಿಯಮ ಬಾಹಿರವಾಗಿ ಪೀಠ ಅಲಂಕರಿಸದ್ದರು, ಆದರೆ ಇದೀಗ ಮೃತರಾಗಿರುವ ಹಿನ್ನೆಲೆ ವಿಚಾರಣೆ ಕೈ ಬಿಡಲಾಗಿದೆ ಎಂದಿದೆ.

ಇದನ್ನೂ ಓದಿ:ವಿಧಾನ ಪರಿಷತ್ತಿನಲ್ಲಿ ನೀಲಿ ಚಿತ್ರ ವೀಕ್ಷಣೆ? ಸ್ಪಷ್ಟನೆ ನೀಡಿದ ಕಾಂಗ್ರೆಸ್ ಸದಸ್ಯ!

ಉಪ ಸಭಾಪತಿ ನಿಯಮ ಬಾಹಿರ ಪೀಠ ಅಲಂಕರಿಸಲು ಮಾಧುಸ್ವಾಮಿ, ಡಿಸಿಎಂ ಅಶ್ವತ್ಥ ನಾರಾಯಣ ಪ್ರಚೋದನೆ ನೀಡಿದ್ದು ಖಾಸಗಿ ಮಾಧ್ಯಮಗಳ ದೃಶ್ಯ ವೀಕ್ಷಣೆ ಮಾಡಿದಾಗ ಇಬ್ಬರು ಸಚಿವರು ಅಹಿತಕರ ಘಟನೆಗೆ ಮೂಲ ಪ್ರೇರಣೆ ಎಂದು ತಿಳಿದು ಬಂದಿದೆ. ಇವರಿಬ್ಬರ ಅಸಂಸದೀಯ ಕಾನೂನು ಬಾಹಿರ ನಡವಳಿಕೆ ಖಂಡನೀಯ. ಹೀಗಾಗಿ ಮಾಧುಸ್ವಾಮಿ ಮತ್ತು ಅಶ್ವತ್ಥ ನಾರಾಯಣ ಸರ್ಕಾರದ ಯಾವುದೇ ಜವಾಬ್ದಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವುದು ಸೂಕ್ತವಲ್ಲ ಎಂದು ಸದನ ಸಮಿತಿ ಶಿಫಾರಸು ಮಾಡಿದೆ.

ಬಸವರಾಜ ಹೊರಟ್ಟಿ, ಕೆ.ಟಿ ಶ್ರೀಕಂಠೇಗೌಡ, ಗೋವಿಂದರಾಜ್ ಉಪ ಸಭಾಪತಿಯವರನ್ನು ನಿಯಮ ಬಾಹಿರವಾಗಿ ಪೀಠದಲ್ಲಿ ಕೂರಿಸಿದ್ದಾರೆ. ಮೂವರು ಸದಸ್ಯರನ್ನು ಎರಡು ಅಧಿವೇಶನಕ್ಕೆ ನಿರ್ಬಂಧಿಸಬೇಕು ಎಂದಿದೆ.

Advertisement

ಇದನ್ನೂ ಓದಿ: ಪ್ರಯಾಣಿಕರಿಗೆ ಖುಷಿ ಸುದ್ದಿ: ಫೆ.1ರಿಂದ ಮುಂಬೈನಲ್ಲಿ ಸ್ಥಳೀಯ ರೈಲು ಸಂಚಾರ ಶುರು

ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿಯವರು ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದಲೇ ಅಹಿತಕರ ಘಟನೆ ನಡೆಯಲು ಕಾರಣವಾಗಿದೆ. ಅಂತಿಮ ವರದಿ ಸಲ್ಲಿಕೆ ತನಕ ಕಾರ್ಯದರ್ಶಿ ಸ್ಥಾನದಲ್ಲಿ ಮುಂದುವರೆಯಬಾರದು. ಕಾರ್ಯದರ್ಶಿ ಕರ್ತವ್ಯ ನಿರ್ಲಕ್ಷ್ಯತೆ ಬೇಜವಾವ್ದಾರಿ ವರ್ತನೆ ಬಗ್ಗೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಇಲಾಖಾ ವಿಚಾರಣೆ ನಡೆಸಬೇಕು ಎಂದು ಶಿಫಾರಸು ಮಾಡಿಲಾಗಿದೆ.

ಕೋಟ ಶ್ರೀನಿವಾಸ ಪೂಜಾರಿ ಅವರು ಅರುಣ್ ಶಹಾಪುರಗೆ ಕೈ ಸನ್ನೆ ಮೂಲಕ ಪ್ರಚೋದನೆ ನೀಡಿದ್ದಾರೆ. ಹೀಗಾಗಿ ಕೋಟ ಶ್ರೀನಿವಾಸ ಪೂಜಾರಿ ಜವಾಬ್ದಾರಿ ಹುದ್ದೆ ನಿಭಾಯಿಸುವುದು ಸೂಕ್ತವಲ್ಲ. ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಎರಡು ಅಧಿವೇಶನ ಅವಧಿಗೆ, ಎಂ.ಕೆಪ್ರಾಣೇಶ್, ಡಾ.ವೈ.ಎ. ನಾರಾಯಣ ಸ್ವಾಮಿ, ಅರುಣ್ ಶಹಾಪುರ ಅವರನ್ನು ಮುಂದಿನ ಎರಡು ಅವಧಿಯ ಕಾರ್ಯಕಲಾಪಕ್ಕೆ ನಿರ್ಬಂಧಿಸುವಂತೆ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ..! ಪ್ರಯಾಣದ ವೇಳೆ ಕಳ್ಳತನವಾದಲ್ಲಿ ಪರಿಹಾರ

ಸಭಾಪತಿ ಪೀಠದಲ್ಲಿ ನಿಯಮಬಾಹಿರವಾಗಿ ಕುಳಿತಿದ್ದ ಚಂದ್ರಶೇಖರ್ ಪಾಟೀಲ್ ಮುಂದಿನ ಒಂದು ಅಧಿವೇಶನದ ಕಾರ್ಯಕಲಾಪದಲ್ಲಿ ನಿರ್ಬಂಧಿಸುವಂತೆ ಮಧ್ಯಂತರ ವರದಿಯಲ್ಲಿ ಶಿಫಾರಸು ಮಾಡಿದೆ.

ಬಾಗಿಲನ್ನು ಕಾಲಿನಿಂದ ಒದ್ದ ನಜೀರ್ ಅಹ್ಮದ್, ವಿಪಕ್ಷ ಮುಖ್ಯ ಸಚೇತಕ ಎಂ ನಾರಾಯಣಸ್ವಾಮಿ, ಶ್ರೀನಿವಾಸ ಮಾನೆ, ಪ್ರಕಾಶ್ ರಾಥೋಡ್ ಒಂದು ಅವಧಿಗೆ ನಿರ್ಬಂಧಿಸುವಂತೆ ಮರಿತಿಬ್ಬೇಗೌಡ ನೇತೃತ್ವದ ಸದನ ಸಮಿತಿ ಶಿಫಾರಸು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next